25.7 C
ಪುತ್ತೂರು, ಬೆಳ್ತಂಗಡಿ
April 22, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಇಂದಬೆಟ್ಟು : ಕಲ್ಲಾಜೆ ನವ ಭಾರತ್ ಗೆಳೆಯರ ಬಳಗ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ


ಇಂದಬೆಟ್ಟು: ಯುವ ಸಂಘಟನೆ ನವ ಭಾರತ್ ಗೆಳೆಯರ ಬಳಗ ಕಲ್ಲಾಜೆ ಇಂದಬೆಟ್ಟು ಇದರ ವಾರ್ಷಿಕ ಮಹಾಸಭೆಯು ಎ 20 ರಂದು ಕಲ್ಲಾಜೆ ಶಾಲಾ ವಠಾರದಲ್ಲಿ ಯತೀಶ್ ನೆರೋಲ್ದಪಲ್ಕೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮಹಾಸಭೆಯ ನಡವಳಿ, ವಾರ್ಷಿಕ ವರದಿ, ಲೆಕ್ಕ ಪತ್ರ ಪರಿಶೋಧನಾ ವರದಿಯನ್ನು ಕಾರ್ಯದರ್ಶಿ ಅವಿನಾಶ್ ಕಲ್ಲಾಜೆ ಸಭೆಗೆ ಮಂಡಿಸಿದರು. ಸದಸ್ಯರ ಸರ್ವಾನುಮತದಿಂದ ಅಂಗೀಕಾರ ಪಡೆಯಲಾಯಿತು. 2025-2026 ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಗೌರವಾಧ್ಯಕ್ಷರಾಗಿ ಅರುಣ್ ಕುಮಾರ್ ಕೆಳಗಿನ ಕಲ್ಲಾಜೆ, ಅಧ್ಯಕ್ಷರಾಗಿ ರಮೇಶ್ ನೂಜಿಲೆ, ಕಾರ್ಯದರ್ಶಿಯಾಗಿ ಜಗದೀಶ್ ನೆರೋಲ್ದಪಲ್ಕೆ, ಕೋಶಾಧಿಕಾರಿಯಾಗಿ ಪ್ರತೀಕ್ಷ್ ಹಾನಿಬೆಟ್ಟು, ಉಪಾಧ್ಯಕ್ಷರಾಗಿ ಜಯ ನೂಜಿಲೆ, ಜೊತೆ ಕಾರ್ಯದರ್ಶಿಯಾಗಿ ನಾಗೇಶ್ ಮುಂಡ್ರಬೆಟ್ಟು, ಧಾರ್ಮಿಕ ವಿಭಾಗದ ನಿರ್ದೇಶಕರಾಗಿ ರಾಜೇಶ್ ಹೆಬ್ಬಾರಪಲ್ಕೆ, ಶ್ರೀಕಾಂತ್ ಸೋಮಯ್ಯದಡ್ಡು, ಆರೋಗ್ಯ ವಿಭಾಗದ ನಿರ್ದೇಶಕರಾಗಿ ಪ್ರಜ್ವಲ್ ಇಂದಬೆಟ್ಟು, ಕ್ರೀಡಾ ವಿಭಾಗದ ನಿರ್ದೇಶಕರಾಗಿ ಅವಿನಾಶ್ ಸೋಮಯ್ಯದಡ್ಡು, ಶೈಕ್ಷಣಿಕ ವಿಭಾಗದ ನಿರ್ದೇಶಕರಾಗಿ ನವೀನ್ ನೇತ್ರಾವತಿ ನಗರ, ಮಾಧ್ಯಮ ಮತ್ತು ಪ್ರಚಾರ ವಿಭಾಗದ ನಿರ್ದೇಶಕರಾಗಿ ಸಂದೀಪ್ ಅಲಕ್ಕೆ ಇವರನ್ನು ಆಯ್ಕೆ ಮಾಡಲಾಯಿತು.

ಅವಿನಾಶ್ ಕಲ್ಲಾಜೆ ಸ್ವಾಗತಿಸಿದರು, ಜಗದೀಶ್ ನೆರೋಲ್ದಪಲ್ಕೆ ಧನ್ಯವಾದವಿತ್ತರು.

Related posts

ಕನ್ಯಾಡಿ ಯಕ್ಷಭಾರತಿಯಿಂದ ಮನೆ ಮನೆ ತಾಳಮದ್ದಳೆ ಚಾವಡಿಕೂಟ ಆರಂಭ

Suddi Udaya

ಧರ್ಮಸ್ಥಳ ಶ್ರೀ ಧ.ಮಂ. ಭಜನಾ ಪರಿಷತ್ ಇದರ ಅಧ್ಯಕ್ಷರಾಗಿ ಆಯ್ಕೆಯಾದ ಚಂದ್ರಶೇಖರ್ ಸಾಲ್ಯಾನ್ ಕೊಯ್ಯೂರು ರವರಿಗೆ ತಾಲೂಕು ಭಜನಾ ಪರಿಷತ್ ವತಿಯಿಂದ ಅಭಿನಂದನೆ

Suddi Udaya

ಪಜಿರಡ್ಕ ಸೇತುವೆಯ ಡ್ಯಾಮ್ ಸ್ವಚ್ಛಗೊಳಿಸಿದ ಸ್ಥಳೀಯರು

Suddi Udaya

ವೇಣೂರು: ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ ಕಾಲೇಜಿನಲ್ಲಿ ಅಂಬೇಡ್ಕರ್ ಜಯಂತಿ

Suddi Udaya

ಗ್ರಾಮಗಳಲ್ಲಿ ಕಿರು ಉದ್ದಿಮೆಗಳ ಮೂಲಕ ಲಕ್ಷಾಂತರ, ಸ್ವ ಉದ್ಯೋಗಗಳನ್ನು ಸೃಷ್ಟಿಸಿದ ಗ್ರಾಮಾಭಿವೃದ್ಧಿ ಯೋಜನೆಗೆ ಎಂ.ಎಸ್.ಎಂ.ಇ. ಬ್ಯಾಂಕಿಂಗ್ ಶ್ರೇಷ್ಠತಾ ಪ್ರಶಸ್ತಿ

Suddi Udaya

ಮದ್ದಡ್ಕ ಶ್ರೀರಾಮ ಭಜನಾ ಮಂದಿರದಲ್ಲಿ ಶ್ರೀರಾಮ ನವಮಿ ಉತ್ಸವ

Suddi Udaya
error: Content is protected !!