April 21, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿರಾಜಕೀಯ

ಗುರುವಾಯನಕೆರೆ: ಸರ್ಕಾರದ ನಡೆ ಕಾರ್ಯಕರ್ತರ ನಡೆ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ

ಬೆಳ್ತಂಗಡಿ: ಸರ್ಕಾರದ ನಡೆ ಕಾರ್ಯಕರ್ತರ ಕಡೆ, ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಎ.20 ರಂದು ಗುರುವಾಯನಕೆರೆ ಶಕ್ತಿನಗರದಲ್ಲಿ ನಡೆಯಿತು.

ಉಪ ಮುಖ್ಯಮಂತ್ರಿ,ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ರಾಜ್ಯದ ಕಾಂಗ್ರೇಸ್ ಸರಕಾರ ಘೋಷಣೆ ಮಾಡಿದಂತೆ ಎಲ್ಲಾ ಘೋಷಣೆಗಳನ್ನು ಜನರಿಗೆ ತಲುಪಿಸುವ ಮೂಲಕ ನುಡಿದಂತೆ ನಡೆದಿದ್ದೇವೆ.ಎಲ್ಲ ಧರ್ಮದವರನ್ನು ಸೇರಿಸಿ ಕೆಲಸ ಮಾಡಬೇಕಿದೆ.ಕಾಂಗ್ರೇಸ್ ಶಕ್ತಿ ಈ ದೇಶದ ಶಕ್ತಿ‌ ಎಂದರು.

ಡಿಜಟಲ್ ಯೂತ್ ಅವರಿಗೆ ಧ್ಜಜ ನೀಡಿ ಸ್ವಾಗತಿಸಲಾಯಿತು.

ವೇದಿಕೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್,ಕಾಂಗ್ರೇಸ್ ಜಿಲ್ಲಾ ಅಧ್ಯಕ್ಷ ಕೆ.ಹರೀಶ್ ಕುಮಾರ್,ಕಾಂಗ್ರೇಸ್ ಪ್ರಮುಖರಾದ ನಿಕೇತ್ ರಾಜ್, ಮಮತಾ ಗಟ್ಟಿ,ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ,ಮಾಜಿ ಸಚಿವರಾದ ರಮಾನಾಥ ರೈ,ಅಭಯಚ್ಚಂದ್ರ ಜೈನ್,ವಿ.ಪ.ಸದಸ್ಯ ಮಂಜುನಾಥ್ ಭಂಡಾರಿ, ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ,ಉಮರ್ ಮುಸ್ಲಿಯಾರ್ ,ಪದ್ಮರಾಜ್ ಆರ್ ಮಂಗಳೂರು,
ಸುಧೀರ್ ಕುಮಾರ್ ಮರೋಳಿ,ಉಭಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸತೀಶ್ ಕೆ ಕಾಶಿಪಟ್ಣ, ನಾಗೇಶ್ ಕುಮಾರ್ ಗೌಡ,ಲಾವಣ್ಯ ಬಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಪ್ರಾಸ್ತಾವಿಕ ಮಾತುಗಳನ್ನಾಡಿ ನಾನು ಚುನಾವಣೆಗೆ ನಿಂತಾಗ ಕಾರ್ಯಕರ್ತರು ಹಗಲಿರುಲು ದುಡಿದ್ದಿದ್ದಾರೆ.ಮಂಬರುವ ತಾ.ಪಂ.ಜಿ.ಪಂ ಚುನಾವಣೆಗೆ ಒಟ್ಟಾಗಿ ದುಡಿಯಬೇಕು. ಪಂಚ ಗ್ಯಾರಂಟಿ ಯೋಜನೆಯಿಂದ ಎಲ್ಲರಿಗೂ ಪ್ರಯೋಜನವಾಗಿದೆ. ತುಳು ಭಾಷೆಗೆ ಮಾನ್ಯತೆ,ಪ್ರವಾಸೋದ್ಯಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವಂತಾಗಬೇಕು ಎಂದರು.

Related posts

ನಾರಾವಿ: “ಕಲ್ಕುಡ ಮಹಿಮೆ” ತುಳು ಭಕ್ತಿ ಗೀತೆ ಬಿಡುಗಡೆ

Suddi Udaya

ಬಳಂಜ: ಬೊಳ್ಳಾಜೆಯಿಂದ ಡೆಂಜೋಲಿ ತನಕ ಅಪಾಯಕಾರಿ ಮರಗಳ ತೆರವು ಕಾರ್ಯ

Suddi Udaya

ಹೊಸಂಗಡಿ ವಲಯದ ಶ್ರೀ ಕ್ಷೇ.ಧ.ಗ್ರಾ. ಯೋಜನೆಯಿಂದ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ

Suddi Udaya

ಮಿತ್ತಬಾಗಿಲು – ಮಲವಂತಿಗೆ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಗುರುಪೂಜೆ ಉತ್ಸವ

Suddi Udaya

ರಾಜ್ಯ ಮಟ್ಟದ ನೆಟ್ ಬಾಲ್ ಪಂದ್ಯಾಟ: ಎಸ್.ಡಿ.ಎಂ ಕಾಲೇಜಿನ ಪುರುಷರ ತಂಡ ಪ್ರಥಮ ಹಾಗೂ ಮಹಿಳೆಯರ ತಂಡ ದ್ವಿತೀಯ

Suddi Udaya

ಕೃಷಿ ರಕ್ಷಣೆಗಾಗಿ ಆಯುಧಗಳನ್ನು ಹಿಂಪಡೆಯಲು ಜಿಲ್ಲಾಧಿಕಾರಿ ಮುಲೈ ಮುಹಿಲನ್ ಆದೇಶ

Suddi Udaya
error: Content is protected !!