ಅರಸಿನಮಕ್ಕಿ: ಶ್ರೀ ವನದುರ್ಗಾ ದೇವಸ್ಥಾನ ಅರಿಕೆಗುಡ್ಡೆಯಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ವನದುರ್ಗಾ ಸಭಾಭವನದ ಉದ್ಘಾಟನಾ ಸಮಾರಂಭವು ಎ.೧೯ ರಂದು ಜರುಗಲಿದೆ.
ನೂತನ ಸಭಾಭವನದ ಲೋಕಾರ್ಪಣೆ ನಡೆದು ನಂತರ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಸಂಪುಟ ನರಸಿಂಹ ಮಠ ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿಯವರು ದಿವ್ಯ ಆಶೀರ್ವಚನ ನೀಡಲಿರುವರು.
ಮುಖ್ಯ ಅತಿಥಿಗಳಾಗಿ ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕ ಕೆ. ಪ್ರತಾಪ್ ಸಿಂಹ ನಾಯಕ್, ಖ್ಯಾತ ಜ್ಯೋತಿಷಿ ವೇ.ಮೂ. ಮಧ್ವರಾಯ ಭಟ್ ಮಂಗಳೂರು, ಖ್ಯಾತ ಪುರೋಹಿತರು ಹಾಗೂ ಜ್ಯೋತಿಷ್ಯರಾದ ಡಾ| ಪ್ರಹ್ಲಾದ್ ತಾಮ್ಹಣ್‌ಕರ್, ಉದ್ಯಮಿ ಕಿರಣ್‌ಚಂದ್ರ ಪುಷ್ಪಗಿರಿ, ಅರಸಿನಮಕ್ಕಿ ಗ್ರಾ..ಪಂ. ಉಪಾಧ್ಯಕ್ಷ ಸುಧೀರ್ ಕುಮಾರ್ ಎಂ.ಎಸ್, ಅರಿಕೆಗುಡ್ಡೆ ವನದುರ್ಗ ಸೇವಾ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಪಿಲಿಕಬೆ ಉಪಸ್ಥಿತರಿರುವರು.