ಲಾಯಿಲ: ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನದ ಅಷ್ಟ ಬಂದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಎ.21ರಂದು ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀ ಸಂಪುಟ ನರಸಿಂಹ ಮಠ ಸುಬ್ರಹ್ಮಣ್ಯ ದ ಪರಮಪೂಜ್ಯ ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.

ಅಧ್ಯಕ್ಷತೆಯನ್ನು ಪೀತಾಂಬರ ಹೇರಜೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ತಿನ ಸದಸ್ಯ ಪ್ರತಾಪ್ ಸಿಂಹ ನಾಯಕ್, ಮಾಜಿ ಸಚಿವ ಬಿ ರಮನಾಥ ರೈ, ಬೆಳ್ತಂಗಡಿ ರೋಟರಿ ಅಧ್ಯಕ್ಷ ಪೂರನ್ ವರ್ಮ, ಬ್ರಹ್ಮಕಲಶೋತ್ಸವದ ಅಧ್ಯಕ್ಷ ರಕ್ಷಿತ್ ಶಿವರಾಮ್ , ಸಂಪತ್ ಬಿ ಸುವರ್ಣ, ಬಿ ವಿಠ್ಠಲ್ ಶೆಟ್ಟಿ, ಕಾರ್ಯದರ್ಶಿ ಕುಶಾಲಪ್ಪ ಗೌಡ ಉಪಸ್ಥಿತರಿದ್ದರು.


ಪ್ರೊ| ಎ ಕೃಷ್ಣಪ್ಪ ಪೂಜಾರಿಯವರು ಸ್ವಾಗತಿಸಿ ಪ್ರಸ್ತಾವಿಸಿದರು. ಸುಧಾ ಆರ್ ಸಾಲಿಯಾನ್ ಮತ್ತು ಸೌಮ್ಯ ಲಾಯಿಲ ಕಾರ್ಯಕ್ರಮ ನಿರೂಪಿಸಿದರು. ಜಯನಂದ ಲಾಯಿಲ ಧನ್ಯವಾದ ಸಮರ್ಪಿಸಿದರು. ವಸಂತ ಸುವರ್ಣ ಮತ್ತು ಸೌಮ್ಯ ಲಾಯಿಲ ಸಹಕರಿಸಿದರು.
ರಾತ್ರಿ ನಡೆದ ಸಂಸ್ಕೃತಿಕ ಕಾರ್ಯಕ್ರಮದಲ್ಲಿ ಮೈಸೂರು ಶ್ರೀ ರಾಮಚಂದ್ರ ರಾವ್ ರವರಿಂದ ನಡೆದ ದಾಸರ ಹಾಡುಗಳು 3 ಗಂಟೆಗಳ ಕಾಲ ನೆರೆದಿದ್ದ ಪ್ರೇಕ್ಷಕರ ಮನಸೂರಗೊಂಡಿತು. ಕಣ್ಣಾಜೆಯ ದುರ್ಗಾ ಭಜನಾ ಮಂಡಳಿಯವರಿಂದ ಕುಣಿತ ಭಜನೆ ನಡೆಯಿತು.