ವೇಣೂರು: ಆರಂಬೋಡಿಯಲ್ಲಿರುವ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಟೋಟಲ್ ಕ್ಲೀನ್ ಲ್ಯಾಂಡ್ರಿ ಸರ್ವಿಸ್( ಟಿ.ಸಿ.ಎಲ್ ಲಾಂಡ್ರಿ ಸರ್ವಿಸ್) ಬೃಹತ್ ಘಟಕದ ಶಾಖೆ ವೇಣೂರು ಮುಖ್ಯ ರಸ್ತೆಯ ಜಿನಪ್ರಸಾದ ಕಾಂಪ್ಲೆಕ್ಸ್‌ನ ಮಹಡಿಯಲ್ಲಿ ಮೇ 20ರಂದು ಶುಭಾರಂಭಗೊಂಡಿತು.

ವೇಣೂರಿನ ನಮನ ಕ್ಲಿನಿಕ್‌ನ ಜನಪ್ರಿಯ ವೈದ್ಯರಾದ ಡಾ. ಶಾಂತಿಪ್ರಸಾದ್‌ರವರು ಶಾಖೆಯನ್ನು ಉದ್ಘಾಟಿಸಿ, ಈ ಸೇವೆ ನಮ್ಮ ಊರಿಗೆ ಕಲ್ಪಿಸಿದ ಮಾಲಕರನ್ನು ಅಭಿನಂದಿಸಿ ಶುಭಹಾರೈಸಿದರು.
ವಕ್ಕಾಡಿಗೋಳಿ ಜುಮ್ಮಾ ಮಸೀದಿಯ ಖತೀಬರಾದ ಮುಹಮ್ಮದ್ ನಿಯಾಝ್ ಫೈಝಿಯವರು ಪ್ರಾರ್ಥನೆ ನೆರವೇರಿಸಿ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಪ್ರಸಾದ್ ಜೈನ್, ರಿಯಾಂತ್, ವಿ.ಕೆ ಮೊಹಮ್ಮದ್ ಅಲ್ತಾಫ್, ಖಾಲಿದ್ ಕಲ್ಲಡ್ಕ, ಹೆಚ್.ಎ ರಹೀಮಾನ್ ವಕ್ಕಾಡಿಗೋಳಿ, ಸದಾಶಿವ ಭಂಡಾರಿ, ಹರೀಶ್ ಕುಮಾರ್ ಪೊಕ್ಕಿ, ಹರೀಶ್ ನಾಯಕ್, ದಯಾನಂದ ಹೆಗ್ಡೆ, ಆದಂ ನಡ್ತಿಕಲ್, ಪ್ರಶಾಂತ್ ನಾಯಕ್, ಅಂಡಿಂಜೆ ಸರಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕರಾದ ಶಿವಶಂಕರ್ ಭಟ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಘಟಕದ ಮಾಲಕರಾದ ಎಸ್. ಮೊಹಮ್ಮ್‌ರವರು ಸ್ವಾಗತಿಸಿ, ಅತಿಥಿಗಳನ್ನು ಗೌರವಿಸಿ, ಎಲ್ಲರ ಸಹಕಾರ ಕೋರಿದರು. ಪತ್ರಕರ್ತ ಹೆಚ್. ಮಹಮ್ಮದ್ ವೇಣೂರು ಕಾರ್ಯಕ್ರಮ ನಿರೂಪಿಸಿದರು. ಅಕ್ಬರ್ ವೇಣೂರು ವಂದಿಸಿದರು.