July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿಚುನಾವಣೆ

ತಾಲೂಕಿನ ಅಭಿವೃದ್ದಿಯಲ್ಲಿ ಭ್ರಷ್ಟಾಚಾರ, ಸ್ಜಜನಪಕ್ಷಪಾತಕ್ಕೆ ಅವಕಾಶವಿಲ್ಲ- ರಕ್ಷಿತ್ ಶಿವರಾಂ ಭರವಸೆ

ಬೆಳ್ತಂಗಡಿ:- ಅಭಿವೃದ್ಧಿ ಹೆಸರಿನಲ್ಲಿ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದೆ. ಮಿತಿ ಮೀರಿ ಟಿಂಬರ್ ಮಾಫಿಯಾ, ಅಕ್ರಮ ಮರಳು ಗಣಿಗಾರಿಕೆಗೆ ನೇತ್ರಾವತಿಯ ಒಡಲನ್ನೇ ಬಗೆದು ತಿನ್ನುತ್ತಿದ್ದಾರೆ. ತಾಲೂಕಿನಲ್ಲಿ ಕುಡಿಯುವ ನೀರಿಗೂ ಅಭಾವ ಬಂದಿರುವುದಕ್ಕೆ ಅಕ್ರಮ ಮರಳುಗಣಿಗಾರಿಕಯೇ ಕಾರಣ ಎಂದು ಬೆಳ್ತಂಗಡಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಭರವಸೆ ಹೇಳಿದರು.

ಈ ಬಾರಿ ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಬೇಕಾದ್ರೆ ಕಾಂಗ್ರೆಸ್ ಪಕ್ಷವನ್ನ ಗೆಲ್ಲಿಸಿ. ತಾಲೂಕಿನ ಅಭಿವೃದ್ಧಿಯಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ನೀಡುವುದಿಲ್ಲ, ಸ್ವಜನಪಕ್ಷಪಾತಕ್ಕೆ ಒಳಗಾಗುವುದಿಲ್ಲ ಎಂದರು.ವಿಧಾನಸಭಾ ಕ್ಷೇತ್ರದ ಬೈಪಾಡಿ, ಪದ್ಮಂಜ, ಬಾರ್ಯ, ತೆಕ್ಕಾರು ,ಇಳಂತಿಲ ಮತ್ತು ಕರಾಯ ಸೇರಿದಂತೆ ಹಲವು ಕಡೆ ಮಾಜಿ ಶಾಸಕ ವಸಂತ ಬಂಗೇರ ಅವರೊಟ್ಟಿಗೆ ಬಿರುಸಿನ ಪ್ರಚಾರ ನಡೆಸಿದರು. ಇದೇ ವೇಳೆ ಮಾತನಾಡಿದ ಮಾಜಿ ಶಾಸಕ ವಸಂತ ಬಂಗೇರ ಅವರು, ಬಡವರಿಗೆ ನೀಡುವ ಅಕ್ರಮ-ಸಕ್ರಮದ ಹಕ್ಕುಪತ್ರದಲ್ಲೂ ಮಧ್ಯವರ್ತಿಗಳಿಂದ ವಸೂಲಿ ಮಾಡಿದ್ದಾರೆ.

ಈ ಬಾರಿ ಇಂತವರನ್ನು ಸೋಲಿಸಬೇಕೆಂದು ಕರೆ ನೀಡಿದರು ಪ್ರಚಾರ ಸಭೆಯಲ್ಲಿ ರಕ್ಷಿತ್ ಶಿವರಾಂ ಪರ ಮತಯಾಚಿಸಿದ ಶ್ರೀ ಕ್ಷೇತ್ರ ಕುದ್ರೋಳಿ ಕೋಶಾಧಿಕಾರಿ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ರಾಮಯ್ಯ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರುವುದು ನಿಶ್ಚಿತ. ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳು, ಐದು ಗ್ಯಾರೆಂಟಿಗಳ ಜನ ಸಾಮಾನ್ಯಾರ ಪರವಾಗಿದೆ ಅಂದರು ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಶಾಹಲ್ ಹಮೀದ್ ,ಪಕ್ಷದ ಪ್ರಮುಖರಾದ ಜಯವಿಕ್ರಮ್ ,ಹರೀಶ್ ಗೌಡ, ಉಮವಾತಿ ಗೌಡ,ಅಭ್ಥುಲ್ ರಝಕ್ ತೆಕ್ಕಾರು,ಅಯುಬ್ ಡಿ.ಕೆ, ಈಶ್ವರ ಭಟ್ ಮಾಯ್ತಿಲೋಡಿ,ಶ್ರೀಮತಿ ಉಷ ಶರತ್ ,ಮನೋಹರ್ ಇಳಂತಿಲ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Related posts

ನಡ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಮಿತಿಯಿಂದ ದಿ. ಕೆ ವಸಂತ ಬಂಗೇರರಿಗೆ ನುಡಿನಮನ

Suddi Udaya

ಪದ್ಮುಂಜ ಮುಗೇರಡಿ ನಿವಾಸಿ ಸುಶೀಲ ಶೆಟ್ಟಿ ನಿಧನ

Suddi Udaya

ವಾಣಿ ಶಿಕ್ಷಣ ಸಂಸ್ಥೆಗೆ ಅಮೇರಿಕದ ಡಾ. ರಾಮಯ್ಯ ಗೌಡ, ಶ್ರೀಮತಿ ಕೋನಿ ದಂಪತಿ ಭೇಟಿ

Suddi Udaya

ನಡ : ಗ್ರಾಮ ಪಂಚಾಯತ್ ಗ್ರಾಮಸಭೆ

Suddi Udaya

ಬಜಿರೆ ಗ್ರಾಮದ ಬಾಡಾರು ಮನೆಯ ನಾರಾಯಣ ಪೂಜಾರಿ ನಿಧನ

Suddi Udaya

ಮಾ.20-28: ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ- ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ

Suddi Udaya
error: Content is protected !!