ಕಳೆಂಜ: ಕ್ರಿಶ್ಚಿಯನ್ ಬ್ರದರ್ಸ್ ಕಳೆಂಜ ಇದರ ಪ್ರಾಯೋಜಕತ್ವದಲ್ಲಿ ಸಿಬಿಕೆ ಕಪ್-೨೦೨೫ ರಾಷ್ಟ್ರಮಟ್ಟದ ಮುಕ್ತ ಹೊನಲು ಬೆಳಕಿನ ವಾಲಿಬಾಲ್ ಹಾಗೂ ರಾಷ್ಟ್ರಮಟ್ಟದ ಮುಕ್ತ ಹಗ್ಗ ಜಗ್ಗಾಟ ಪಂದ್ಯಾಟವು ಸ.ಹಿ.ಪ್ರಾ. ಶಾಲಾ ಮೈದಾನ ಕಾಯರ್ತಡ್ಕದಲ್ಲಿ ಎ.20ರಂದು ಜರುಗಲಿದೆ.
ಪುರುಷರಿಗೆ ಮುಕ್ತ ವಾಲಿಬಾಲ್ ಹಾಗೂ ಹಗ್ಗ ಜಗ್ಗಾಟ ಪಂದ್ಯಾಟ ಜರಗಲಿದ್ದು, ಮಹಿಳೆಯರಿಗೆ ಮುಕ್ತ ಹಗ್ಗ ಜಗ್ಗಾಟ ಪಂದ್ಯಾಟ ನಡೆಯಲಿದೆ.
ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಸಮಾರಂಭ ನಡೆಯಲಿದೆ.