25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಎ.19: ಅರಿಕೆಗುಡ್ಡೆ ಶ್ರೀ ವನದುರ್ಗಾ ಸಭಾಭವನ ಉದ್ಘಾಟನೆ

ಅರಸಿನಮಕ್ಕಿ: ಶ್ರೀ ವನದುರ್ಗಾ ದೇವಸ್ಥಾನ ಅರಿಕೆಗುಡ್ಡೆಯಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ವನದುರ್ಗಾ ಸಭಾಭವನದ ಉದ್ಘಾಟನಾ ಸಮಾರಂಭವು ಎ.೧೯ ರಂದು ಜರುಗಲಿದೆ.


ನೂತನ ಸಭಾಭವನದ ಲೋಕಾರ್ಪಣೆ ನಡೆದು ನಂತರ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಸಂಪುಟ ನರಸಿಂಹ ಮಠ ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿಯವರು ದಿವ್ಯ ಆಶೀರ್ವಚನ ನೀಡಲಿರುವರು.


ಮುಖ್ಯ ಅತಿಥಿಗಳಾಗಿ ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕ ಕೆ. ಪ್ರತಾಪ್ ಸಿಂಹ ನಾಯಕ್, ಖ್ಯಾತ ಜ್ಯೋತಿಷಿ ವೇ.ಮೂ. ಮಧ್ವರಾಯ ಭಟ್ ಮಂಗಳೂರು, ಖ್ಯಾತ ಪುರೋಹಿತರು ಹಾಗೂ ಜ್ಯೋತಿಷ್ಯರಾದ ಡಾ| ಪ್ರಹ್ಲಾದ್ ತಾಮ್ಹಣ್‌ಕರ್, ಉದ್ಯಮಿ ಕಿರಣ್‌ಚಂದ್ರ ಪುಷ್ಪಗಿರಿ, ಅರಸಿನಮಕ್ಕಿ ಗ್ರಾ..ಪಂ. ಉಪಾಧ್ಯಕ್ಷ ಸುಧೀರ್ ಕುಮಾರ್ ಎಂ.ಎಸ್, ಅರಿಕೆಗುಡ್ಡೆ ವನದುರ್ಗ ಸೇವಾ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಪಿಲಿಕಬೆ ಉಪಸ್ಥಿತರಿರುವರು.

Related posts

ಶ್ರೀ ಮಹಮ್ಮಾಯಿ ಮರಾಟಿ ಆರಾಧನಾ ಸೇವಾ ಸಮಿತಿ ವಾರ್ಷಿಕ ಮಹಾಸಭೆ: ಪದಾಧಿಕಾರಿಗಳ ಆಯ್ಕೆ

Suddi Udaya

ನಾರಾವಿ ಗ್ರಾ.ಪಂ ಮಾಜಿ‌ ಸದಸ್ಯ ಕುತ್ಲೂರು ರಾಮಚಂದ್ರ ಭಟ್ ನಿಧನ

Suddi Udaya

ಉಜಿರೆ ಎಸ್.ಡಿ.ಎಮ್ ಸಮೂಹ ಶಿಕ್ಷಣ ಸಂಸ್ಥೆಗಳಿಂದ ಶಿಕ್ಷಕರಿಗೆ ‘ಅನುಭವ ಕಲಿಕೆ’ ಕಾರ್ಯಾಗಾರ

Suddi Udaya

ನಾಲ್ಕೂರು: ತೋಟದಪಲ್ಕೆ ನಿವಾಸಿ ಭಾನುಮತಿ ನಿಧನ

Suddi Udaya

ವಾಣಿ ಪದವಿ ಪೂರ್ವ ಕಾಲೇಜಿನ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ

Suddi Udaya

ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನಕ್ಕೆ ವಿ.ಪ. ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಭೇಟಿ

Suddi Udaya
error: Content is protected !!