27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮುಗ್ಧ ಪ್ರವಾಸಿಗರನ್ನು ಹತ್ಯೆಗೈಯ್ಯುವ ಮೂಲಕ ಉಗ್ರರು ಹೇಡಿತನವನ್ನು ಪ್ರದರ್ಶಿಸಿದ್ದಾರೆ: ಪ್ರತಾಪ್‌ಸಿಂಹ ನಾಯಕ್


ಬೆಳ್ತಂಗಡಿ: ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ಅವರ ನೇತೃತ್ವದ ಕೇಂದ್ರ ಸರ್ಕಾರ ಭಾರತದ ಕಿರೀಟವೆನಿಸಿದ ಶಾರದೆಯ ನೆಲೆಬೀಡಾದ ಜಮ್ಮು-ಕಾಶ್ಮೀರವನ್ನು ಸಂರಕ್ಷಿಸಿ ಆರ್ಟಿಕಲ್ 370 ರದ್ದುಗೊಳಿಸುವ ಮತ್ತು ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತೊಗೆಯಲು ತೆಗೆದುಕೊಂಡ ದಿಟ್ಟ ಕ್ರಮದ ಪರಿಣಾಮ ಜಮ್ಮು ಕಾಶ್ಮೀರ ಸಾಮಾನ್ಯ ಸ್ಥಿತಿಗೆ ಬಂದಿರೋದರಿಂದ ಉಗ್ರರು ಅತೀವ ಹತಾಶೆಗೊಂಡಿದ್ದು ಮುಗ್ಧ ಪ್ರವಾಸಿಗರನ್ನು ಹತ್ಯೆಗೈಯ್ಯುವ ಮೂಲಕ ತಮ್ಮ ಹೇಡಿತನವನ್ನು ಪ್ರದರ್ಶಿಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್ ಹೇಳಿದ್ದಾರೆ.


ಈ ಹೇಡಿತನದ ಉಗ್ರರ ದಾಳಿಗೆ ಬಲಿಯಾಗಿರುವವರ ಸಾವು ಅತ್ಯಂತ ನೋವು ತಂದಿದೆ. ಮೃತರ ಕುಟುಂಬಗಳಿಗೆ ಈ ದಾರುಣ ಘಟನೆಯ ಆಘಾತ ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತನು ಕರುಣಿಸಲಿ, ಮುಂದಿನ ದಿನಗಳಲ್ಲಿ ಇಂತಹ ಹತಾಶ ಉಗ್ರರ ರಣಹೇಡಿ ಕೃತ್ಯಗಳು ಮರುಕಳಿಸದಂತೆ ಕೇಂದ್ರ ಸರ್ಕಾರದಿಂದ ಉಗ್ರರಿಗೆ ಸಂದೇಶ ರವಾನೆಯಾಗಲಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Related posts

ಮಚ್ಚಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರಾಣಿಜನ್ಯ ರೋಗಗಳ ಬಗ್ಗೆ ಮಾಹಿತಿ ಕಾರ್ಯಾಗಾರ

Suddi Udaya

ಬೆಂದ್ರಾಳ ಸೈಂಟ್ ಸಾವಿಯೋ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ ಶಿಕ್ಷಕ ಸಭೆ: ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಬಂದಾರು ಕುರಾಯ ಶ್ರೀ ಸದಾಶಿವ ದೇವಸ್ಥಾನದ ಆಡಳಿತ ಅಧಿಕಾರಿಯಾಗಿ ಪುರುಷೋತ್ತಮ ನೇಮಕ

Suddi Udaya

ಉಜಿರೆ: ಅನುಗ್ರಹ ಪ.ಪೂ. ಕಾಲೇಜಿನ ವಿದ್ಯಾರ್ಥಿ ಸಂಘ ರಚನೆ

Suddi Udaya

ಬೆಂಗಳೂರು ಕಾವ್ಯಶ್ರೀ ಸೇವಾ ಟ್ರಸ್ಟ್” ವತಿಯಿಂದ ಬಜಿರೆ ಶಾಲೆಯ ಇಬ್ಬರು ಅತಿಥಿ ಶಿಕ್ಷಕಿಯರಿಗೆ ಅತ್ಯುತ್ತಮ ಅತಿಥಿ ಶಿಕ್ಷಕ ರತ್ನ ಪ್ರಶಸ್ತಿ ಪ್ರದಾನ

Suddi Udaya

ಉಜಿರೆ: ಎಸ್.ಡಿ.ಎಮ್ ಕಾಲೇಜಿನಲ್ಲಿ ವಿಶ್ವ ದೂರಸಂಪರ್ಕ ದಿನ: ವಿಶೇಷ ಉಪನ್ಯಾಸ

Suddi Udaya
error: Content is protected !!