ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕೊಯ್ಯೂರು ಕೊಯಿರೊಟ್ಟು ಗುಳಿಗ ದೈವದ ನೂತನ ಕಟ್ಟೆ, ಗಗ್ಗರ ಸೇವೆ

ಮಡಂತ್ಯಾರು : ಕೊಯ್ಯೂರು ಕೊಯಿರೊಟ್ಟು ಗುಳಿಗ ಸಾನಿಧ್ಯದಲ್ಲಿ ನಿರ್ಮಾಣಗೊಂಡಿರುವ ನೂತನ ಮಂಟಪ ಹಾಗೂ ರಾತ್ರಿ ದೈವದ ಗಗ್ಗರ ಸೇವೆ ವರ್ಷವಾಧಿ ಅಗೇಲು ಸೇವೆ ಮೇ.11 ರಂದು ನಡೆಯಿತು.

ಕೊಯ್ಯೂರು ಬ್ರಹ್ಮ ಶ್ರೀ ವೇ। ಮೂ। ನಂದಕುಮಾರ ತಂತ್ರಿಗಳು ನೇತೃತ್ವದಲ್ಲಿ ಶ್ರೀ ಗುಳಿಗ ಪ್ರತಿಷ್ಠಾ ಮಹೋತ್ಸವ-ಕಲಶಾಭಿಷೇಕ ಪ್ರಸನ್ನ ಪೂಜೆ, ಮಹಾ ಪೂಜೆ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.
ಬೆಳಾಲು ಶ್ರೀ ‍ಕ್ಷೇತ್ರ ಆರಿಕೋಡಿ ಧರ್ಮದರ್ಶಿಗಳಾದ ಹರೀಶ್, ಬೆಂಗಳೂರು ಉದ್ಯಮಿ ಕಿರಣ್ ಚಂದ್ರ ಡಿ.ಪುಷ್ಪಗಿರಿ, ಕೊಯ್ಯೂರು ದೇವಸ್ಥಾನದ ಪ್ರಧಾನ ಅರ್ಚಕರಾದ ಕೆ.ಅಶೋಕ ಕುಮಾರ್ ಭಾಂಗಿಣ್ಣಾಯ, ಕೊಯರೊಟ್ಟು ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಕೆ. ಬಿ. ಹರೀಶ್ಚಂದ್ರ ಬಲ್ಲಾಳ್, ಆಡಳಿತ ಮುಖ್ಯಸ್ಥರು ಸಂಜೀವ ಗೌಡ ನೋಡಬೈಲು,ಅಧ್ಯಕ್ಷರು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರವೀಣ್ ಗೌಡ, ಕೋಶಾಧಿಕಾರಿ ಡೀಕಯ್ಯ ಪೂಜಾರಿ, ಕಾರ್ಯದರ್ಶಿ ವಿನಯ ಪ್ರಸಾದ್,
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಯೋಜನಾಧಿಕಾರಿ ದುಗ್ಗಪ್ಪ ಗೌಡ ಕೊಯ್ಯೂರು,
ಕೊಯ್ಯೂರು ಗ್ರಾಮ ಪಂಚಾಯತ್ ಸದಸ್ಯರಾದ ಯಶವಂತ ಗೌಡ ಪುರಿಯಾಳ, ಸಮಿತಿ ಸದಸ್ಯರಾದ ಯತೀಶ್ ಗೌಡ, ದಡ್ಡು ಹಾಗೂ ಭಕ್ತರು ಉಪಸ್ಥಿತರಿದ್ದರು.

ಸನ್ಮಾನ: ಉದ್ಯಮಿ ಕಿರಣ್ ಚಂದ್ರ ಡಿ. ಪುಷ್ಪಗಿರಿ, ಬೆಳ್ತಂಗಡಿ ನೋಟರಿ ವಕೀಲರಾದ ಶ್ರೀನಿವಾಸ ಗೌಡ ಬೆಳಾಲು ಇವರನ್ನು ಸನ್ಮಾನಿಸಲಾಯಿತು.

Related posts

ಅಡಿಕೆ ಕ್ಷೇತ್ರದ ದಿಗ್ಗಜರಿಂದ ನಿಡ್ಲೆಯ ಅಗ್ರಿಲೀಫ್ ಗೆ ಭೇಟಿ: ಎಐ ಆಧಾರಿತ ಅಡಿಕೆ ಗ್ರೇಡಿಂಗ್ ತಂತ್ರಜ್ಞಾನಕ್ಕೆ ಮೆಚ್ಚುಗೆ

Suddi Udaya

ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ

Suddi Udaya

ಇಂದು (ಜ.30) ಸಂಜೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರರವರು ಶ್ರೀ ಕ್ಷೇತ್ರ ಧರ್ಮಸ್ಥಳ ಭೇಟಿ: ಪುಂಜಾಲಕಟ್ಟೆಯಿಂದ ಧರ್ಮಸ್ಥಳದವರೆಗೆ ಬೈಕ್ ರ್‍ಯಾಲಿ ಮೂಲಕ ಸ್ವಾಗತ

Suddi Udaya

ದೆಹಲಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರನ್ನು ಭೇಟಿ ಮಾಡಿದ ಕ್ಯಾಪ್ಟನ್ ಬ್ರಿಜೇಶ್ ಚೌಟ

Suddi Udaya

ಧರ್ಮಸ್ಥಳವನ್ನು ಏಕ ಬಳಕೆಯ ಪ್ಲಾಸ್ಟಿಕ್ ಮುಕ್ತ ಗ್ರಾಮವೆಂದು ಸಚಿವ ಈಶ್ವರ ಖಂಡ್ರೆಯವರಿಂದ ಅಧಿಕೃತ ಘೋಷಣೆ

Suddi Udaya

ಭಾರತೀಯ ಜನತಾ ಪಾರ್ಟಿಯ ಮೂವರು ಪಕ್ಷದ ಸದಸ್ಯತ್ವದಿಂದ ಅಮಾನತು: ನೆರಿಯ ಗ್ರಾ.ಪಂ ಅಧ್ಯಕ್ಷೆ ಸೇರಿ ಇಬ್ಬರು ಸದಸ್ಯರಿಗೆ ಗೆಟ್ ಪಾಸ್ ನೀಡಿದ ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷರು

Suddi Udaya
error: Content is protected !!