ಬೆಳ್ತಂಗಡಿ: ಜನಿವಾರವು ಕೇವಲ ನೂಲು ಅಲ್ಲ, ಅದು ಬ್ರಾಹ್ಮಣತ್ವದ ಸಂಕೇತ ಮತ್ತು ಜ್ಞಾನ ಸಂಪಾದನೆಗೆ ರಹದಾರಿ. ಇತ್ತೀಚೆಗೆ ನಡೆದ ಸಿಇಟಿ ಪರೀಕ್ಷಾ ಸಮಯದಲ್ಲಿ ಸರಕಾರದ ಆದೇಶ ಇಲ್ಲದಿದ್ದರೂ ಇಂತಹ ಪವಿತ್ರವಾದ ಜನಿವಾರವನ್ನು ತುಂಡರಿಸಿ, ಪವಿತ್ರವಾದ ಯಜ್ಯೋಪವೀತವನ್ನು ಪರೀಕ್ಷಾ ಪ್ರವೇಶಕ್ಕೆ ನಿರ್ಬಂಧವಾಗಿ ಪರಿಗಣಿಸಿ ದೇಹದಿಂದ ತೆಗೆಸಿರುವ ಅಧಿಕಾರಿಗಳ ಕ್ರಮವನ್ನು ವಿಪ್ರ ಸಮಾಜವು ಖಂಡಿಸುತ್ತದೆ ಎಂದು ಉಜಿರೆ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡ್ವೆಟ್ನಾಯ ಆಕ್ರೋಶ ವ್ಯಕ್ತಪಡಿಸಿದರು.

ಅವರು ಇತ್ತೀಚೆಗೆ ಸಿಇಟಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣಕ್ಕೆ ಸಂಬAಧಿಸಿ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಎ.೨೩ರಂದು ಬೆಳ್ತಂಗಡಿ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯನ್ನು ನೀಡಿ ಮಾತನಾಡಿದರು.
ಬ್ರಾಹ್ಮಣ ಸಮುದಾಯ ಸಾತ್ವಿಕ ಮತ್ತು ಆಸ್ತಿಕ ಶಕ್ತಿಯಾಗಿ ಇದ್ದುಕೊಂಡು ಶತಮಾನಗಳಿಂದ ಈ ದೇಶದಲ್ಲಿ ಎಲ್ಲಾ ರಂಗಗಳಲ್ಲಿಯೂ ಮಾರ್ಗದರ್ಶನ ನೀಡುತ್ತ ಬಂದಿದೆ. ಅಂತಹ ಸಮಾಜಕ್ಕೆ ಧಾರ್ಮಿಕ ಆಚರಣೆಯನ್ನು ಮಾಡುವುದಕ್ಕೆ ಬೇಕಾದ ಸ್ವಾತಂತ್ರö್ಯವನ್ನು ಕಸಿದುಕೊಳ್ಳುವಂತಹದ್ದನ್ನು ನಾವೆಲ್ಲ ಖಂಡಿಸುತ್ತೇವೆ. ಇಂತಹ ಕೆಲಸಗಳು ಇನ್ನೂ ಮುಂದೆ ಆಗಬಾರದು ಹಾಗೂ ಇಂತಹ ಕೆಲಸ ಮಾಡಿದವರ ಮೇಲೆ ಉಗ್ರವಾದ ಕ್ರಮವನ್ನು ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳಿಗೆ ಆಗ್ರಹಿಸಿದರು.
