ಕೊಕ್ಕಡ: ಸಮಾಜದಲ್ಲಿ ಶಿಕ್ಷಣವಂತರು ಅನೇಕರು ಇರಬಹುದು ಆದರೆ ಸಂಸ್ಕಾರವAತರು ಸಿಗುವುದು ವಿರಳ. ಶ್ರೀರಾಮ ವಿದ್ಯಾಸಂಸ್ಥೆಯಂತಹ ಸಂಸ್ಥೆಗಳು ಮಕ್ಕಳನ್ನು ಸಂಸ್ಕಾರಯುಕ್ತ ಮಕ್ಕಳಾಗಿ ಪರಿವರ್ತಿಸುತ್ತಿರುವುದು ಶ್ಲಾಘನೀಯ ಎಂದು ಬೆಳ್ತಂಗಡಿ ಸಂಸ್ಕಾರ ಭಾರತೀಯ ಅಧ್ಯಕ್ಷ ಸಂಪತ್ ಬಿ. ಸುವರ್ಣ ಏ.14 ರಂದು ಕೊಕ್ಕಡ ಸೇವಾ ಮಂದಿರದಲ್ಲಿ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಸೌತಡ್ಕ, ಶ್ರೀರಾಮ ಸೇವಾ ಟ್ರಸ್ಟ್ ಕೊಕ್ಕಡ ಹಾಗೂ ಶ್ರೀರಾಮ ವಿದ್ಯಾಸಂಸ್ಥೆ ಪಟ್ಟೂರು ಸಹಯೋಗದಲ್ಲಿ ಐದರಿಂದ ಒಂಬತ್ತನೇ ತರಗತಿ ವಿದ್ಯಾರ್ಥಿಗಳಿಗೆ ನಡೆದ ಬೇಸಿಗೆ ಶಿಬಿರದ ಸಮಾರೋಪ ಭಾಷಣ ಮಾಡಿದರು.
ಮುಖ್ಯ ಭಾಷಣಕಾರರಾಗಿ ಮಾತನಾಡಿದ ಸುಳ್ಯದ ಕೆವಿಜಿ ಡೆಂಟಲ್ ಕಾಲೇಜಿನ ಪ್ರಾಧ್ಯಾಪಕ ಡಾ. ಮನೋಜ್, ಪೋಷಕರಿಂದು ಇಂಗ್ಲೀಷ್ ವ್ಯಾಮೋಹಕ್ಕೆ ಒಳಗಾಗಿ ಮಕ್ಕಳು ತಮ್ಮ ಮಾತೃಭಾಷೆಯನ್ನೇ ಮರೆಯುವಂತೆ ಮಾಡುತ್ತಿದ್ದಾರೆ. ತಮ್ಮ ಶ್ರಮ ಹಾಗೂ ತಾವು ಪಡುವ ಕಷ್ಟ ಮಕ್ಕಳಿಗೆ ಗೊತ್ತಾಗಬಾರದು ಎನ್ನುವ ಪ್ರೀತಿಯಲ್ಲಿ ಪೋಷಕರಿಂದ ಮಕ್ಕಳನ್ನು ಬೆಳೆಸುತ್ತಿದ್ದು, ಮಕ್ಕಳಿಗೆ ಕಷ್ಟದ ಅರಿವೇ ಇಲ್ಲದಂತಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ನ ಕಾರ್ಯದರ್ಶಿ ಕುಶಾಲಪ್ಪ ಗೌಡ ಪೂವಾಜೆ ವಹಿಸಿದ್ದರು.
ಈ ಸಂದರ್ಭ ಶಿಬಿರದಲ್ಲಿ ಪಾಲ್ಗೊಂಡ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಬಳಿಕ ಶಿಬಿರದಲ್ಲಿ ಸಹಕರಿಸಿದ ಶ್ರೀರಾಮ ವಿದ್ಯಾಸಂಸ್ಥೆಯ ಎಲ್ಲ ಶಿಕ್ಷಕ ಶಿಕ್ಷಕಿಯರಿಗೂ ಗೌರವಾರ್ಪಣೆ ಸಲ್ಲಿಸಲಾಯಿತು. ಶ್ರೀ ರಾಮ ಸೇವಾ ಟ್ರಸ್ಟ್ ನ ಅಧ್ಯಕ್ಷ ಬಾಲಕೃಷ್ಣ ನೈಮಿಷ ಸ್ವಾಗತಿಸಿ, ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ನ ಅಧ್ಯಕ್ಷ ಕೃಷ್ಣ ಭಟ್ ಹಿಟ್ಟಿಲು ಪ್ರಾಸ್ತಾವಿಕವಾಗಿ ನುಡಿದರು. ಶ್ರೀರಾಮ ವಿದ್ಯಾಸಂಸ್ಥೆಯ ಮುಖ್ಯೋಪಾಧ್ಯಾಯ ಚಂದ್ರಶೇಖರ ಶೇಟ್ ವಂದಿಸಿದರು. ಶಿಬಿರಾರ್ಥಿ ಯೋಕ್ಷ ವೈಯಕ್ತಿಕ ಗೀತೆ ಹಾಡಿದರು. ಕೇಶವ ಹಳ್ಳಿಂಗೇರಿ ಕಾರ್ಯಕ್ರಮ ನಿರೂಪಿಸಿದರು.
ಪಟ್ಟೂರು ಶ್ರೀರಾಮ ವಿದ್ಯಾ ಸಂಸ್ಥೆಯ ಮುಖ್ಯೋಪಾಧ್ಯಾಯ ಚಂದ್ರಶೇಖರ ಶೇಟ್ ಮಾರ್ಗದರ್ಶನದಂತೆ ಶಿಬಿರ ಸಂಚಾಲಕರಾಗಿ ಸ್ವಾತಿ ಕೆ.ವಿ, ಸುಪ್ರೀತಾ ಎ, ಶ್ವೇತ ಕುಮಾರಿ ಎಂ. ಪಿ, ಭವ್ಯ ಪಿ. ಡಿ, ಶುಭಲಕ್ಷ್ಮಿ ಜವಾಬ್ದಾರಿ ನಿರ್ವಹಿಸಿದರು.