ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಮಾಲಾಡಿ: ಕೊಲ್ಪೆದಬೈಲುನಲ್ಲಿ ಹಾಡಹಾಗಲೇ ಮನೆಗೆ ನುಗ್ಗಿದ್ದ ಕಳ್ಳರು: ಚಿನ್ನಾಭರಣ ಸೇರಿ ನಗದು ಕಳವು

ಮಾಲಾಡಿ : ಇಲ್ಲಿಯ ಕೊಲ್ಪೆದಬೈಲು ಎಂಬಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಹಾಡಹಾಗಲೇ ಕಳ್ಳರು ಮನೆಗೆ ನುಗ್ಗಿ ಕಪಾಟಿನಲ್ಲಿದ್ದ ಚಿನ್ನಾಭರಣ ಹಾಗೂ ನಗದು ರೂ 30,000/- ವನ್ನು ಕಳವು ಗೈದಿರುವ ಘಟನೆ ಎ.20 ರಂದು ನಡೆದಿದೆ.

ಘಟನೆ ವಿವರ: ಮಾಲಾಡಿ ಕೊಲ್ಪೆದಬೈಲು ನಿವಾಸಿ ಶ್ರೀಮತಿ ವಸಂತಿ ಹೆಗ್ಡೆ ಎಂಬವರ ದೂರಿನಂತೆ ವಸಂತಿ ಹೆಗ್ಡೆ, ಅವರ ಮಗ ಹಾಗೂ ಸೊಸೆ ಎ.20 ರಂದು ಬೆಳ್ತಂಗಡಿಗೆ ತೆರಳಿದ್ದು ಸಂಜೆ ವಾಪಾಸು ಮನೆಗೆ ಬಂದು ನೋಡಿದಾಗ, ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಯಾರೋ ಕಳ್ಳರು ವಸಂತಿ ಹೆಗ್ಡೆರವರ ಮನೆಯ ಮುಂದಿನ ಬಾಗಿಲಿಗೆ ಹಾಕಿರುವ ಬೀಗದ ಕೊಂಡಿಯನ್ನು ಮುರಿದು ಮನೆಯೊಳಗೆ ಪ್ರವೇಶಿಸಿ ವಸಂತಿ ಹೆಗ್ಡೆ ರವರ ಕೋಣೆಯ ಕಪಾಟುಗಳಲ್ಲಿದ್ದ ಚಿನ್ನಾಭರಣಗಳನ್ನು ಹಾಗೂ ನಗದು ರೂ 30,000/- ಹಣವನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಕಳವಾದ ಚಿನ್ನಾಭರಣಗಳ ಒಟ್ಟು ತೂಕ 160.5 ಗ್ರಾಂ ಆಗಿದ್ದು ಇದರ ಮೌಲ್ಯ ರೂ 13,72,000/- ಆಗಿರುತ್ತದೆ. ನಗದು ಸೇರಿ ಕಳವಾದ ಚಿನ್ನಾಭರಣಗಳ ಒಟ್ಟು ಮೌಲ್ಯ ರೂ 14,02,000/- ಆಗಿರುತ್ತದೆ.

ಈ ಬಗ್ಗೆ ಪುಂಜಾಲಕಟ್ಟೆ ಠಾಣಾ ಅ.ಕ್ರ 25/2025 ಕಲಂ: 331(3), 305 BNS- 2023 ಯಂತೆ ಪ್ರಕರಣ ದಾಖಲಾಗಿರುತ್ತದೆ.

Related posts

ನ.9: ಬೆಳ್ತಂಗಡಿ ರೋಟರಿ ಕ್ಲಬ್‌ನಿಂದ ದೇಸಿ ನಾಯಿ ಮತ್ತು ಬೆಕ್ಕಿನ ಮರಿಗಳ ಉಚಿತ ದತ್ತು ಕೊಡುವ ಶಿಬಿರ

Suddi Udaya

ಮಚ್ಚಿನ: ಕುತ್ತಿನ ಸರಕಾರಿ ಶಾಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ

Suddi Udaya

ಪುತ್ತಿಲ‌ ಗ್ರಾಮದ ಪಲ್ಕೆ ಎಂಬಲ್ಲಿ ಕಾಯಾ೯ಚರಿಸುತ್ತಿದ್ದ ಆಕ್ರಮ‌ ಕಾಸಾಯಿಖಾನೆಗೆ ಪೊಲೀಸರು ದಾಳಿ: ಆರೋಪಿಗಳು ಪರಾರಿ, ಜಾನುವಾರು ಹಾಗೂ ಸೋತ್ತುಗಳ ವಶ

Suddi Udaya

ನೇತ್ರಾವತಿ ನದಿಯಲ್ಲಿ ಬಿದ್ದು ಮಂಜೊಟ್ಟಿಯ ಯುವಕ ಮೃತ್ಯು

Suddi Udaya

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯಲ್ಲಿ ಶಾಲಾ ಸಂಸತ್ತು ಉದ್ಘಾಟನೆ

Suddi Udaya

ಆರ್ಥಿಕ ಇಲಾಖೆಯ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿ ಹೊರಸಂಪನ್ಮೂಲ ನೌಕರರಿಂದ ರಕ್ಷಿತ್ ಶಿವರಾಂ ರವರಿಗೆ ಮನವಿ

Suddi Udaya
error: Content is protected !!