
ಮೂಡಬಿದ್ರೆ: ಕನ್ನಡ ಭಾಷೆಯ ಉಳಿವನ್ನೇ ತನ್ನ ಉಸಿರಾಗಿಸಿಕೊಂಡು ಕನ್ನಡ ಭಾಷೆ ಹಾಗೂ ಕನ್ನಡ ಶಿಕ್ಷಕರ ಪರವಾಗಿ ಹತ್ತಾರು ಕನ್ನಡಪರ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾ ಬಂದಿರುವ ಕರುನಾಡ ಕನ್ನಡ ಕಲಾ ಸಿರಿ ಬಳಗದಿಂದ ವೈಬ್ರೆಂಟ್ ಪದವಿ ಪೂರ್ವ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ನಿಕೇತ್ ಮೋಹನ್ ದಾಸ್ ಶೆಟ್ಟಿ ರವರು ಕನ್ನಡ ಶಿಕ್ಷಕರಾಗಿ ಸಲ್ಲಿಸಿರುವಂತಹ ಸೇವೆಯನ್ನು ಗುರುತಿಸಿ ಹಾಗೂ ಕರುನಾಡ ಕನ್ನಡ ಕಲಾ ಸಿರಿ ಬಳಗದ ಸದಸ್ಯತ್ವದ ಆಧಾರದ ಮೇಲೆ 2025-26ನೇ ಸಾಲಿನ ಶಿಕ್ಷಕ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.