ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಸಭಾಂಗಣದ ಉದ್ಘಾಟನಾ ಸಮಾರಂಭವು ಎ.28 ರಂದು ಐಬಿ ರಸ್ತೆಯಲ್ಲಿರುವ ಮಹಿಳಾ ಮಂಡಲಗಳ ಒಕ್ಕೂಟದಲ್ಲಿ ನಡೆಯಲಿದೆ.ಶಾಸಕ ಹರೀಶ್ ಪೂಂಜ ಕಾರ್ಯಕ್ರಮ ಉದ್ಘಾಟಿಸಲಿರುವರು.
ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಸಭಾಂಗಣ ಉದ್ಘಾಟಿಸಲಿದ್ದಾರೆ. ಒಕ್ಕೂಟದ ಅಧ್ಯಕ್ಷೆ ಸವಿತಾ ಜಯದೇವ ಅಧ್ಯಕ್ಷತೆ ವಹಿಸಲಿರುವರು. ದೀಪ ಪ್ರಜ್ವಲನೆಯನ್ನು ಬೆಸ್ಟ್ ಪೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್ ನೇರವೇರಿಸಲಿದ್ದಾರೆ.ಪ.ಪಂ.ಅಧ್ಯಕ್ಷ ಜಯಾನಂದ ಗೌಡ, ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆ ಮಾಲಕ ಮೋಹನ್ ಕುಮಾರ್, ಉದ್ಯಮಿ ಕಿರಣ್‌ಚಂದ್ರ ಪುಷ್ಪಗಿರಿ ಹಾಗೂ ದ.ಕ.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಉಸ್ಮನ್ ಎ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು.
ಕಾರ್ಯದರ್ಶಿ ಆಶಾ ಸತೀಶ್, ಗೌರವಾಧ್ಯಕ್ಷೆ ಶಾಂತ ಬಂಗೇರ, ಉಪಾಧ್ಯಕ್ಷೆ ಉಮಾ ಆರ್.ರಾವ್,ಸಂಚಾಲಕಿ ಲೋಕೇಶ್ವರಿ ವಿನಯಚ್ಚಂದ್ರ,ಜತೆ ಕಾರ್ಯದರ್ಶಿ ವಿನೋದಿನಿ ರಾಮಪ್ಪ, ಕೋಶಾಧಿಕಾರಿ ಉಷಾ ಲಕ್ಷ್ಮಣ ಗೌಡ ಹಾಗೂ ಪದಾಧಿಕಾರಿಗಳು ಮತ್ತು ಸರ್ವಸದಸ್ಯರು ಉಪಸ್ಥಿತರಿರುವರು ಎಂದು ಸಂಘಟಕರು ತಿಳಿಸಿದ್ದಾರೆ.