ಬಂಗಾಡಿ: ಇಂದಬೆಟ್ಟು ಗ್ರಾಮದ ಬಂಗಾಡಿಯಲ್ಲಿ 4 ದಿವಸಗಳಿಂದ ಬಿಎಸ್ ಎನ್ ಎಲ್ ನೇಟ್ವರ್ಕ್ ಇಲ್ಲದೆ ಬ್ಯಾಂಕ್ ,ಗ್ರಾಮ ಪಂಚಾಯತ್ ಗಳಲ್ಲಿ ಹಾಗೂ ಗ್ರಾಹಕರು ಅಗತ್ಯ ಕೆಲಸಗಳಿಗೆ ಪರದಾಡುವಂತಾಗಿದೆ.
ಈ ಪರಿಸರದಲ್ಲಿ ಇತರ ಖಾಸಗಿ ಸಂಸ್ಥೆಗಳ ನೆಟ್ವರ್ಕ್ ಸಿಗದೆ ಇರುವುದರಿಂದ ಬಿಎಸ್ ಎನ್ ಎಲ್ ನ್ನೆ ಹೆಚ್ಚು ನಂಬಿರುವ ಗ್ರಾಹಕರು ಹಲವು ಸಮಯಗಳಿಂದ ನಿರಂತರ ನೇಟ್ವರ್ಕ್ ಸಮಸ್ಯೆಯಿಂದ ಆನ್ಲೈನ್ ಕೆಲಸಗಳಿಗೆ ಸಮಸ್ಯೆಯಾಗುತ್ತಿದ್ದು .ಸಂಬಂಧ ಪಟ್ಟ ಇಲಾಖೆಯವರು ಸರಿಪಡಿಸಿ ಗ್ರಾಹಕರಿಗೆ ಇದರ ಉಪಯೋಗವಾಗಲಿ ಇಲ್ಲವೆ ಗುಜರಿಯವರಿಗೆ ಮಾರಾಟ ಮಾಡಲಿ ಎಂದು ಗ್ರಾಮಸ್ಥ ನವೀನ್ ಕುಮಾರ್ ಬಂಗಾಡಿ ಆಗ್ರಹಿಸಿದ್ದಾರೆ.