36.7 C
ಪುತ್ತೂರು, ಬೆಳ್ತಂಗಡಿ
April 24, 2025
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಪೊಲೀಸ್ವರದಿ

ತೆಕ್ಕಾರು ಪರಿಸರದ ಹಲವು ಮನೆಗಳಲ್ಲಿ ಕಳ್ಳತನ: ಲಕ್ಷಾಂತರ ರೂ. ನಗ-ನಗದು ಕಳವು

ಬೆಳ್ತಂಗಡಿ: ಮನೆಯಲ್ಲಿ ಜನರು ನಿದ್ರಿಸುತ್ತಿರುವಾಗಲೇ ಕಳ್ಳತನ ನಡೆಸಿ ಚಿನ್ನಾಭರಣ ಸಹಿತ ನಗದುಗಳನ್ನು ದೋಚಿಕೊಂಡು ಹೋದ ಘಟನೆ ತೆಕ್ಕಾರು ಎಂಬಲ್ಲಿ ಎ.23ರಂದು ರಾತ್ರಿ ಸಂಭವಿಸಿದೆ.

ತೆಕ್ಕಾರುವಿನ ಗುತ್ತು ಮನೆ ನಿವಾಸಿ ಮುಸ್ತಫಾ ರವರ ಮನೆಗೆ ಹೊಕ್ಕ ಕಳ್ಳರು ಹಿಂಬದಿ ಬಾಗಿಲಿನಿಂದ ಚಿಲಕ ತೆರೆದು ಮನೆಯೊಳಗೆ ಹೊಕ್ಕಿ ಸುಮಾರು 5 ಪವನ್ ನಷ್ಟು ಚಿನ್ನ ಮೂರು ಸಾವಿರ ರೂ ನಗದುಗಳನ್ನು ಕಳವುಗೈದು ಪರಾರಿಯಾಗಿದ್ದಾರೆ.

ಮನೆಯವರ ಹೇಳಿಕೆಯಂತೆ ನಿನ್ನೆ ಸುಮಾರು ಮೂರರಿಂದ ನಾಲ್ಕುಗಂಟೆ ಹೊತ್ತಿಗೆ ಮನೆ ಕಳ್ಳತನ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಮುಸ್ತಫಾ ರವರ ಮನೆಗೆ ನೆಂಟರು ಬಂದಿದ್ದು ನೆಂಟರಿಷ್ಟರ ಚಿನ್ನಾಭರಣಗಳನ್ನು ದೋಚಿಕೊಂಡು ಹೋಗಿದ್ದಾರೆ. ಅದೇ ವೇಳೆ ಅವರ ಬ್ಯಾಗ್ ಗಳನ್ನು ಎತ್ತಿಕೊಂಡು ಹೋಗಿದ್ದು ಪಕ್ಕದ ಅಂಗಳದಲ್ಲಿ ದೋಚಿ ಬಿಸಾಕಿ ಹೋಗಿದ್ದಾರೆ.

ಇದೇ ಸಂದರ್ಭದಲ್ಲಿ ತೆಕ್ಕಾರುವಿನ ಕೋಡಿ ನಿವಾಸಿ ಅನ್ವರ್ ಎಂಬವರ ಮನೆಗೂ ಕಳ್ಳರು ನುಗ್ಗಿದ್ದು ಮನೆಯೊಳಗಡೆ ಕಪಾಟ್ ನ ಒಳಗಡೆಯಿದ್ದ ನಗದನ್ನು ದೋಚಿಕೊಂಡಿದ್ದು ಆದರೆ ಆಕಸ್ಮಾತ್ ಅವರ ಜೇಬಿಗೆ ಹಾಕುವ ಹಣವು ಕೆಳಗಡೆ ಬಿದ್ದಿದ್ದು ಬೆಳಿಗ್ಗೆ ಹೊತ್ತು ಮನೆಯ ಯಜಮಾನಿ ನೀರು ಕುಡಿಯಲೆಂದು ಎದ್ದಾಗ ಕಳ್ಳತನ ನಡೆದ ಬಗ್ಗೆ ಅರಿವಾಗಿದೆ. ಮನೆಯ ಹಿಂಬಾಗಿಲು ತೆರೆದ ಸ್ಥಿತಿಯಲ್ಲಿದ್ದು ದೋಚಿದ ಮೂರು ಸಾವಿರ ಹಣ ಅಂಗಳದಲ್ಲಿ ಬಿದ್ದು ಸಿಕ್ಕಿದೆ ಎಂದು ಅನ್ವರ್ ಮನೆಯವರು ತಿಳಿಸಿದ್ದಾರೆ.

ಇದೇ ರೀತಿ ತೆಕ್ಕಾರು ವ್ಯಾಪ್ತಿಯ ಹಲವು ಮನೆಗಳಲ್ಲಿ ಕಳ್ಳತನ ನಡೆದಿದ್ದು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ದಾಖಲಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು ಭೇಟಿ ನೀಡಿದ್ದು ಹೆಚ್ಚಿನ ವಿವರಗಳು ಹೊರ ಬರಬೇಕಿದೆ.

Related posts

ಬೆಳ್ತಂಗಡಿ ಯುವ ವಕೀಲರ ವೇದಿಕೆಯ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಕನ್ಯಾಡಿ 2: ಸ.ಉ. ಹಿ.ಪ್ರಾ. ಶಾಲೆಗೆ ಕನ್ಯಾಡಿ ಫ್ರೆಂಡ್ಸ್ ಕ್ಲಬ್ ವತಿಯಿಂದ ಪ್ರಿಂಟರ್ ಕೊಡುಗೆ

Suddi Udaya

ಕುರಾಯ ಶ್ರೀ ಸದಾಶಿವ ದೇವರ ಪ್ರತಿಷ್ಠಾ ಮಹೋತ್ಸವ ಮತ್ತು ವಾರ್ಷಿಕ ಜಾತ್ರೋತ್ಸವ:ಗೊನೆ ಮುಹೂರ್ತ, ಧ್ವಜಾರೋಹಣ

Suddi Udaya

ಪಾರೆಂಕಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಿಂದ ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಹೊರೆಕಾಣಿಕೆ ಸಮರ್ಪಣೆ

Suddi Udaya

ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ವಿವಿಧ ಸಮಸ್ಯೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭಾರತೀಯ ಮಜ್ದೂರ್ ಸಂಘದಿಂದ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಮನವಿ

Suddi Udaya

ಶ್ರೀ ಧ ಮಂ ಆಂ.ಮಾ. ಶಾಲೆಗೆ ಅರ್ಜುನ ಪ್ರಶಸ್ತಿ ವಿಜೇತ ಹೊನ್ನಪ್ಪ ಸಿ ಗೌಡ ಭೇಟಿ

Suddi Udaya
error: Content is protected !!