ಬೆಳ್ತಂಗಡಿ: ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನ ಲಾಯಿಲ ಬೆಳ್ತಂಗಡಿ ಇಲ್ಲಿ ನಡೆಯುತ್ತಿರುವ ಶ್ರೀ ರಾಮಚಂದ್ರ ಮುಖ್ಯಪ್ರಾಣ ಸಹಿತ ಶ್ರೀ ರಾಘವೇಂದ್ರ ಸ್ವಾಮಿಗಳ ಮೃತ್ಹಿಕ ಬೃಂದಾವನದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಥಮ ದಿನದ ಕಾರ್ಯಕ್ರಮವನ್ನು ಬ್ರಹ್ಮಶ್ರೀ ವೇದಮೂರ್ತಿ ಕಾರ್ಕಳ ಶ್ರೀ ಭಾರತೀಯ ರಮಣ ಆಚಾರ್ಯರ ಮಾರ್ಗದರ್ಶನದಲ್ಲಿ ಕ್ಷೇತ್ರದ ಪ್ರಧಾನ ಸಂಘ ಅರ್ಚಕರಾದ ವೇದಮೂರ್ತಿ ಕುಂಟಿನೀ ರಾಘವೇಂದ್ರ ಭಾಂಗಿಣ್ಣಾಯರ ನೇತೃತ್ವದಲ್ಲಿ ಎ.20 ರಂದು ನಡೆಯಿತು.

ಶ್ರೀ ರಾಘವೇಂದ್ರ ಪ್ರತಿಷ್ಠಾನದ ಅಧ್ಯಕ್ಷ ಪೀತಾಂಬರ ಹೆರಾಜೆ, ಬ್ರಹ್ಮಕ ಲಶೋತ್ಸವ ಸಮಿತಿ ಅಧ್ಯಕ್ಷ ರಕ್ಷಿತ್ ಶಿವರಾಮ್,
ನಾರಾಯಣ ಬೇಗೂರು, ವಿಆರ್ ನಾಯಕ್ ,ಕೃಷ್ಣಪ್ಪ ಪೂಜಾರಿ, ಮಹಾಬಲ ಶೆಟ್ಟಿ , ಸೋಮೇಗೌಡ, ವಸಂತ ಸುವರ್ಣ, ಮುಂತಾದ ಹಿರಿಯರ ಸಮ್ಮುಖದಲ್ಲಿ ದೀಪ ಬೆಳಗಿಸುವ ಮುಖಾಂತರ ಮಹಿಳೆಯರ ಭಜನಾ ಕಮ್ಮಟಗಳ ಒಗ್ಗೂಡುವಿಕೆಯಿಂದ ಪ್ರಾರಂಭವಾಯಿತು.
ಧಾರ್ಮಿಕ ಸಭಾ ಕಾರ್ಯಕ್ರಮ ಅಧ್ಯಕ್ಷತೆಯನ್ನು ರಾಘವೇಂದ್ರ ಸೇವಾ ಪ್ರತಿಷ್ಠಾನದ ಟ್ರಸ್ಟಿ ಉಮಾ ರಾವ್ ವಹಿಸಿದ್ದರು. ಜಿಪಂ ಮಾಜ ಸದಸ್ಯೆ ಲೋಕೇಶ್ವರಿ ವಿನಯ ಚಂದ್ರ ಗೌಡ, ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಸವಿತಾ ಜಯದೇವ್, ಹಿರಿಯರಾದ ಸಂಗೀತ ಹೇರಾಜೆ, ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ಸುಭಾಷಿಣಿ ಶೆಟ್ಟಿ, ನಿನಾದ ಕ್ಲಾಸಿಕಲ್ ಮುಂಡ್ರುಪ್ಪಾಡಿ ಇದರ ಮುಖ್ಯಸ್ಥೆ ಶ್ರೀದೇವಿ ಸಚಿನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ನಾರಾಯಣ ಬೇಗೂರ್ ರವರು ನೀನಾದ ಕ್ಲಾಸಿಕಲ್ ಮುಂಡ್ರುಪಾಡಿ ಇವರಿಂದ ರಚಿತವಾದ ರಾಘವೇಂದ್ರ ಸ್ವಾಮಿಗಳ ಸ್ತುತಿಯ ಯೂಟ್ಯೂಬನ್ನು ಬಿಡುಗಡೆಗೊಳಿಸಿದರು. ಮೋಕ್ಷ ವಿ ಪೂಜಾರಿ ಕೋಡ್ಲಕ್ಕೆ ಸ್ವಾಗತಿಸಿ ಪ್ರಸ್ತಾವಿಸಿದರು.ಸುಧಾ ಆರ್ ಸಾಲಿಯಾನ್ ಮತ್ತು ಜಯಾನಂದ ಲಾಯಿಲ ನಿರೂಪಿಸಿದರು. ಸೌಮ್ಯ ಲಾಯಿಲ ಸಹಕರಿಸಿದರು. ಸುಶೀಲಾ ಎಸ್ ಹೆಗ್ಡೆ ವಂದಿಸಿದರು.