31.4 C
ಪುತ್ತೂರು, ಬೆಳ್ತಂಗಡಿ
April 24, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ: ಕೇಂದ್ರ ಸರಕಾರದ ವಿವಾದಿತ ವಕ್ಫ್ ಕಾಯಿದೆ ವಿರುದ್ಧ ತಾಲೂಕಿನಲ್ಲಿ ಬೃಹತ್ ಪ್ರತಿಭಟನಾ ಸಭೆಗೆ ಮುಸ್ಲಿಮ್ ಮುಖಂಡರಿಂದ ನಿರ್ಧಾರ: ವಕ್ಫ್ ಸಂರಕ್ಷಣಾ ಹೋರಾಟ ಸಮಿತಿ ಅಸ್ಥಿತ್ವಕ್ಕೆ : ವೈ.ಸಿ.ಎಫ್. ನಿಂದ ಪೂರ್ವಭಾವಿ ಸಭೆ.

ಬೆಳ್ತಂಗಡಿ: ಕೇಂದ್ರ ಸರಕಾರದ ವಿವಾದಿತ ವಕ್ಫ್ ಕಾಯಿದೆಯ ವಿರುದ್ಧ ತಾಲೂಕಿನಲ್ಲಿ ಸಯ್ಯದ್ ಇಸ್ಮಾಯಿಲ್ ತಂಙಳ್ ಉಜಿರೆ, ಸೈಯ್ಯದ್ ಜಿಫ್ರಿ ತಂಙಳ್ ದಾರುಸ್ಸಲಾಮ್ ಬೆಳ್ತಂಗಡಿ ಹಾಗೂ ಪ್ರಮುಖ ಸಾದಾತುಗಳ ನೇತೃತ್ವದಲ್ಲಿ ಹೋರಾಟ ಮಾಡಲು ಬೃಹತ್ ಪ್ರತಿಭಟನಾ ಸಭೆ ನಡೆಸುವುದೆಂದು ತಾಲೂಕಿನ ಮುಸ್ಲಿಮ್ ಮುಖಂಡರು ಯುವಜನ ನಾಗರಿಕ ವೇದಿಕೆ (YCF)ಬೆಳ್ತಂಗಡಿ ಜಮೀಯತುಲ್ ಫಲಾಹ್ ಸಭಾಂಗಣದಲ್ಲಿ ಕರೆದ ಪೂರ್ವಬಾವಿ ಸಭೆಯಲ್ಲಿ ತೀರ್ಮಾನಿಸಿ ವಕ್ಫ್ ಸಂರಕ್ಷಣಾ ಹೋರಾಟ ಸಮಿತಿ ಅಸ್ಥಿತ್ವಕ್ಕೆ ಬಂತು. ಹಾಗೂ ಇತ್ತೀಚೆಗೆ ವೇಣೂರಿನ ಪೆರಾಡಿ ಎಂಬಲ್ಲಿ ಪುರುಷ ಕಟ್ಟುವ ಸಂಪ್ರದಾಯದಲ್ಲಿ ಮುಸ್ಲಿಮ್ ಧರ್ಮವನ್ನು ಮತ್ತು ಪ್ರವಾದಿಯವರನ್ನು ಅವಹೇಳನಕಾರಿಯಾಗಿ ನಟನೆ ಮಾಡಿ ವೀಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟ ಆರೋಪಿಗಳ ವಿರುದ್ದ ವೇಣೂರು ಪೋಲಿಸ್ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಪಟ್ಟು ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಲು ಮಾನ್ಯ ಪೋಲಿಸ್ ವರಿಷ್ಠಾಧಿಕಾರಿಯನ್ನು ಬೇಟಿ ಮಾಡಲು ತೀರ್ಮಾನಿಸಲಾಯಿತು.


ತಾಲೂಕಿನಲ್ಲಿ ಪದೇ ಪದೇ ಮುಸ್ಲಿಮ್ ಸಮುದಾಯದ ವಿರುದ್ಧ ನಡೆಯುತ್ತಿರುವ ಹಲವು ಘಟನೆಗಳ ಬಗ್ಗೆ ಸೂಕ್ತ ಕಾನೂನು ಕ್ರಮ ಮತ್ತು ಶಾಂತಿ ಭಂಗ ನಡೆಸಿ ಕೋಮು ಗಲಭೆ ನಡೆಸಲು ಹುನ್ನಾರ ನಡೆಸುತ್ತಿರುವ ವ್ಯಕ್ತಿ ಮತ್ತು ಸಂಘಟನೆಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಭಯಮುಕ್ತ ತಾಲೂಕನ್ನಾಗಿ ಮಾಡಲು ಎಲ್ಲರು ಶ್ರವಿಸಬೇಕೆಂದು ಸಭೆಯಲ್ಲಿ ಆಗ್ರಹಿಸಲಾಯಿತು.


