
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಇದರ ನೇತೃತ್ವದಲ್ಲಿ ಸುಮಾರು 6 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಹಾಗೂ ವಾಣಿ ವಿದ್ಯಾಸಂಸ್ಥೆಗಳ ನೂತನ ಕಟ್ಟಡ ಹಾಗೂ ಸಭಾಭವನವನ್ನು ವಾಣಿ ವಿದ್ಯಾ ಸಂಸ್ಥೆಗಳ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಶೃಂಗೇರಿ ಶ್ರೀ ಶಾರದಾ ಪೀಠದ ತತ್ಕರಕಮಲ ಸಂಜಾತರಾದ ಶ್ರೀ ಮಜ್ಜದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿವರು ದೀಪ ಬೆಳಗಿಸಿ ಲೋಕಾರ್ಪಣೆಗೈದರು.
ಕರ್ನಾಟಕ ಸರಕಾರದ ಉಪಮುಖ್ಯಮಂತ್ರಿಗಳು ಮತ್ತು ಜಲ ಸಂಪನ್ಮೂಲ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ.ಕೆ ಶಿವಕುಮಾರ್ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷರಾದ ಪಿ. ಕುಶಾಲಪ್ಪ ಗೌಡ ವಹಿಸಿಕೊಂಡಿದ್ದಾರೆ. ಮುಖ್ಯ ಅತಿಥಿಗಳಾಗಿ ಸವೋಚ್ಚ ನ್ಯಾಯಾಲಯದ ಸೀನಿಯರ್ ಅಡ್ವಕೇಟ್ ಶೇಖರ ಜಿ. ದೇವಸ,, ಶಾಸಕರಾದ ಹರೀಶ್ ಪೂಂಜ, ಎಂ.ಎಲ್.ಸಿಗಳಾದ , ಪ್ರತಾಪಸಿಂಹ ನಾಯಕ್, ಕಿಶೋರ್ ಕುಮಾರ್ ಬೊಟ್ಯಾಡಿ, ಬೆಳ್ತಂಗಡಿ ಪ.ಪಂ. ಅಧ್ಯಕ್ಷ ಜಯಾನಂದ ಗೌಡ ಪ್ರಜ್ವಲ್,

ಹಾವೇರಿ ಜಾನಪದ ವಿ.ವಿ ವಿಶ್ರಾಂತ ಉಪಕುಲಪತಿಗಳಾದ ಡಾ| ಕೆ. ಚಿನ್ನಪ್ಪ ಗೌಡ, ಪುತ್ತೂರು , ಮಾಜಿ ಎಂ.ಎಲ್.ಸಿ ಕೆ. ಹರೀಶ್‌ಕುಮಾರ್, ಗೌಡರ ಯಾನೆ ಒಕ್ಕಲಿಗರ ಮಾತೃ ಸಂಘದ ಜಿಲ್ಲಾಧ್ಯಕ್ಷ ಲೋಕಯ್ಯ ಗೌಡ, ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಹೆಚ್ ಪದ್ಮ ಗೌಡ, ಬೆಂಗಳೂರಿನ ಉದ್ಯಮಿ ಕಿರಣ್‌ಚಂದ್ರ ಡಿ. ಪುಷ್ಪಗಿರಿ, ಶ್ರೀ ನಾಗನಾಥೇಶ್ವರ ಕ್ಷೇತ್ರ ಬೇಗೂರು ಬೆಂಗಳೂರಿನ ಧರ್ಮದರ್ಶಿ ನಾರಾಯಣ ಬೇಗೂರು, ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್ ಭಾಗವಹಿಸಿದ್ದಾರೆ.

ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಸಮಿತಿ ಮಂಗಳೂರಿನ ಅಧ್ಯಕ್ಷ ಕಿರಣ್ ಬುಡ್ಲೆ ಗುತ್ತು, ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಪುತ್ತೂರು ತಾಲೂಕು ಅಧ್ಯಕ್ಷ ರವಿ ಮುಂಗ್ಲಿಮನೆ, ಸುಳ್ಯ ತಾಲೂಕು ಅಧ್ಯಕ್ಷ ಗಂಗಾಧರ, ಬಂಟ್ವಾಳ ತಾಲೂಕು ಅಧ್ಯಕ್ಷ ಕುಶಾಲಪ್ಪ ಗೌಡ, ಕಡಬ ತಾಲೂಕು ಸ್ಥಾಪಕಾಧ್ಯಕ್ಷ ಸುರೇಶ್ ಗೌಡ ಬೈಲು, ಮಾಜಿ ಎಂಎಲ್ಸಿ ದಯಾನಂದ ರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ ಉಪಸ್ಥಿತರಿದ್ದಾರೆ.

ಗಣ್ಯರಿಗೆ ಗೌರವಾಪ೯ಣೆ:
ಸಮಾರಂಭದಲ್ಲಿ ಹೆಚ್.ಪದ್ಮ ಗೌಡ, ಗೌರವಾಧ್ಯಕ್ಷರು,ಗೌ.ಯಾ.ಬ.ಸೇ.ಸಂಘ ಬೆಳ್ತಂಗಡಿ, ಪಿ. ಕುಶಾಲಪ್ಪ ಗೌಡ, ಅಧ್ಯಕ್ಷರು, ಗೌ.ಯಾ.ಒ.ಸೇ.ಸಂಘ ಬೆಳ್ತಂಗಡಿ, ಜಿ. ಸೋಮೇ ಗೌಡ, ಮಾಜಿ ಅಧ್ಯಕ್ಷರು, ಗೌ.ಯಾ.ಬ.ಸೇ.ಸಂಘ ಬೆಳ್ತಂಗಡಿ, ಡಿ. ಯದುಪತಿ ಗೌಡ, ಪ್ರಾಂಶುಪಾಲರು, ವಾಣಿ ಪದವಿ ಪೂರ್ವ ಕಾಲೇಜು, ಚಂದ್ರ ಕೊಲ್ಟಾರು(ಸುಳ್ಯ) ಇವರನ್ನು ಗೌರವಿಸಲಾಯಿತು.

ಸಹಕಾರಕ್ಕೆ ಸನ್ಮಾನ:
ಕಾಯ೯ಕ್ರಮದಲ್ಲಿ ನಿಕಟಪೂರ್ವ ನಿರ್ದೇಶಕರುಗಳು, ಗೌ.ಯಾ.ಒ.ಸೇವಾ ಸಂಘ ಬೆಳ್ತಂಗಡಿ, ಲಕ್ಷ್ಮಿನಾರಾಯಣ ಕೆ. ಮುಖ್ಯೋಪಾಧ್ಯಾಯರು, ವಾಣಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ,
ಪ್ರಸಾದ್, ಆಡಳಿತಾಧಿಕಾರಿ, ವಾಣಿ ವಿದ್ಯಾ ಸಂಸ್ಥೆ, ಬೆಳ್ತಂಗಡಿ,
ಪ್ರವೀಣ್ ಬಿ.ಕೆ, ಸಮುದಾಯ ಭವನದ ಕಾಮಗಾರಿಯ ಇಂಜಿನಿಯರ್, ರಮೇಶ್ ಪಣೆಜಾಲು ನರ್ಸರಿ, ಕು| ಸಿಂಚನಾ, ವಾಣಿಜ್ಯ ವಿಭಾಗ, ಕು। ದೀಕ್ಷಾ ವಾಣಿಜ್ಯ ವಿಭಾಗ, ವಾಣಿ ಸಂಸ್ಥೆಯ ಯಾಂಕ್ ವಿಜೇತ ವಿದ್ಯಾರ್ಥಿಗಳು,
ಕು| ತುಷಾರ ಬಿ.ಎಸ್. ಪಿಯುಸಿಯಲ್ಲಿ
ವಿಜ್ಞಾನ ವಿಭಾಗದಲ್ಲಿ 595 ಅಂಕಗಳೊಂದಿಗೆ ರಾಜ್ಯಕ್ಕೆ 5ನೇ ಸ್ಥಾನ ಪಡೆದ ವಿದ್ಯಾರ್ಥಿಯನ್ನು ಗುರುತಿಸಿ ಸನ್ಮಾನಿಸಲಾಯಿತು.
