ಬೆಳ್ತಂಗಡಿ : ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್ -1(ಕಾನೂನು ಸುವ್ಯವಸ್ಥೆ) ಖಾಲಿಯಿದ್ದ ಹುದ್ದೆಗೆ ಸಬ್ ಇನ್ಸ್ಪೆಕ್ಟರ್-2 (ಅಪರಾಧ) ಆಗಿದ್ದ ಸಮರ್ಥ ಆರ್ ಗಾಣಿಗೇರಾ ಅವರನ್ನು ವರ್ಗಾವಣೆ ಮಾಡಿ ಪಶ್ಚಿಮ ವಲಯ ಐಜಿಪಿಯವರು ಆದೇಶ ಮಾಡಿದ್ದಾರೆ.
ಸಮರ್ಥ ಆರ್ ಗಾಣಿಗೇರಾ ಅವರು ಕಳೆದ ಒಂದುವರೇ ವರ್ಷದಿಂದ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್ -2(ಅಪರಾಧ) ಅಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರು ಏ.17 ರಂದು ಸಬ್ ಇನ್ಸ್ಪೆಕ್ಟರ್ -1 (ಕಾನೂನು ಸುವ್ಯವಸ್ಥೆ) ಅಗಿ ಅಧಿಕಾರ ಸ್ವೀಕರಿಸಿಕೊಂಡರು. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಹಲವು ಅಪರಾಧ ಪ್ರಕರಣವನ್ನು ಭೇದಿಸಿದ ಹೆಗ್ಗಳಿಕೆ ಹಿರಿಯ ಅಧಿಕಾರಿಗಳಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಜನಸ್ನೇಹಿ ಪೊಲೀಸ್ ಅಧಿಕಾರಿಯಾಗಿ ಸಾರ್ವಜನಿಕರೊಂದಿಗೆ ಉತ್ತಮ ಅಧಿಕಾರಿಯಾಗಿಯಾಗಿದ್ದಾರೆ ಎಂಬ ಹೆಸರನ್ನು ಸಮರ್ಥ ಆರ್ ಗಾಣಿಗೇರಾ ಅವರು ಪಡೆದುಕೊಂಡಿದ್ದಾರೆ.