ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಸಂಘ, ವೇಣೂರು ಇದರ ಸದಸ್ಯರಿಂದ ‘ವಾಲಿ ಮೋಕ್ಷ’ ಎಂಬ ಪ್ರಸಂಗ ಯಕ್ಷಗಾನ ತಾಳಮದ್ದಳೆಯಾಗಿ ಏ. 18 ರಂದು ಸಂಜೆ ಪ್ರಸ್ತುತವಾಯಿತು.
ಹಿಮ್ಮೆಳದಲ್ಲಿ ಭಾಗವತರಾಗಿ ಬನ್ನೆಂಗಳ ವೆಂಕಟರಮಣ ರಾವ್, ಶ್ರೀರಕ್ಷಾ ಕಟೀಲ್, ಚೆಂಡೆ ಮದ್ದಳೆಗಳಲ್ಲಿ ಕೊಂಕಣಾಜೆ ಚಂದ್ರಶೇಖರ ಭಟ್, ಶ್ರೀವತ್ಸ ಅಳಕ್ಕೆ, ಶ್ರೇಯಸ್ ಅಳಕ್ಕೆ, ಕೊಂಕಣಾಜೆ ಸುಷೇಣ ಭಟ್ ಸಹಕರಿಸಿದರೆ, ಮುಮ್ಮೇಳದಲ್ಲಿ ರಾಮನಾಗಿ ಡಾ. ಸುಬ್ರಹ್ಮಣ್ಯ ಭಟ್, ವಾಲಿಯಾಗಿ ದಾಸಪ್ಪ ರೈ ಮತ್ತು ಪ್ರಭಾಕರ ಪ್ರಭು, ಸುಗ್ರೀವನಾಗಿ ಪದ್ಮನಾಭ ರೈ ಬ್ರಾಣಿಗೇರಿ ಹಾಗೂ ತಾರೆಯಾಗಿ ನಾರಾಯಣ ಕನಡ ಪಾತ್ರ ನಿರ್ವಹಿಸಿದರು.