April 21, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ ಅನುಗ್ರಹ ಶಾಲೆಯಲ್ಲಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳನ್ನು ಕರೆ ತಂದು ಮಹಜರು

ಬೆಳ್ತಂಗಡಿ: ಉಜಿರೆ ಅನುಗ್ರಹ ಶಾಲೆಯಲ್ಲಿ ಸಿಸಿ ಕ್ಯಾಮರದ ಎನ್.ವಿ.ಆರ್ ಕಳ್ಳತನ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬೆಳ್ತಂಗಡಿ ಪೊಲೀಸರು ಜೈಲಿನಿಂದ ಬಾಡಿ ವಾರೆಂಟ್ ಮೂಲಕ ಕರೆತಂದು ಮಹಜರು ನಡೆಸಿದ್ದಾರೆ.

ಉಜಿರೆ ಅನುಗ್ರಹ ಶಾಲೆಯಲ್ಲಿ ಮಾ.೩ರಂದು ರಾತ್ರಿ ಚೂಡಿದಾರ ಡ್ರೆಸ್ ಹಾಕಿಕೊಂಡು ನುಗ್ಗಿ ಸಿಸಿ ಕ್ಯಾಮರದ ಎನ್.ವಿ.ಆರ್ ಕಳ್ಳತನ ಮಾಡಿದ ಪ್ರಕರಣ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಮಾ.೪ರಂದು ಪ್ರಕರಣ ದಾಖಲಾಗಿ ತನಿಖೆಯಲ್ಲಿತ್ತು. ಉಜಿರೆ ಕಳ್ಳತನ ಪ್ರಕರಣದ ಬಳಿಕ ಆರೋಪಿಗಳಿಬ್ಬರು ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಕಳ್ಳತನ ಪ್ರಕರಣದಲ್ಲಿ ಕಾರು ಸಮೇತ ಪೊಲೀಸರ ಬಲೆಗೆ ಬಿದ್ದಿದ್ದರು. ಅವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಉಜಿರೆ ಶಾಲೆಯ ಕಳ್ಳತನ ಪ್ರಕರಣ ಬೆಳಕಿಗೆ ಬಂದಿತ್ತು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಉಡುಪಿ ಜಿಲ್ಲೆಯ ಹಿರಿಯಡ್ಕ ಜೈಲಿಗೆ ಕಳುಹಿಸಲಾಗಿತ್ತು.

ಇಬ್ಬರು ಆರೋಪಿಗಳಾದ ಉಡುಪಿ ಜಿಲ್ಲೆಯ ನಾವೂಂದ ನಿವಾಸಿ ಗರುಡ ಗ್ಯಾಂಗ್ ಸದಸ್ಯ ರಿಝ್ವಾನ್ ಯಾನೆ ರಿಲ್ವಾನ್ (೨೪ವ) ಮತ್ತು ಉಡುಪಿ ಜಿಲ್ಲೆಯ ಬೈಂದೂರಿನ ಹರ್ಷಿತ್ ಯಾನೆ ಅವಿನಾಶ್ ದೊಂಡ್ರೆ (೨೫ವ) ಎಂಬವರನ್ನು ಉಡುಪಿಯ ಹಿರಿಯಡ್ಕ ಜೈಲಿನಿಂದ ಬಾಡಿ ವಾರೆಂಟ್ ಮೂಲಕ ಬೆಳ್ತಂಗಡಿ ಪೊಲೀಸರು ಎ.೧೫ರಂದು ಬೆಳಗ್ಗೆ ಕರೆತಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಒಂದು ದಿನ ಪೊಲೀಸ್ ಕಸ್ಟಡಿಗೆ ಪಡೆದುಕೊಂಡರು. ಬಳಿಕ ಉಜಿರೆ ಅನುಗ್ರಹ ಶಾಲೆಯಲ್ಲಿ ಬೆಳ್ತಂಗಡಿ ಸಬ್ ಇನ್ಸೆ÷್ಪಕ್ಟರ್ ಯಲ್ಲಪ್ಪ ನೇತೃತ್ವದ ಪೊಲೀಸರ ತಂಡ ಮಹಜರು ನಡೆಸಿ ವಾಪಸ್ ಸಂಜೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಇಬ್ಬರನ್ನು ಉಡುಪಿ ಹಿರಿಯಡ್ಕ ಜೈಲಿಗೆ ಕಳುಹಿಸಲಾಗಿದೆ.

Related posts

ಉಜಿರೆ: ಆಟೋರಿಕ್ಷಾ ಜಖಂ ಆದ ವಿಚಾರದಲ್ಲಿ ಪರಿಹಾರಕ್ಕಾಗಿ ಅನುಮತಿ ಪಡೆಯದೆ ಸಾರ್ವಜನಿಕ ರಸ್ತೆಯಲ್ಲಿ ಕೂತು ವಾಹನ ಸಂಚಾರಕ್ಕೆ ತಡೆಒಡ್ಡಿ ಜನಸಂಚಾರಕ್ಕೆ ಅಡ್ಡಿ ಉಂಟುಮಾಡಿದವರ ವಿರುದ್ಧ ಪ್ರಕರಣ ದಾಖಲು

Suddi Udaya

ವರದಾ ಪುರುಷೋತ್ತಮ ನಾಯಕ್ ಮತ್ತು ಮಕ್ಕಳು ನಿಮಿ೯ಸಿ ಕೊಟ್ಟ ಸಾವ೯ಜನಿಕ ಬಸ್ ತಂಗುದಾಣ ಪಂಚಾಯತ್ ಗೆ ಹಸ್ತಾಂತರ

Suddi Udaya

ಜ.31-ಫೆ.4: ತೆಂಕಕಾರಂದೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ

Suddi Udaya

ಆ.1: ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದಡಿ ತಾಲೂಕಿನ 5000 ಗಿಡಗಳ ವಿತರಣಾ ಕಾರ್ಯಕ್ರಮ

Suddi Udaya

ಮಚ್ಚಿನ ಗ್ರಾಮದ ಕುತ್ತಿನ ನಿವಾಸಿ ಧರ್ಣಪ್ಪ ಮೂಲ್ಯ ನಿಧನ

Suddi Udaya

ಶಿಬಾಜೆ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ಯುವತಿಯ ಮನೆಗೆ ಬಿಜೆಪಿ ಮಂಡಲ ಯುವಮೋರ್ಚಾದ ಅಧ್ಯಕ್ಷ ಶಶಿರಾಜ್ ಶೆಟ್ಟಿ ಭೇಟಿ

Suddi Udaya
error: Content is protected !!