ಉಜಿರೆ: ಉಜಿರೆಯ ಎಸ್ ಡಿ ಎಂ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವಿಜ್ಞಾನದ ಮಹಾವಿದ್ಯಾಲಯದಲ್ಲಿ ಮೂರನೇ ಅಂತರಾಷ್ಟ್ರೀಯ ಮಹಾ ಸಮ್ಮೇಳನ ಮೇ 12 ರಿಂದ16ರ ತನಕ ನಡೆಯಲಿದೆ ಎಂದು ಕಾಲೇಜಿನ ಪ್ರಿನ್ಸಿಪಾಲ್ ಡಾ. ಪ್ರಶಾಂತ ಶೆಟ್ಟಿ ಹೇಳಿದರು.
ಅವರು ಎ. 23 ರಂದು ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಸಮಾರಂಭದ ಉದ್ಘಾಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಲಿರುವರು.ಕೇಂದ್ರದ ಆರೋಗ್ಯ ಸಚಿವ ಜೆ.ಪಿ.ನಡ್ಡಾ, ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ರಾಜೀವ್ ಗಾಂಧಿ ವಿವಿಯ ಉಪಕುಲಪತಿ ಡಾ. ಭಗವಾನ್ ಬಿ. ಸಿ., ಸಂಸದ ಬ್ರಿಜೇಶ್ ಚೌಟ ಶಾಸಕ ಹರೀಶ್ ಪೂಂಜ ಭಾಗವಹಿಸುವರು.
ಸಮಾರೋಪ ಸಮಾರಂಭದಲ್ಲಿ ಗೋವಾ ಮುಖ್ಯಮಂತ್ರಿ, ಕೇಂದ್ರ ಕಾನೂನು ಸಚಿವ, ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಎಂಎಲ್ ಸಿ ಪ್ರತಾಪ್ ಸಿಂಹ ನಾಯಕ್ ಮೊದಲಾದವರು ಭಾಗವಹಿಸಲಿದ್ದಾರೆ. ಎಂದರು.
ಭಾರತದಲ್ಲಿ ಹಾಗೂ ವಿದೇಶಗಳಲ್ಲಿ ಬೇರೆ ಬೇರೆ ವಲಯಗಳಲ್ಲಿ ಕೆಲಸ ಮಾಡುತ್ತಿರುವ ವೈದ್ಯರುಗಳಿಗೆ ಇನ್ನಷ್ಟು ಜ್ಞಾನದ ಅರಿವು ಹೆಚ್ಚಿಸುವುದು, ದೇಶದಲ್ಲಿರುವ ಎಲ್ಲಾ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಕಾಲೇಜುಗಳನ್ನು ಮೇಲ್ದರ್ಜೆಗೆ ಏರಿಸುವುದು, ಹೆಚ್ಚಿನ ಶಾರ್ಟ್ ಟರ್ಮ್ ಹಾಗೂ ಫೆಲೋಶಿಪ್ ಕೋರ್ಸ್ ಗಳನ್ನು ಆರಂಭಿಸುವುದು, ದೇಶದ ಬಿಎನ್ ವೈಎಸ್ ಪದವೀಧರರಿಗೆ ಅನುಕೂಲವಾಗುವಂತಹ ಕೇಂದ್ರ ಮಂಡಳಿಯನ್ನು ಸ್ಥಾಪಿಸುವುದು ಸಂಶೋಧನಾತ್ಮಕ ಪ್ರಬಂಧಗಳನ್ನು ಮಂಡಿಸುವುದು ದೇಶದಲ್ಲಿ ಏಕರೂಪ ಪಠ್ಯಪಟ್ಟಿ ಹಾಗೂ ಏಕರೂಪದ ಸಹಿತೆಯನ್ನು ಅಳವಡಿಸುವುದು ಯೋಗ ಮತ್ತು ಪ್ರಕೃತಿ ಚಿಕಿತ್ಸೆಯನ್ನು ಮುಂದಿನ ಚಿಕಿತ್ಸಾ ಪದ್ಧತಿ ಎಂದು ಘೋಷಿಸುವುದು ಇತ್ಯಾದಿ ವಿಚಾರಗಳ ಕುರಿತು ಚರ್ಚೆ ನಡೆಯಲಿದೆ ಎಂದು ತಿಳಿಸಿದರು.

