36.7 C
ಪುತ್ತೂರು, ಬೆಳ್ತಂಗಡಿ
April 24, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಅಕ್ಷಯ ತೃತೀಯದ ಚಿನ್ನದ ಖರೀದಿ- ಧರ್ಮ ಪರಂಪರೆ – ಮುಳಿಯ ಗೋಲ್ಡ್ & ಡೈಮಂಡ್ಸ್ ನಲ್ಲಿ ವಿಚಾರ ಸಂಕಿರಣ

ಪುತ್ತೂರು: ಇಂದು ( ಎಪ್ರಿಲ್ 24) ಸಂಜೆ 4 ಗಂಟೆಗೆ ಪುತ್ತೂರು ಕೋರ್ಟ್ ರಸ್ತೆಯಲ್ಲಿರುವ ಮುಳಿಯ ಗೋಲ್ಡ್ & ಡೈಮಂಡ್ಸ್ ನಲ್ಲಿ ಅಕ್ಷಯ ತೃತೀಯದ ದಿನದಂದು ಜನ ಚಿನ್ನದ ಖರೀದಿ ಯಾಕೆ ಮಾಡುತ್ತಾರೆ . ಇದರ ಧಾರ್ಮಿಕ ಪರಂಪರೆ ಕಾರಣಗಳು ಎಂಬ ವಿಷಯದ ಕುರಿತು ವಿಚಾರ ಸಂಕಿರಣ ನಡೆಯಲಿದೆ .

ಈ ಕಾರ್ಯಕ್ರಮದಲ್ಲಿ ಕುಂಟಾರು ರವೀಶ್ ತಂತ್ರಿಗಳು , ಪಂಜ ಭಾಸ್ಕರ ಭಟ್ , ವಂದನಾಶಂಕರ್ ಇವರು ತಮ್ಮ ವಿಚಾರಧಾರೆಯನ್ನು ಮಂಡಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷರಾದ ಪಂಜಿಗುಡ್ಡೆ ಈಶ್ವರ ಭಟ್ಟ ಭಾಗವಹಿಸಲಿರುವರು. ಈ ಸಂವಾದ ಕಾರ್ಯಕ್ರಮವನ್ನು ಡಾ ವಿಜಯ ಸರಸ್ವತಿ ನಡೆಸಿಕೊಡುವವರು.

ಚಿನ್ನದ ಹೂಡಿಕೆ , ಮೌಲ್ಯ ವೃದ್ಧಿ ಹಾಗು ಹಲವು ಧಾರ್ಮಿಕ ಮತ್ತು ವೈಚಾರಿಕ ವಿಷಯಗಳ ಕುರಿತು ವಿಚಾರ ವಿನಿಮಯ ನಡೆಯಲಿದೆ. ಆಸಕ್ತರು ಈ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ಸಂಸ್ಥೆಯ ಚೇರ್ಮನ್ ಕೃಷ್ಣ ಪ್ರಸಾದ್ ಮುಳಿಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಕಾಜೂರು: ರೂ. 1.5 ಕೋಟಿ ವೆಚ್ಚದ “ಮುಸಾಫಿರ್ ಖಾನಾ (ಯಾತ್ರಿ ನಿವಾಸ)” ಕಟ್ಟಡ ಉದ್ಘಾಟನೆ:

Suddi Udaya

ಚಾರ್ಮಾಡಿ ಜಲಾಲಿಯಾ ನಗರ ಮಸ್ಜಿದ್ ನ ಆಡಳಿತ ಮಂಡಳಿ ವಜಾ ಆದೇಶಕ್ಕೆ ರಾಜ್ಯ ಹೈಕೋರ್ಟ್ ನಿಂದ ತಡೆ: ಯಥಾಸ್ಥಿತಿ ಕಾಪಾಡುವಂತೆ ಆದೇಶ

Suddi Udaya

ಬಂದಾರು: ಮೈರೊಳ್ತಡ್ಕ ವಾರ್ಡ್ ನ ನಿನ್ನಿಕಲ್ಲು- ಪುಯಿಲ ಕಾಂಕ್ರಿಟ್ ರಸ್ತೆ ಉದ್ಘಾಟನೆ

Suddi Udaya

ಕಾಜೂರು ಉರೂಸ್ ಪ್ರಯುಕ್ತ ಕಾನೂನು ಸುವ್ಯವಸ್ಥೆ ಬಗ್ಗೆ ಪೊಲೀಸ್ ಅಧಿಕಾರಿಗಳ ಜೊತೆ ಸಭೆ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಬೇಸಿಗೆ ಶಿಬಿರ

Suddi Udaya

ಬೆಳಾಲು ನಿವೃತ್ತ ಶಿಕ್ಷಕನ ಬರ್ಬರ ಕೊಲೆ ಪ್ರಕರಣ: ಸ್ಥಳಕ್ಕೆ ಎಸ್ಪಿ ಸೇರಿದಂತೆ ವಿವಿಧ ತಂಡದಿಂದ ತನಿಖೆ

Suddi Udaya
error: Content is protected !!