April 22, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಗೇರುಕಟ್ಟೆ: ಮಕ್ಕಳ ವಸಂತ ಚೈತನ್ಯ ಶಿಬಿರದ ಸಮಾರೋಪ ಸಮಾರಂಭ

ಗೇರುಕಟ್ಟೆ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ಕರ್ನಾಟಕ ನೇತ್ರಾವತಿ ವಲಯ ಮಂಗಳೂರು ಕಳಿಯ ಶಾಖೆಯ ವತಿಯಿಂದ ಕ್ಷೀರಸಂಗಮ ಸಭಾಭವನದಲ್ಲಿ ಜರಗಿದ 15 ದಿನಗಳ ಮಕ್ಕಳ ವಸಂತ ಚೈತನ್ಯ ಶಿಬಿರದ ಸಮಾರೋಪವು ಭಾರತ ಮಾತಾ ಪೂಜನದೊಂದಿಗೆ ಜರಗಿತು.

ಸಮಾರಂಭದ ಅಧ್ಯಕ್ಷತೆಯನ್ನು ವಿದ್ಯಾರ್ಥಿ ತನ್ಮಯಕೃಷ್ಣ ವಹಿಸಿದ್ದರು. ಮುಖ್ಯ ಮಾತುಗಾರರಾಗಿದ್ದ ಯೋಗ ಬಂಧು ತುಕಾರಾಮ ಶಿಬಿರದಲ್ಲಿ ಪಡೆದ ಅನುಭವಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು. ವಿದ್ಯಾರ್ಥಿಗಳಾದ ಆದ್ಯವಿ, ಸನ್ನಿಧಿ, ಅರ್ಜುನ ಮತ್ತು ಪೋಷಕರಾದ ಮಾಜಿ ಯೋಧ ವಿಕ್ರಮ, ಶಿಕ್ಷಕಿ ವಿದ್ಯಾ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಆರಂಭದಲ್ಲಿ ವಿದ್ಯಾರ್ಥಿಗಳು, ಪೋಷಕರು, ಯೋಗ ಬಂಧುಗಳು ಅಗ್ನಿಹೋತ್ರ ಮತ್ತು ಭಾರತ ಮಾತಾ ಪೂಜನ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕೇಂದ್ರದ ಮುಖ್ಯ ಶಿಕ್ಷಕಿ ಪ್ರೇಮಲತಾ ಗಣೇಶ್ ಮಾಹಿತಿ ನೀಡಿದರು. ಶಿಬಿರಾರ್ಥಿಗಳಿಗೆ ಭಗವದ್ಗೀತೆಯ ಪುಸ್ತಕಗಳನ್ನು ವಿತರಿಸಲಾಯಿತು.

ಮುಖ್ಯ ಶಿಕ್ಷಕರೊಂದಿಗೆ ಕೇಂದ್ರದ ಸಹ ಶಿಕ್ಷಕ ಸುಕೇಶ್, ಶಿಬಿರದ ಶಿಕ್ಷಕರಾದ ಸತೀಶ್ ಮತ್ತು ನಿತಿನ್, ಯೋಗಬಂಧು ದಿವಾಕರ ಆಚಾರ್ಯ ಗೇರುಕಟ್ಟೆ, ಭಾರತಿ ಶಿಬಿರದ ದೈನಂದಿನ ಚಟುವಟಿಕೆಗಳನ್ನು ನಡೆಸಿಕೊಡುತ್ತಿದ್ದರು. ಕಾರ್ಯಕ್ರಮದಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಜನಾರ್ದನ ಗೌಡ, ಕಳಿಯ ಗ್ರಾಮ ಪಂಚಾಯಿತಿನ ಮಾಜಿ ಅಧ್ಯಕ್ಷರಾದ ಸುಭಾಷಿಣಿ, ಕೇಶವ, ಸುಧಾಕರ ಮಜಲು, ರಾಜೇಶ್, ಅಶೋಕ ಆಚಾರ್ಯ, ವಸಂತ ಆಚಾರ್ಯ, ಗಣೇಶ್ ಮೊದಲಾದವರು ಉಪಸ್ಥಿತರಿದ್ದರು.

ಶಾಖೆಯ ಸಂಚಾಲಕ ವಿಜಯ ಕಲಾಯಿದೊಟ್ಟು, ವರದಿ ಪ್ರಮುಖ ಕೇಶವ ಪೂಜಾರಿ, ಗಣೇಶ, ಶುಭ ಮಂಗಳ, ಮೀರಾ, ವಿಶ್ರುತ, ಕಾವ್ಯ ಮತ್ತು ಎಲ್ಲಾ ಯೋಗ ಬಂಧುಗಳು ಶಿಬಿರದ ಯಶಸ್ಸಿಗೆ ಸಹಕರಿಸಿದ್ದರು. ಪ್ರಣಮ್ಮ ಪ್ರಾರ್ಥಿಸಿ, ಅವಿನ್ನು ಸ್ವಾಗತಿಸಿದರು. ಸನ್ನಿಧಿ ಶಿಬಿರದ ವರದಿ ವಾಚಿಸಿದರು. ಆಕರ್ಷ ಕಾರ್ಯಕ್ರಮ ನಿರೂಪಿಸಿದರು. ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಅದ್ವಿತ್ ವಂದಿಸಿದರು.

Related posts

ಮುಂಡೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಅಧ್ಯಕ್ಷರು, ಸದಸ್ಯರ ನೇಮಕ

Suddi Udaya

ನಿರಂಜನ್ ಬಾವಂತಬೆಟ್ಟು ರವರ ನಿಧನಕ್ಕೆ ಡಾ. ಡಿ ವೀರೇಂದ್ರ ಹೆಗ್ಗಡೆಯವರಿಂದ ಸಂತಾಪ

Suddi Udaya

ಕಳಿಯ ಗ್ರಾ.ಪಂ. ನಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

Suddi Udaya

ಉಜಿರೆ ರುಡ್ ಸೆಟ್ ಸಂಸ್ಥೆಯ ಹುಟ್ಟು ಹಬ್ಬ ಮತ್ತು ವಿಶ್ವ ಯುವ ಕೌಶಲ್ಯ ದಿನಾಚರಣೆ

Suddi Udaya

ನಕ್ಸಲ್ ವಿಕ್ರಮ್ ಗೌಡ ಎನ್ ಕೌಂಟರ್ ಪ್ರಕರಣ: ತಕ್ಷಣ ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು: ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸಂಚಾಲಕ ಶೇಖರ್ ಲಾಯಿಲ ಒತ್ತಾಯ

Suddi Udaya

ಕಳೆಂಜ: ಕೃಷಿಕ ಪೆರ್ನು ಗೌಡ ನಿಧನ

Suddi Udaya
error: Content is protected !!