ಐಎನ್ ವೈಜಿಎಂಎ ಇದರ ರಾಷ್ಟ್ರೀಯ ಅಧ್ಯಕ್ಷ ಡಾ. ನವೀನ್ ಕೆ.ವಿ.ಮಾತನಾಡಿ ಪ್ರಥಮವಾಗಿ ಹೆಗ್ಗಡೆಯವರು ಉಜಿರೆಯಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಕಾಲೇಜನ್ನು ಸ್ಥಾಪಿಸಿದರು. ಇಂದು ದೇಶದಾದ್ಯಂತ 54 ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಅನೇಕ ಕಾಲೇಜಿನಲ್ಲಿ ಸಂಶೋಧನೆಯನ್ನು ಮುಖ್ಯ ಗುರಿಯಾಗಿಸಿಕೊಂಡಿದ್ದಾರೆ. ಇಲ್ಲಿನ ಕಾಲೇಜು ಕೂಡ ಕೇಂದ್ರ ಸರಕಾರದ ಮಾನ್ಯತೆ ಪಡೆದ ಆಯುಷ್ ಸಚಿವಾಲಯದ ಸಹಾಯದೊಂದಿಗೆ ಆರಂಭಿಸಿರುವ ಶ್ರೇಷ್ಠತ ಸಂಶೋಧನಾ ಕೇಂದ್ರದ ಮೂಲಕ ಅನೇಕ ಸಂಶೋಧನೆಗಳನ್ನು ಬೇರೆ ಬೇರೆ ಕಾಯಿಲೆಗಳ ಮೇಲೆ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಪರಿಣಾಮವನ್ನು ಜಗತ್ತಿಗೆ ತಿಳಿಸುತ್ತಿದೆ.ಈಗಾಗಲೇ 214 ಸಂಶೋಧನಾ ಪ್ರಬಂಧಗಳು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಕಟವಾಗಿದೆ ಎಂದರು.
ಈ ಆಧುನಿಕ ಜಗತ್ತಿನಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಸಂಶೋಧನೆಯಿಂದ ಬಂದಂತಹ ಫಲಿತಾಂಶವನ್ನು ಆಧರಿಸಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಚಿಕಿತ್ಸಾ ಕ್ರಮಗಳಲ್ಲಿ ಹಲವಾರು ಬದಲಾವಣೆ ಆಗಿವೆ. ಅದರಲ್ಲಿ ಮುಖ್ಯವಾಗಿ ಚಿಕಿತ್ಸೆ ನೀಡುವ ಕ್ರಮ ಹಾಗೂ ಚಿಕಿತ್ಸೆಯ ಉದ್ದೇಶವನ್ನು ಅರಿತುಕೊಂಡು ಕಾಯಿಲೆಗಳ ವಿಸ್ತಾರವನ್ನು ನೋಡಿಕೊಂಡು ಹೊಸರೂಪದ ಚಿಕಿತ್ಸಾ ಪ್ರೋಟೋಕಾಲನ್ನು ತಯಾರು ಮಾಡಿ ಅದರಂತೆ ಚಿಕಿತ್ಸೆ ನೀಡಿ ಫಲಿತಾಂಶಗಳು ಇನ್ನೂ ಉತ್ತಮವಾಗಿದ್ದನ್ನು ಗಮನಿಸುವುದು.
ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಕಾಲೇಜುಗಳಲ್ಲಿ ಉಪನ್ಯಾಸ ನೀಡುವ ಉಪನ್ಯಾಸಕರು ತಮ್ಮ ಪಠ್ಯಕ್ರಮವು ಬದಲಾವಣೆಯಾಗಿದೆ ಈ ಸಂಶೋಧನೆಗಳು ಹಾಗೂ ಚಿಕಿತ್ಸಾ ಕ್ರಮಗಳನ್ನು ಮುಂದಿಟ್ಟುಕೊಂಡು ಎಲ್ಲಾ ಉಪನ್ಯಾಸಕರು ತಮ್ಮ ಕಾರ್ಯವೈಖರಿಯಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ ಇದರಿಂದ ಕಾಲೇಜಿನ ಪದವಿಯನ್ನು ಮುಗಿಸಿ ಹೋಗುವ ಎಲ್ಲಾ ವಿದ್ಯಾರ್ಥಿಗಳಿಗೆ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಮಹತ್ವವನ್ನು ಅರಿಯಲು ಸಹಾಯವಾಗುವಂತೆ ಸಮ್ಮೇಳನ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕ್ಷೇಮವನದ ಮುಖ್ಯ ವೈದ್ಯಾಧಿಕಾರಿ ಡಾ. ನರೇಂದ್ರ ಶೆಟ್ಟಿ, ಶಾಂತಿವನದ ಡೀನ್ ಡಾ. ಶಿವಪ್ರಸಾದ್ ಕೆ., ಶಾಂತಿವನ ಟ್ರಸ್ಟ್ ನ ಯೋಗ ಮತ್ತು ನೈತಿಕ ಶಿಕ್ಷಣ ನಿರ್ದೇಶಕ ಡಾ. ಶಶಿಕಾಂತ್ ಐ., ಕಾಲೇಜಿನ ವೈಸ್ ಪ್ರಿನ್ಸಿಪಾಲ್ ಡಾ.ಸುಜಾತಾ ಕೆ.ಜಿ.,ಡೀನ್ ಡಾ.ಗೀತಾ ಬಿ. ಶೆಟ್ಟಿ ಉಪಸ್ಥಿತರಿದ್ದರು.