April 21, 2025
Uncategorized

ಅರಿಕೆಗುಡ್ಡೆಯಲ್ಲಿ ನೂತನ ಸಭಾಭವನ ಉದ್ಘಾಟನೆ : ಸುಬ್ರಹ್ಮಣ್ಯ ಶ್ರೀಗಳಿಂದ ಸಭಾಭವವನ್ನು ದೀಪ ಬೆಳಗಿಸಿ , ಉದ್ಘಾಟಿಸಿ ನಾಮಫಲಕ ಅನಾವರಣ

ಅರಸಿನಮಕ್ಕಿ : ಆಕರ್ಷಣೆಯಿಂದ ಗಳಿಸಿದ್ದು ತಾತ್ಕಾಲಿಕ. ಸಂಸ್ಕಾರ, ಧರ್ಮ ಮತ್ತು ಸಂಸ್ಕೃತಿಯ ಆಚರಣೆಯಿಂದ ಸರ್ವಕಾಲಕ್ಕೂ ಸುಖ, ನೆಮ್ಮದಿಯನ್ನು ಪಡೆಯಬಹುದು ಎಂದು ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ಟಾಮೀಜಿ ಹೇಳಿದರು.
ಅವರು ಹತ್ಕಡ್ಕ ಗ್ರಾಮದ ಅರಿಕೆಗುಡ್ಡೆ ಶ್ರೀ ವನದುಗ೯ಕ್ಷೇತ್ರದಲ್ಲಿ “ವನದುರ್ಗ” ಸಭಾಭವವನ್ನು ದೀಪ ಬೆಳಗಿ, ನಾಮಫಲಕ ಅನಾವರಣಗೊಳಿಸಿ ಆಶೀರ್ವಚನ ನೀಡಿದರು.

ಕೆಲವೊಂದೆಡೆ ಕಲ್ಯಾಣ ಮಂಟಪಗಳು ರೆಸಾರ್ಟ್ ಅಥವಾ ದೈವಿಕತೆಯ ಸ್ಪರ್ಶವಿಲ್ಲದ ಜಾಗಗಳಲ್ಲಿ ನಡೆಯುವುದಿದೆ. ಆದರೆ ದೈವೀಕ್ಷೇತ್ರದ ಪಕ್ಕದಲ್ಲಿ ಸುಂದರ, ವಿಶಾಲವಾದ ಸಭಾಭವನ ನಿರ್ಮಾಣ. ಮಾಡಿರುವುದು ಒಳ್ಳೆಯದು. ಇದರಿಂದ ಸಭಾಭವನದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ದೈವೀ ಸ್ಪರ್ಶ, ದೇವತಾನು ಗ್ರಹವೂ ಸಿಗಲಿದೆ ಎಂದರು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮಾತನಾಡಿ, ದೇವಸ್ಥಾನದ ಈ ಸಭಾಭವನದಲ್ಲಿ ಧರ್ಮ ಶಿಕ್ಷಣದ ಕೆಲಸಗಳು ನಡೆಯಬೇಕಿದೆ. ರಾಮಾಯಣ, ಮಹಾಭಾರತ, ಭಗವದ್ಗೀತೆ ಕಲಿಕೆ ಮೊದಲಾದ ಸಂಸ್ಕಾರದ ಶಿಕ್ಷಣ ನೀಡಬೇಕು. ದೇವಸ್ಥಾನಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸು ವಂತಾಗಬೇಕು. ಈ ಕ್ಷೇತ್ರದ ಅಭಿವೃದ್ಧಿಗೆ ಈಗಾಗಲೆ ಈ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ 50 ಲಕ್ಷ ಅನುದಾನ ನೀಡಿದ್ದು ಈ ಬಾರಿ ಮತ್ತೆ 5 ಲಕ್ಷ ರೂಪಾಯಿ ನೀಡುವುದಾಗಿ ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮಾತನಾಡಿ, ಅರಿಕೆಗುಡ್ಡೆ ಕ್ಷೇತ್ರದ ಪ್ರತಿಯೊಂದು ಅಭಿವೃದ್ಧಿ ಕೆಲಸಗಳನ್ನು ಭಕ್ತರು ಶ್ರಮದಾನದಿಂದ ಮಾಡುತ್ತಿರುವುದು ಮಾದರಿ. ಧರ್ಮ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದರು.

