
ಬೆಳ್ತಂಗಡಿ: ಅವಿಶ್ವಾಸ ಗೊತ್ತುವಳಿಗೆ ಹಿನ್ನಲೆಯಿಂದ ಪದಚ್ಯುತಿಗೊಂಡು ಇಳಂತಿಲ ಗ್ರಾಮ ಪಂಚಾಯತ್ ಅಧ್ಯಕ್ಷ ತಿಮ್ಮಪ್ಪ
ಗೌಡರವರಿಂದ ತೆರವಾಗಿರುವ ಅಧ್ಯಕ್ಷ ಸ್ಥಾನಕ್ಕೆ ಎರಡನೇ ವಾರ್ಡಿನ ಬಿಜೆಪಿ ಬೆಂಬಲಿತ ಸದಸ್ಯ ವಸಂತ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇಳಂತಿಲ ಗ್ರಾಮಪಂಚಾಯತ್ ಅಧ್ಯಕ್ಷ ಸ್ಥಾನ ಸಾಮಾನ್ಯ ಕ್ಷೇತ್ರಕ್ಕೆ ಮೀಸಲಾಗಿದ್ದು, ಎ.16 ರಂದು ಚುನವಾಣೆ ನಡೆಯಿತು. ಚುನಾವಣಾಧಿಕಾರಿಯಾಗಿ ಬೆಳ್ತಂಗಡಿ ತಹಶಿಲ್ದಾರ್ ಪೃಥ್ವಿ ಸಾನಿಕಂ ಚುನವಾಣ ಪ್ರಕ್ರಿಯೆ ನಡೆಸಿಕೊಟ್ಟರು. ಉಪಚುನಾವಣಾಧಿಕಾರಿ ಕೊರಗಪ್ಪ ಹೆಗ್ಡೆ ಹಾಗೂ ಪಿಡಿಒ ಸುಮಯ್ಯ ಸಹಕರಿಸಿದರು. ಪೂರ್ವಾಹ್ನ 10ರಿಂದ 11ರವರೆಗೆ ನಾಮಪತ್ರ ಸಲ್ಲಿಕೆಗೆ, ಅಪರಾಹ್ನ 1 ರಿಂದ 1.೦5 ರವರೆಗೆ ನಾಮಪತ್ರ ಪರಿಶೀಲನೆ, ಅಪರಾಹ್ನ ೧.೦೫ರಿಂದ ೧.೧೫ ಗಂಟೆವರೆಗೆ ನಾಮಪತ್ರ ಹಿಂಪಡೆಯಲು ಅವಕಾಶ ನೀಡಲಾಗಿತ್ತು.