ವಕೀಲರಾದ ಧನಂಜಯ್ ರಾವ್ ಮಾತನಾಡಿ, ವಿಪ್ರ ಭಾಂದವರು ಸಮಸ್ತ ಲೋಕಕ್ಕೆ ಸನ್ಮಂಗಳ ಉಂಟಾಗಲಿ ಎಂದು ತಮ್ಮ ಮನೆಯಲ್ಲಿ ಕಾರ್ಯಕ್ರಮ ಆಗುವಾಗಲು ಪ್ರಾರ್ಥಿಸುತ್ತಾರೆ. ಸನಾತನ ಹಿಂದೂ ಪದ್ಧತಿಯ ಅವಿಭಾಜ್ಯ ಅಂಗವಾಗಿ, ನಮ್ಮಲ್ಲಿರುವಂತಹ ಆಚರಣೆ ಶ್ಲೋಕ, ಕಲೆಗಳನ್ನು ನಾವು ಅನುಚಾನವಾಗಿ ಹಿರಿಯರಿಂದ ಕಲಿತು ನಮ್ಮ ಕಿರಿಯರಿಗೆ ವರ್ಗಾವಣೆ ಮಾಡುವಂತಹ ಸಣ್ಣ ಸಮಾಜ ನಮ್ಮದು. ಜನಿವಾರವನ್ನು ತುಂಡರಿಸಿ ಸಿಇಟಿ ಪರೀಕ್ಷೆಯನ್ನು ಬರಿಸುವಂತಹ ವ್ಯವಸ್ಥೆ, ಸರಕಾರದ ಆದೇಶ ಇಲ್ಲದಿದ್ದರೂ ಕೂಡ ಅಧಿಕಾರಿಗಳು ಮಾಡಿ ತೋರಿಸಿದ್ದಾರೆ. ಸಿಇಟಿ ಪರೀಕ್ಷೆ ಬರೆಯುವುದಕ್ಕೆ ಆಗದ ವಿದ್ಯಾರ್ಥಿಗಳಿಗೆ ಸರಕಾರ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಸಿಇಟಿ ಪರೀಕ್ಷೆ ಬರೆಯದೆ ಮುಂದಿನ ಉನ್ನತ ವಿದ್ಯಾಭ್ಯಾಸಕ್ಕೆ ವ್ಯವಸ್ಥೆ ಮಾಡಿ ವಿದ್ಯಾರ್ಥಿಗಳ ವಿದ್ಯಾ ಭವಿಷ್ಯವನ್ನು ಸಂರಕ್ಷಿಸುವAತಹ ಕೆಲಸ ಮುಖ್ಯಮಂತ್ರಿಗಳಿAದ ಆಗಬೇಕು ಎಂದು ಹೇಳಿದರು. ಎ.೨೨ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮುಗ್ಧ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿಯಿಂದಾಗಿ ಅಗಲಿದವರ ಆತ್ಮಕ್ಕೆ ಶಾಂತಿ ದೊರೆಯಲೆಂದು ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.
ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ್ ರಾವ್ ಮಾತನಾಡಿದರು. ಅನಂತೋಡಿ ದೇವಸ್ಥಾನದ ಅರ್ಚಕ ದುರ್ಗಾಪ್ರಸಾದ್ ವಿಶ್ವಶಾಂತಿಗಾಗಿ ಮಂತ್ರ ಘೋಷವನ್ನು ಪಟಿಸಿದರು. ಈ ಸಂದರ್ಭದಲ್ಲಿ ರಾಘವೇಂದ್ರ ಬೈಪಾಡಿತ್ತಾಯ, ಅನಂತ್ ಭಟ್ ಮಚ್ಚಿಮಲೆ, ಶಿವಾನಂದ ರಾವ್, ಪ್ರಕಾಶ್ ನಾರಾಯಣ, ತ್ರಿವಿಕ್ರಮ ಹೆಬ್ಬಾರ್, ವಿಶ್ವನಾಥ ಹೊಳ್ಳ, ವಿಷ್ಣು ಭಟ್, ಮಹೇಶ್ ಭಟ್, ವಕೀಲ ಸುಬ್ರಹ್ಮಣ್ಯ ಕುಮಾರ್ ಅಗರ್ತ, ಶಾಮ್ ಭಟ್ ಅತ್ತಾಜೆ, ಮಹೇಶ್ ಕುದುಪುಲ, ಉಜಿರೆ ಗ್ರಾ.ಪಂ. ಅಧ್ಯಕ್ಷೆ ಉಷಾಕಿರಣ್ ಕಾರಂತ್, ವರ್ತಕರ ಸಂಘದ ಅಧ್ಯಕ್ಷ ಅರವಿಂದ್ ಕಾರಂತ್, ಗಿರಿರಾಜ ಬಾರಿತ್ತಾಯ, ವೆಂಕಟರಮಣ ರಾವ್, ಪ್ರಜ್ವಲ್ ಜಿ.ಎಂ., ವಿದ್ಯಾ ಕುಮಾರ್ ಕಾಂಚೋಡು, ಮುರುಳಿಕೃಷ್ಣ ಆಚಾರ್, ಡಾ| ಶಶಿಕಾಂತ್ ಡೋಂಗ್ರೆ, ಪಾಂಡುರAಗ ಮರಾಠೆ, ಗಂಗಾಧರ್ ರಾವ್, ಶ್ರೀನಿವಾಸ್ ತಂತ್ರಿ ಹಾಗೂ ಸಮಾಜ ಭಾಂದವರು ಉಪಸ್ಥಿತರಿದ್ದರು.