ಪಡಂಗಡಿ : ಫ್ರೆಂಡ್ಸ್ ಮಲ್ಲಿಪ್ಪಾಡಿ ಆಯೋಜನೆಯಲ್ಲಿ ಮಲ್ಲಿಪಾಡಿ ಶ್ರೀ ಸದಾಶಿವ ದೇವಸ್ಥಾನ ಪಡಂಗಡಿ ಮೈದಾನದಲ್ಲಿ ಮೇ 10 ರಂದು ಜರಗಲಿರುವ ಹೊನಲು ಬೆಳಕಿನ ಲೀಗ್ ಮಾದರಿಯ ವಾಲಿಬಾಲ್ ಪಂದ್ಯಾಟದ ಆಮಂತ್ರಣ ಪತ್ರಿಕೆಯ ನ್ನು ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಲ. ದೇವದಾಸ್ ಶೆಟ್ಟಿ ಬಿಡುಗಡೆ ಗೊಳಿಸಿದರು.
ಈ ಸಂದರ್ಭದಲ್ಲಿ ಕ್ರೀಡಾಕೂಟದ ಅಧ್ಯಕ್ಷರಾದ ರೋಹಿತ್, ರವಿ ಕುಲಾಲ್, ಕಾರ್ಯದರ್ಶಿ ಸುನಿಲ್ ಗೌಡ, ಪ್ರಕಾಶ್ ನಾಯ್ಕ್, ಸುಜಯ್ ಗೌಡ ಉಪಸ್ಥಿತರಿದ್ದರು.