September 6, 2026
ಕ್ರೀಡಾ ಸುದ್ದಿ

ಬಂಟರ ಯಾನೆ ನಾಡವರ ಸಂಘ (ರಿ ) ಬೆಳ್ತಂಗಡಿ, ಬಂಟರ ಯುವ ವಿಭಾಗ ಮತ್ತು ಬಂಟರ ಮಹಿಳಾ ವಿಭಾಗ ಇವುಗಳ ಸಂಯುಕ್ತ ಆಶ್ರಯದಲ್ಲಿ ಪಣೆಜಾಲ್ ಇಂಡೋರ್ ಲಯನ್ಸ್ ಕ್ರೀಡಾಂಗಣದಲ್ಲಿ ಬಂಟರ ಇಂಡೋರ್ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ

ಬೆಳ್ತಂಗಡಿ :ಬಂಟರ ಯಾನೆ ನಾಡವರ ಸಂಘ (ರಿ ) ಬೆಳ್ತಂಗಡಿ, ಬಂಟರ ಯುವ ವಿಭಾಗ ಮತ್ತು ಬಂಟರ ಮಹಿಳಾ ವಿಭಾಗ ಇವುಗಳ ಸಂಯುಕ್ತ ಆಶ್ರಯದಲ್ಲಿ ಪಣೆಜಾಲ್ ಇಂಡೋರ್ ಲಯನ್ಸ್ ಕ್ರೀಡಾಂಗಣದಲ್ಲಿ ಬಂಟರ ಇಂಡೋರ್ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ ನಡೆಯಿತು.

ಇದರ ಉದ್ಘಾಟನೆಯನ್ನು ಲಯನ್ ದೇವದಾಸ್ ಶೆಟ್ಟಿ ಹಿಬರೋಡಿ. ಅಧ್ಯಕ್ಷರು, ಲಯನ್ಸ್ ಕ್ಲಬ್ ಬೆಳ್ತಂಗಡಿ, ಅಧ್ಯಕ್ಷತೆಯನ್ನು ಬಂಟರ ಸಂಘದ ಅಧ್ಯಕ್ಷರಾದ ಶ್ರೀ ಬಿ. ಜಯಂತ ಶೆಟ್ಟಿ ಭಂಡಾರಿಗುಡ್ಡೆಯವರು ವಹಿಸಿಕೊಂಡರು. ಮುಖ್ಯ ಅತಿಥಿಗಳಾಗಿ ಶ್ರೀ ಶೇಖರ್ ಶೆಟ್ಟಿ ಮನಸ್ವಿ ಪಣೆಜಾಲು ಉದ್ಯಮಿಗಳು ಶ್ರೀ ಜಯಂತ ಶೆಟ್ಟಿ ಕುಂಟಿನಿ ಉಪಾಧ್ಯಕ್ಷರು, ವಿಜಯ ಕ್ರೆಡಿಟ್ ಕೋ – ಆಪರೇಟಿವ್ ಸೊಸೈಟಿ ಗುರುವಾಯನಕೆರೆ, ಶ್ರೀ ಪುಷ್ಪರಾಜ್ ಶೆಟ್ಟಿ ಬೆಳ್ತಂಗಡಿ, ಸಂಚಾಲಕರು ಯುವ ಬಂಟ ವಿಭಾಗ ಇವರು ಭಾಗವಹಿದ್ದರು. ವೇದಿಕೆಯಲ್ಲಿ ಶ್ರೀ ವಸಂತ ಶೆಟ್ಟಿ ಶ್ರದ್ದಾ ಕೋಶಾಧಿಕಾರಿ ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿ, ಶ್ರೀ ಜಯರಾಮ ಭಂಡಾರಿ ಧರ್ಮಸ್ಥಳ, ಸಂಚಾಲಕರು ಬಂಟರ ಯಾನೆ ನಾಡವರ ಮಾತೃ ಸಂಘ (ರಿ ) ಮಂಗಳೂರು, ಶ್ರೀ ರಘುರಾಮ ಶೆಟ್ಟಿ ಸಾಧನ, ಮಾಜಿ ಅಧ್ಯಕ್ಷರು ಬಂಟರ ಸಂಘ ಬೆಳ್ತಂಗಡಿ, ಶ್ರೀಮತಿ ವನಿತಾ ವಿ. ಶೆಟ್ಟಿ ಅಧ್ಯಕ್ಷರು, ಉಜಿರೆ ವಲಯ, ಶ್ರೀ ಆನಂದ ಶೆಟ್ಟಿ ಐಸಿರಿ, ನಿರ್ದೇಶಕರು ಬಂಟರ ಸಂಘ ಬೆಳ್ತಂಗಡಿ ,ವೆಂಕಟ್ರಮಣ ಶೆಟ್ಟಿ ಉಜಿರೆ ಕ್ರೀಡಾ ಸಂಚಾಲಕರು ಬಂಟರ ಸಂಘ ಬೆಳ್ತಂಗಡಿ ಉಪಸ್ಥಿತರಿದ್ದರು. ಶ್ರೀ ರಾಜು ಶೆಟ್ಟಿ ಬೆಂಗತ್ಯಾರ್ ಸ್ವಾಗತಿಸಿದರು. ಶ್ರೀ ಸುರೇಶ್ ಶೆಟ್ಟಿ ಲಾಯಿಲ ಧನ್ಯವಾದವಿತ್ತರು. ಶ್ರೀ ಕಿರಣ್ eಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.ಈ ಪಂದ್ಯಾಟದಲ್ಲಿ ತಾಲೂಕಿನ ಬಂಟ ಸಮಾಜದ 40 ತಂಡಗಳು ಭಾಗವಹಿಸಿದ್ದವು.

