ಮುಗೇರಡ್ಕ ಸರಕಾರಿ ಶಾಲಾ ಸೇವಾ ಟ್ರಸ್ಟ್ (ರಿ) ಮೊಗ್ರು, ಇದರ ವತಿಯಿಂದ ಎಪ್ರಿಲ್28 ರಿಂದ ಮೇ 3 ರ ವರೆಗೆ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮೊಗ್ರು ಇಲ್ಲಿ ಮಕ್ಕಳಿಗೆ ರಜಾಮಜಾ ಬೇಸಿಗೆ ಶಿಬಿರ ಹಾಗೂ ಸಾರ್ವಜನಿಕರಿಗೆ ಯೋಗ ಶಿಬಿರ ಆಯೋಜಿಸಲಾಗಿದೆ.
4 ವರ್ಷದಿಂದ 14 ವರ್ಷದ ಮಕ್ಕಳಿಗೆ ಶಿಬಿರದಲ್ಲಿ ಮನರಂಜನೆ ಆಟಗಳು, ಕೌಶಲ್ಯ ತರಬೇತಿ, ವ್ಯಕ್ತಿತ್ವ ನಿರ್ಮಾಣದ ಕಲೆಗಳು, ಯೋಗಾಸನ, ಪ್ರಾಣಾಯಾಮ ಹಾಗೂ ಧ್ಯಾನದ ತರಬೇತಿಯೊಂದಿಗೆ ವಿದ್ಯಾರ್ಥಿಗಳ ಏಕಾಗ್ರತೆ, ಜ್ಞಾಪನಾಶಕ್ತಿ ಹಾಗೂ ಆರೋಗ್ಯವೃದ್ಧಿಗೆ ತರಬೇತಿ ನೀಡಲಾಗುವುದು. ಶಿಬಿರದ 6 ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮ ಭೋದನೆಯ ಅನುಭವಿ ಶಿಕ್ಷಕಿಯರಿಂದ ಇಂಗ್ಲೀಷ್ ಮಾತುಗಾರಿಕೆ ಹಾಗೂ ಬರವಣಿಗೆಯ ತರಬೇತಿಯು ಸಿಗಲಿದೆ. ಶಿಬಿರಾರ್ಥಿಗಳಿಗೆ ಆಕರ್ಷಕ ಉಡುಗೊರೆಯಾಗಿ ಕ್ಯಾಪ್ ಕಿಟ್ ಉಚಿತವಾಗಿ ನೀಡಲಾಗುವುದು.
ನೊಂದಾವಣೆಗೆ ಸಂಪರ್ಕಿಸಿ : 9845588740 \ 9606303907