ಲಾಯಿಲ: ಇಲ್ಲಿಯ ಲಾಯಿಲಬೈಲು ಎಂಬಲ್ಲಿ ಹರಿಯುತ್ತಿರುವ ತೋಡಿಗೆ ಸಗಣಿ ನೀರು ಬಿಡುತ್ತಿದ್ದು, ಜಲಚರಗಳಿಗೆ ಅಪಾಯ ಉಂಟಾಗಿದೆ.
ಲಾಯಿಲಬೈಲು ತೋಡಿನ ಪರಿಸರದ ಹಟ್ಟಿ ತೊಳೆದ ನೀರನ್ನು ನೇರವಾಗಿ ತೋಡಿಗೆ ಬಿಡಲಾಗುತ್ತದೆ. ಇದರಿಂದಾಗಿ ತೋಡಿನಲ್ಲಿ ನೀರಿನ ಬದಲಾಗಿ ಸಗಣಿ ನೀರು ಹರಿಯುವಂತಾಗಿದೆ. ಇದರಿಂದಾಗಿ ಜಲಚರಗಳ ಜೀವಕ್ಕೆ ಅಪಾಯ ಉಂಟಾಗಿದೆ. ಈ ಹಿಂದೆ ಸಂಬAಧಿಸಿದ ಇಲಾಖೆಗಳಿಗೆ ದೂರು ನೀಡಿದರೂ ಇದೀಗ ಮತ್ತೆ ಸಗಣಿ ನೀರು ಬಿಟ್ಟು ನೀರನ್ನು ಮಲಿನಗೊಳಿಸಲಾಗುತ್ತಿದೆ. ಇದರ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.