September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ತೆಕ್ಕಾರು ಗೋಪಾಲಕೃಷ್ಣ ದೇವರ ಬ್ರಹ್ಮಕಲಶೋತ್ಸವಕ್ಕೆ ತಾಲೂಕಿನಿಂದ ಹೊರೆ ಕಾಣಿಕೆ; ಸಮಾಲೋಚನ ಸಭೆ

ಬೆಳ್ತಂಗಡಿ: ಎ.25 ರಿಂದ ಮೇ 3 ರವರೆಗೆ ತೆಕ್ಕಾರು ಗ್ರಾಮದಲ್ಲಿರುವ ಶ್ರೀ ಗೋಪಾಲಕೃಷ್ಣ ದೇವರ ಬ್ರಹ್ಮಕಲಶೋತ್ಸವಕ್ಕೆ ತಾಲೂಕು ಮಟ್ಟದಿಂದ ಹೊರ ಕಾಣಿಕೆ ಸಮರ್ಪಿಸುವ ಬಗ್ಗೆ ಸಮಾಲೋಚನ ಸಭೆಯನ್ನು ನಡೆಸಲಾಯಿತು.

ಈ ವೇಳೆ ತಾಲೂಕಿನ ಪ್ರತಿ ಗ್ರಾಮದಿಂದ ಹೊರೆ ಕಾಣಿಕೆ ತೆಗೆದುಕೊಂಡು ಬರುವುವಂತೆ ವಿನಂತಿಸಲಾಯಿತು. ಎ.27 ರಂದು ಬೆಳಿಗ್ಗೆ ಗುರುವಾಯನಕೆರೆಯ ನಮ್ಮ ಮನೆ ಹವ್ಯಕ ಭವನ ಹಾಗೂ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದಿಂದ ಏಕಕಾಲದಲ್ಲಿ ಹೊರೆ ಕಾಣಿಕೆ ಉದ್ಘಾಟನೆಗೊಳ್ಳಲಿದ್ದು ಪ್ರತಿ ಗ್ರಾಮದ ಭಕ್ತರು ಹೊರೆಕಾಣಿಕೆ ಸಮರ್ಪಿಸಬೇಕೆಂದು ಹಾಗೂ ಎ. 30 ರಂದು ಪ್ರತಿಷ್ಠಾ ದಿವಸದಂದು ತಾಲೂಕಿನ ಎಲ್ಲಾ ಹಿಂದೂ ಬಂಧುಗಳು ಬೃಹತ್ ಸಂಖ್ಯೆಯಲ್ಲಿ ಬರಬೇಕೆಂದು ವಿನಂತಿಸಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಶಶಿಧರ್ ಶೆಟ್ಟಿ ಬರೋಡ, ಕಾರ್ಯಾಧ್ಯಕ್ಷ ಲಕ್ಷ್ಮಣ್, ಪ್ರಧಾನ ಸಂಚಾಲಕ ಹರೀಶ್ ಪೂಂಜ ಹಾಗೂ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಹಾಗೂ ಗೋಪಾಲಕೃಷ್ಣ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಕಾರ್ಯದರ್ಶಿ ನವೀನ್ ನೆರಿಯ ಹಾಗೂ ತಾಲೂಕಿನ ಎಲ್ಲಾ ಧಾರ್ಮಿಕ ಮುಖಂಡರುಗಳು ಉಪಸ್ಥಿತರಿದ್ದರು.

Related posts

ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ದೀಪಾರಾಧನೆ ರಂಗಪೂಜೆ

Suddi Udaya

ಜೆಸಿಐ ಕೊಕ್ಕಡ ಕಪಿಲಾ ಘಟಕದ ವತಿಯಿಂದ ಜೆಸಿ ಸಪ್ತಾಹ ಅಂಗವಾಗಿ ಹೂಗುಚ್ಚ ತಯಾರಿಕಾ ತರಬೇತಿ ಕಾರ್ಯಕ್ರಮ

Suddi Udaya

ಪಂಚ ಗ್ಯಾರಂಟಿ ಯೋಜನೆಯ ತಾಲೂಕು ಮಟ್ಟದ ಅನುಷ್ಟಾನ ಸಮಿತಿ ಸಭೆ

Suddi Udaya

ಕೊಯ್ಯೂರು: ‘ಭೀಮ್ ರಮಾ’ ಬಳಗದಿಂದ ಶಾಲೆಗಳಿಗೆ ‘ಸಂವಿಧಾನ ಪೀಠಿಕೆ’ ಹಸ್ತಾಂತರ

Suddi Udaya

ಕನ್ಯಾಡಿ: ಕುರ್ಮಾಣಿಯ ಮಹಿಳೆ ನೇಣು ಬಿಗಿದು ಆತ್ಮಹತ್ಯೆ

Suddi Udaya

ಪಡಂಗಡಿ: ಕುದ್ರೆಂಜ ಬಳಿ ಸೇತುವೆ ಕುಸಿತ: ಸಂಪರ್ಕ ಕಡಿತ

Suddi Udaya
error: Content is protected !!