ಈ ಸಭೆಯಲ್ಲಿ ನಝೀರ್ ಅಝ್ಹರಿ ಬೊಳ್ಳಿನಾರ್ ದುವಾ ನೆರವೇರಿಸಿದರು. ಅಬ್ದುಲ್ ಕರೀಮ್ ಸ್ವಾಗತಿಸಿ ಎಡ್ವೊಕೇಟ್ ನವಾಝ್ ಶರೀಫ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಕೆ.ಕೆ.ಶಾಹುಲ್ ಹಮೀದ್,ಅಝೀಝ್ ಝುಹ್ರಿ ಕಿಲ್ಲೂರು, ನಝೀರ್ ಬೆಳ್ತಂಗಡಿ, ಅಬ್ಬಾಸ್ ಬಟ್ಲಡ್ಕ,ಬಿ.ಎಂ ಹಮೀದ್,ಅಕ್ಬರ್ ಬೆಳ್ತಂಗಡಿ,ನಿಝಾರ್ ಕುದ್ರಡ್ಕ ,ರಹಿಮಾನ್ ಪಡ್ಪು,ಅಬ್ದುಲ್ಲ ಕೆ.ಎಸ್.. ನವಾಝ್ ಕಟ್ಟೆ,ಹಕೀಮ್ ಕೊಕ್ಕಡ,ಸ್ವಾದಿಕ್ ಮಲೆಬೆಟ್ಟು,ರಝಾಕ್ ಕನ್ನಡಿಕಟ್ಟೆ, ಸಿದ್ದೀಕ್ ಕಾಜೂರು,ಖಾಲಿದ್ ಪುಲಾ ಬೆ, ಹನೀಪ್ ಪುಂಜಾಲ್ ಕಟ್ಟೆ,ದಾವೂದ್ ಜಿ.ಕೆರೆ ಅಭಿಪ್ರಾಯ ವ್ಯಕ್ತಪಡಿಸಿದರು.

ಸಭೆಯಲ್ಲಿ ಅಬೂಬಕ್ಕರ್ ಹಾಜಿ ಪರಪ್ಪು, ಎನ್.ಎಸ್.ಉಮ್ಮರ್, ಇಸುಬು ಇಳಂತಿಲ,ಅಯ್ಯೂಬ್ ಕರಾಯ, ಹಾರಿಶ್ ಹನೀಫಿ, ಖಾಲಿದ್ ಕೆ.ಎಚ್., ಝಕರಿಯ ಮುಸ್ಲಿಯಾರ್, ಇಬ್ರಾಹಿಂ ಮುಸ್ಲಿಯಾರ್ , ಆಲಿಯಬ್ಬ ಪುಲಾಬೆ, ಹನೀಫ್ ಪಿ, ಇಸಾಕ್ ಅಹಮದ್,ಅಬ್ದುಲ್ ರವೂಫ್, ರಶೀದ್ ಮಡಂತ್ಯಾರ್, ಫಯಾಝ್,ಅರ್ಫಾಝ್, ನಸೀಬ್, ಅಬ್ದುಲ್ ಹಮೀದ್,ಕಲಂದರ್, ಪುತ್ತುಮೋನು,ಮುಬೀನ್ ಹಾಜರಿದ್ದರು. ಹಕೀಮ್ ಕೊಕ್ಕಡ ಧನ್ಯವಾದವಿತ್ತರು.

Related posts

ಬೆಳಾಲು ಪ್ರೌಢಶಾಲೆ ಆರಂಭೋತ್ಸವ

Suddi Udaya

ಬೆಳ್ತಂಗಡಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ನೇತೃತ್ವದಲ್ಲಿ ಗೀತೆ ಜತೆ ಸಾಹಿತ್ಯ ಸಾಂಗತ್ಯ ಉಪನ್ಯಾಸ ಮಾಲಿಕೆಯ ಎರಡನೆಯ ಅಧ್ಯಾಯ

Suddi Udaya

ಎಸ್.ಡಿ.ಎಂ ನ್ಯಾಚುರೋಪತಿ ಕಾಲೇಜಿಗೆ ಡಿಸ್ಟಿಂಕಷನ್ ಗಳ ಮಹಾಪೂರ

Suddi Udaya

ಶಿಬರಾಜೆ ಪಾದೆ ಕುಶಾನಿ ರವರ ಹುಟ್ಟುಹಬ್ಬದ ಪ್ರಯುಕ್ತ ಅಂಗನವಾಡಿಗೆ ಚಾಪೆ ಕೊಡುಗೆ

Suddi Udaya

ಅಳದಂಗಡಿ ಗ್ರಾ.ಪಂ. ವತಿಯಿಂದ ವಿಶ್ವ ಪರಿಸರ ದಿನಾಚರಣೆ

Suddi Udaya

ಬಣಕಲ್ ಸಾಯಿಕೃಷ್ಣ ಹೆಲ್ತ್ ಸೆಂಟರ್ ನಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ನೇತ್ರ ತಪಾಸಣೆ ಶಿಬಿರ

Suddi Udaya
error: Content is protected !!