Related posts

ರಾಜ್ಯಮಟ್ಟದ ನೆಟ್ ಬಾಲ್ ಕ್ರೀಡೆ: ಎಸ್.ಡಿ.ಎಂ. ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿ ಪ್ರಶಾಂತ್ ಗೆ ಚಿನ್ನದ ಪದಕ

Suddi Udaya

ಅಂತರ್ ಜಿಲ್ಲಾ ಈಜು ಸ್ಪರ್ಧೆಗೆ ಚಾಲನೆ: 20 ಶಾಲೆಯ 200 ಕ್ಕೂ ಅಧಿಕ ಸ್ಪರ್ಧಾಗಳು ಭಾಗಿ

Suddi Udaya

ನಾರಾವಿ ವಲಯ ಮಟ್ಟದ ಕ್ರೀಡಾಕೂಟ: ಪಡಂಗಡಿ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳ ತಂಡ ರಿಲೇಯಲ್ಲಿ ಪ್ರಥಮ ಸ್ಥಾನ

Suddi Udaya

ವಲಯ ಮಟ್ಟದ ಕಬಡ್ಡಿ ಪಂದ್ಯಾಟ : ಸ್ಟಾರ್ ಲೈನ್ ಶಾಲಾ ತಂಡ ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ನಾರಾವಿ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ವಾಲಿಬಾಲ್ ಪಂದ್ಯಾಟ

Suddi Udaya

ಮಾಜಿ ಶಾಸಕ ದಿ. ಕೆ ವಸಂತ ಬಂಗೇರರವರ 78 ನೇ ಹುಟ್ಟು ಹಬ್ಬದ ಸವಿ ನೆನಪಿಗಾಗಿ, ಬಂಗೇರಾ ಬ್ರಿಗೇಡ್ ಬೆಳ್ತಂಗಡಿ ವತಿಯಿಂದ,ಬಿನುತಾ ಬಂಗೇರರ ನೇತೃತ್ವದಲ್ಲಿ ಮದ್ದಡ್ಕ ಬಂಡೀಮಠ ಮೈದಾನದಲ್ಲಿ ಹೊನಲು ಬೆಳೆಕಿನ ಮುಕ್ತ ಕಬಡ್ಡಿ ಪಂದ್ಯಕೂಟ

Suddi Udaya
error: Content is protected !!