ಬೆಂಗಳೂರಿನ ಜ್ಯೋತಿಷಿ ಪ್ರಹ್ಲಾದ ತಾಮ್ಹನ್ಕರ್, ಬಿಜೆಪಿ ಮಂಡಲಾಧ್ಯಕ್ಷ ಶ್ರೀನಿವಾಸ ರಾವ್, ಅರಸಿನಮಕ್ಕಿ ಪಂ. ಉಪಾಧ್ಯಕ್ಷ ಸುಧೀರ್ ಕುಮಾರ್ ಎಂ.ಎಸ್. ಮಾತನಾಡಿದರು.
ಸಭಾಭವನದ ಶ್ರಮದಾನಿಗಳಾದ ಸಂಜೀವ ಶೆಟ್ಟಿಗಾರ್, ತಮ್ಮಯ್ಯ ಶೆಟ್ಟಿಗಾರ್, ರಾಮಕೃಷ್ಣ ಶೆಟ್ಟಿಗಾರ್, ಸುರೇಶ್ ಶೆಟ್ಟಿಗಾರ್, ರೋಹಿತಾಶ್ವ ಶೆಟ್ಟಿಗಾರ್, ಗಣೇಶ್ ಶೆಟ್ಟಿಗಾರ್, ರಾಮಪ್ಪ ಶೆಟ್ಟಿಗಾರ್, ಹರಿಶ್ಚಂದ್ರ ಶೆಟ್ಟಿಗಾರ್, ನಾರಾಯಣ ಆಚಾರ್ಯ ಕಲ್ಲಕೋಟೆ, ಆನಂದ ಅಡಪ, ವಸಂತ ಶೆಟ್ಟಿಗಾರ್ರವರನ್ನು ಗೌರವಿಸಲಾಯಿತು.
ಗ್ರಾ.ಪಂ. ಅಧ್ಯಕ್ಷೆ ಗಾಯತ್ರಿ, ಕ್ಷೇತ್ರದ ಅರ್ಚಕ ಉಲ್ಲಾಸ್ ಭಟ್ ಅಂತರ, ಉದ್ಯಮಿಗಳಾದ ಶ್ರೀರಂಗ ದಾಮ್ಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನೀತಾ, ಪ್ರಮೀಳಾ, ರೇಷ್ಮಾ, ಧನವತಿ ಪ್ರಾಥಿ೯ಸಿದರು. ಅರಿಕೆಗುಡ್ಡೆ ಕ್ಷೇತ್ರದ ಅಧ್ಯಕ್ಷ ಪ್ರಕಾಶ್ ಪಿಲಿಕ್ಕಬೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ವೃಷಾಂಕ್ ಖಾಡಿಲ್ಕರ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.

Related posts

ಭಾರೀ ಗಾಳಿ-ಮಳೆ: ನಾವೂರು ನಾಗಜೆ ಯಮನಾ ರವರ ಮನೆಗೆ ಬಿದ್ದ ಬೃಹತ್ ಗಾತ್ರದ ಮರ: ಅಪಾರ ಹಾನಿ

Suddi Udaya

ಗುರುವಾಯನಕೆರೆ ಹಿ.ಪ್ರಾ ಶಾಲಾ ಮತಗಟ್ಟೆಯಲ್ಲಿ ಬಿರುಸಿನ ಮತದಾನ

Suddi Udaya

ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ ಮದುವೆ ಆಮಂತ್ರಣ ಕಳುಹಿಸಿದ ವರ: ವೈವಾಹಿಕ ಬದುಕಿಗೆ ಕಾಲಿಟ್ಟ ಸುಬ್ರಹ್ಮಣ್ಯ ಆಚಾರ್ಯ – ಸವಿತಾ ದಂಪತಿಗೆ ಪ್ರಧಾನಿ ಕಾರ್ಯಲಯದಿಂದ ತಲುಪಿತು ಶುಭಾಶಯ ಪತ್ರ

Suddi Udaya

ಗುರುವಾಯನಕೆರೆ ಅರೆಮಲೆಬೆಟ್ಟ ಶ್ರೀ ಕೊಡಮಣಿತ್ತಾಯ ಕ್ಷೇತ್ರಕ್ಕೆಖ್ಯಾತ ಉದ್ಯಮಿಗಳಾದ ದಿನೇಶ್ ಅಮರನಾಥ ಶೆಟ್ಟಿ ಪೂನಾ ಭೇಟಿ

Suddi Udaya

ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಇ) ಉಜಿರೆ ಇಲ್ಲಿ ಕನ್ನಡ ರಾಜ್ಯೋತ್ಸವ

Suddi Udaya

ಪುತ್ತೂರು ಅಕ್ಷಯ ಕಾಲೇಜಿನ ಅಟರ್ನಸ್- 2024 ಫೆಸ್ಟ್ ನಲ್ಲಿ ವಾಣಿ ಪದವಿಪೂರ್ವ ಕಾಲೇಜಿಗೆ ಸಮಗ್ರ ಪ್ರಶಸ್ತಿ

Suddi Udaya
error: Content is protected !!