ಶೃಂಗೇರಿ ಮಠಕ್ಕೆ ಗುರು ಕಾಣಿಕೆ ಸಮಪ೯ಣೆ:
ದ.ಕ ಜಿಲ್ಲೆಯ ಗೌಡರ ಗುರುಮಠವಾದ ಶೃಂಗೇರಿ ಮಠಕ್ಕೆ ಸ್ವಾಮೀಜಿಯವರ ಮೂಲಕ ಸಮಾಜ ಬಾಂಧವರಿಂದ
ಹುಂಡಿ ಕಾಣಿಕೆ ಸಮರ್ಪಣೆ ನಡೆಯಿತು.
ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಕಾರ್ಯದರ್ಶಿ ಗಣೇಶ್ ಗೌಡ, ಕಾರ್ಯಕ್ರಮ ಸಂಯೋಜಕ ಯುವರಾಜ್ ಅನಾರು, ಉಪಾಧ್ಯಕ್ಷರಾದ ಧರ್ಣಪ್ಪ ಗೌಡ ಬಾನಡ್ಕ ಮತ್ತು ನಾರಾಯಣ ಗೌಡ ದೇವಸ್ಯ, ಜೊತೆ ಕಾರ್ಯದರ್ಶಿ ಶ್ರೀನಾಥ್, ಸಂಘಟನಾ ಕಾರ್ಯದರ್ಶಿ ಕೃಷ್ಣಪ್ಪ ಗೌಡ ಸವಣಾಲು, ನಿರ್ದೇಶಕರಾದ ಮಾಧವ ಗೌಡ ಬೆಳ್ತಂಗಡಿ, ದಿನೇಶ್ ಗೌಡ ಕೊಯ್ಯೂರು, ಉಷಾದೇವಿ ಉಜಿರೆ, ವಸಂತ ನಡ, ಯುವ ವೇದಿಕೆ ಅಧ್ಯಕ್ಷ ಚಂದ್ರಕಾಂತ್ ನಿಡ್ಡಾಜೆ, ಮಹಿಳಾ ವೇದಿಕೆ ಅಧ್ಯಕ್ಷೆ ಗೀತಾರಾಮಣ್ಣ ಗೌಡ, ಸ್ಪಂದನಾ ಶಸೇವಾ ಸಂಘದ ಸಂಚಾಲಕ ಸೀತಾರಾಮ ಕೆ., ಕಾರ್ಯದರ್ಶಿ ಸುರೇಶ್ ಕೌಡಂಗೆ ಮೊದಲಾದವರು ಉಪಸ್ಥಿತರಿದ್ದರು.
ವಾಣಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳ ಪ್ರಾರ್ಥನೆ ಬಳಿಕ ಕಾರ್ಯಕ್ರಮ ಸಂಚಾಲಕ ಯುವರಾಜ ಆನಾರು ಸ್ವಾಗತಿಸಿದರು.ಗೌ.ಯಾ.ಒ.ಸೇ.ಸಂಘದ ಮಾಜಿ ಕಾರ್ಯದರ್ಶಿ
ಮೋಹನ್ ಗೌಡ, ಪ್ರಾಸ್ತಾವಿಕವಾಗಿ ಮಾತನಾಡಿದರು.ಗಣೇಶ್ ಗೌಡ, ಕಾರ್ಯದರ್ಶಿ,ಗೌ.ಯಾ.ಒ.ಸೇ.ಸಂಘ ಬೆಳ್ತಂಗಡಿ ವಂದಿಸಿದರು.ಧರ್ಮೇಂದ್ರ ಕುಮಾರ್, ದೈಹಿಕ ಶಿಕ್ಷಣ ನಿರ್ದೇಶಕರು, ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮಹಾ ವಿದ್ಯಾಲಯ, ಶ್ರೀಮತಿ ಮೀನಾಕ್ಷಿ ಎನ್, ರಾಜ್ಯಶಾಸ್ತ್ರ ಉಪನ್ಯಾಸಕರು ವಾಣಿ ಪದವಿ ಪೂರ್ವ ಕಾಲೇಜು, ಹಳೆಕೋಟೆ ಬೆಳ್ತಂಗಡಿ ನಿರೂಪಿಸಿದರು.