25.7 C
ಪುತ್ತೂರು, ಬೆಳ್ತಂಗಡಿ
March 7, 2026
ತಾಲೂಕು ಸುದ್ದಿ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನೂತನವಾಗಿ ನಿರ್ಮಿಸಲಾದಕಲ್ಯಾಣ ಮಂಟಪಗಳ ಸಮುಚ್ಚಗಳ ಉದ್ಘಾಟನೆ

ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ ನೂತನವಾಗಿ ನಿರ್ಮಿಸಲಾದ ಕಲ್ಯಾಣ ಮಂಟಪಗಳಾದ ಶ್ರೀ ಉಮಾಮಹೇಶ್ವರ, ಶ್ರೀ ಶಿವಪಾರ್ವತಿ, ಶ್ರೀ ಗೌರೀಶಂಕರ ಸಮುಚ್ಚಯವನ್ನು ಎ.೨೦ರಂದು ಸಂಜೆ ಕರ್ನಾಟಕ ಸರಕಾರದ ಉಪಮುಖ್ಯಮಂತ್ರಿಗಳು ಮತ್ತು ಜಲ ಸಂಪನ್ಮೂಲ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ.ಕೆ ಶಿವಕುಮಾರ್ ದೀಪ ಬೆಳಗಿಸಿ ಉದ್ಘಾಟಿಸಿ ಲೋಕಾರ್ಪಣೆಗೈದರು.

ನಂತರ ಧರ್ಮಸ್ಥಳ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜ್ಞಾನವಿಕಾಸ ಮಹಿಳಾ ಸಬಲೀಕರಣ ಕಾರ್ಯಕ್ರಮದ ಅಧ್ಯಕ್ಷೆ ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆ, ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವಾರಂ, ಉಜಿರೆ ಎಸ್‌ಡಿಎಂ ಎಜ್ಯಕೇಶನಲ್ ಸೊಸೈಟಿ ಉಪಾಧ್ಯಕ್ಷ ಡಿ.ಸುರೇಂದ್ರ ಕುಮಾರ್ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಕಟ್ಟಡ ಅಭಿಯಂತರ ಮಂಜುಕೀತ೯ನ್, ಕಾಮಗಾರಿ ವ್ಯವಸ್ಥಾಪಕ ಯಶೋಧರ, ಕಟ್ಟಡ ಮೇಲ್ವಿಚಾರಕ ನಿಖಲ್ ಕುಮಾರ್ ಇವರನ್ನು ಸನ್ಮಾನಿಸಲಾಯಿತು.


ಉಜಿರೆ ಎಸ್‌ಡಿಎಂ ಎಜ್ಯುಕೇಶನಲ್ ಸೊಸೈಟಿ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಸ್ವಾಗತಿಸಿದರು. ಕು.ಚಿನ್ಮಯಿ
ಅನ್ನಪೂರ್ಣ ಛತ್ರ ವ್ಯವಸ್ಥಾಪಕ ಜಿ.ಸುಬ್ರಹ್ಮಣ್ಯ ಪ್ರಸಾದ್ ಕಾರ್ಯಕ್ರಮ ನಿರೂಪಿಸಿ, ಡಿ.ಎಂ.ಸಿ ಇಂಜಿನಿಯರ್ ಯಶೋಧರ ಧನ್ಯವಾದವಿತ್ತರು.

Related posts

ಮುಳಿಕ್ಕಾರುನಲ್ಲಿ ದೈವ ವ್ಯಾಘ್ರ ಚಾಮುಂಡಿ, ಪರಿವಾರ ದೈವಗಳ ನೇಮೋತ್ಸವ

Suddi Udaya

INICET ಪ್ರವೇಶ ಪರೀಕ್ಷೆ: ಉಜಿರೆಯ ಡಾ|ಶಿವಾನಿಗೆ ದೇಶದಲ್ಲೇ 191ನೇ ರ್ಯಾಂಕ್

Suddi Udaya

ಮದ್ದಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿಯಿಂದ ಪೂರ್ವ ತಯಾರಿ ಸಭೆ

Suddi Udaya

ಕೊಕ್ಕಡ: ಶ್ರೀ ಕ್ಷೇತ್ರ ಸೌತಡ್ಕ ದೇವಸ್ಥಾನದ ಆಸ್ತಿ ಉಳಿಸಲು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ

Suddi Udaya

ಉಜಿರೆ: ರಾಜಾರಾಂ ಶೋ ರೂಂ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಡಿಸ್ಕೌಂಟ್ ಸೇಲ್

Suddi Udaya

ಮುಂಡಾಜೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸಹಾಯಧನ ನೀಡಿದ ಮಂಜೂರಾತಿ ಪತ್ರ ವಿತರಣೆ

Suddi Udaya
error: Content is protected !!