25.8 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಾರ್ಷಿಕ ಮೇಷ ಜಾತ್ರಾ ಮಹೋತ್ಸವ

ಮಚ್ಚಿನ: ಇತಿಹಾಸ ಪ್ರಸಿದ್ಧ ಮಹತೋಭಾರ ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವರ್ಷಂಪ್ರತಿಯಂತೆ ಜರಗುವ ಬ್ರಹ್ಮಕಲಶ ವಾರ್ಷಿಕ ದಿನಾಚರಣೆ ಮತ್ತು ವಾರ್ಷಿಕ ಮೇಷ ಜಾತ್ರಾ ಮಹೋತ್ಸವವು ಏ. 23ದಿಂದ ಮೇ.2ರವರೆಗೆ ಜರಗಲಿದೆ.

ಏ.23ರಂದು ಸೀಯಾಳಾಭಿಷೇಕ, ಮಹಾಪೂಜೆ, ಅನ್ನಸಂತರ್ಪಣೆ ರಾತ್ರಿ ಗಂಟೆ 6.30ರಿಂದ ಧ್ವಜಾರೋಹಣ, ಮಹಾಪೂಜೆ, ಉತ್ಸವ, ವಸಂತ ಸೇವೆ ನಡೆಯಿತು. ಏ. 24 ಮಹಾಪೂಜೆ, ಏಕಾದಶಿ, ರಾತ್ರಿ ಗಂಟೆ 7ರಿಂದ ಮಹಾಪೂಜೆ, ಉತ್ಸವ ನಡೆಯಿತು.

ಏ. 25ರಂದು ಮಧ್ಯಾಹ್ನ ಮಹಾಪೂಜೆ , ಸಾಯಂ. ಗಂಟೆ 4ರಿಂದ ಶ್ರೀ ದೇವಳದಿಂದ ಭಂಡಾರ ಹೊರಟು ಪಿಲಿಚಾಮುಂಡಿ ದೈವದ ನೇಮ, ಸಂಜೆ ಗಂಟೆ 6.30ರಿಂದ ಮಹಾಪೂಜೆ, ಉತ್ಸವ, ಏ. 26ರಂದು ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ಸಾಯಂ. ಗಂಟೆ 6ರಿಂದ ಕೊಪ್ಪರಿಗೆ ಏರಿಸುವುದು, ಬಯ್ಯದ ಬಲಿ ಪ್ರಾರಂಭ, ವಸಂತ ಸೇವೆ, ಏ.27ರಂದು ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ರಾತ್ರಿ ಗಂಟೆ 7ರಿಂದ ಕೆರೆ ಆಯನ, ಉತ್ಸವ, ಮಹಾಪೂಜೆ. ಏ.28ರಂದು ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಾಯಂ. ಗಂಟೆ 4ರಿಂದ ಉತ್ಸವ, ಮೂಡುಕಟ್ಟೆ ಸವಾರಿ, ವಸಂತ ಸೇವೆ, ಮಹಾಪೂಜೆ. ಏ. 29ರಂದು ಪೂರ್ವಾಹ್ನ ಗಂಟೆ 7ರಿಂದ ಬ್ರಹ್ಮಕಲಶ ದಿನಾಚರಣೆ ಪ್ರಯುಕ್ತ ಗಣಯಾಗ, ಏಕದಶಾರುದ್ರಾಭಿಷೇಕ, ಪವಮಾನಹೋಮ, ಆಶ್ಲೇಷ ಬಲಿ, ಶ್ರೀ ಅನಂತೇಶ್ವರ ಸ್ವಾಮಿಗೆ ವಿಶೇಷ ಕಲಶಾಭಿಷೇಕ, ಶ್ರೀ ಗಣಪತಿ ದೇವರಿಗೆ ಕಟಾಹ ಅಪೂಪ ನೈವೇದ್ಯ ಸಮರ್ಪಣೆ ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ಸಾಯಂ. ಗಂಟೆ 7ರಿಂದ ಚಂದ್ರಮಂಡಲೋತ್ಸವ ವಸಂತ ಸೇವೆ, ಮಹಾಪೂಜೆ. ಏ. 30ರಂದು ಪೂರ್ವಾಹ್ನ ಗಂಟೆ 7ರಿಂದ ದರ್ಶನ ಬಲಿ ಸಾಯಂ. ಗಂಟೆ 6ರಿಂದ ಮಹಾರಥೋತ್ಸವ, ಮಹಾಪೂಜೆ, ಶ್ರೀಭೂತ ಬಲಿ, ಮೇ 1ಪ್ರಾತಃಕಾಲ ಕವಾಟೋದ್ಘಾಟನೆ, ವಸಂತ ಸೇವೆ ಮಧ್ಯಾಹ್ನ 11ರಿಂದ ತುಲಾಭಾರ ಸೇವೆ, ಮಹಾಪೂಜೆ, ಅನ್ನಸಂತರ್ಪಣೆ, ಸಾಯಂ. ಗಂಟೆ 4ರಿಂದ ಅವಭ್ರತ ರಾತ್ರಿ 8ರಿಂದ ಧ್ವಜಾವರೋಹಣ, ಮಹಾಪೂಜೆ. ಮೇ. 2ರಂದು ಮಹಾಸಂಪ್ರೋಕ್ಷಣೆ, ತುಲಾಭಾರ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ.

Related posts

ನಾಳೆ (ಮೇ 2) : ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಂಪೂರ್ಣ ಸುರಕ್ಷಾ ಚೆಕ್ ವಿತರಣೆ

Suddi Udaya

ಮನ್ ಶರ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಗೆ ನೂತನ ಪ್ರಾಂಶುಪಾಲರಾಗಿ ಝೀನತ್ ಬಾನು ಅಧಿಕಾರ ಸ್ವೀಕಾರ

Suddi Udaya

ಜ 7: ಪೆರಾಡಿ ಮಾವಿನಕಟ್ಟೆಯಲ್ಲಿ 50ನೇ ವರ್ಷದ ಶ್ರೀ ಅಯ್ಯಪ್ಪ ದೀಪೋತ್ಸವ

Suddi Udaya

ಕೋಟದಲ್ಲಿ ಗ್ರಾಮ‌ ಪಂಚಾಯತ್ ಸದಸ್ಯರಿಗೆ ಕ್ರೀಡಾಕೂಟ: ಚಂದ್ರಯಾನ 3 ಬಾಹ್ಯಾಕಾಶ ನೌಕೆ ಸ್ಥಬ್ದ ಚಿತ್ರದಲ್ಲಿ ನಾರಾವಿ ಗ್ರಾ.ಪಂ. ಗೆ ಪ್ರಶಸ್ತಿ

Suddi Udaya

ಪ್ರತಿಭಾ ಕಾರಂಜಿ ಸ್ಪರ್ಧೆ: ಲಾಯಿಲ ಸೈಂಟ್ ಮೇರಿಸ್ ಆಂ.ಮಾ. ಶಾಲೆಯ ವಿದ್ಯಾರ್ಥಿ ಸುಮೇದ ಕೃಷ್ಣ ದ್ವಿತೀಯ ಸ್ಥಾನ

Suddi Udaya
error: Content is protected !!