ಕೊಕ್ಕಡ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ೨೦೨೫-೨೬ನೇ ಸಾಲಿನ ಗ್ರಾಮಕಲ್ಯಾಣ ಕಾರ್ಯಕ್ರಮದಂತೆ ಉಪ್ಪಾರಪಳಿಕೆ “ಶ್ರೀ ಕೃಷ್ಣ ಭಜನಾ ಮಂದಿರ ನಿರ್ಮಾಣ”ಕ್ಕೆ ಡಾ| ಡಿ. ವೀರೇಂದ್ರ ಹೆಗ್ಗಡೆಯವರಿಂದ ರೂ. 1 ಲಕ್ಷದ ಸಹಾಯಧನದ ಮಂಜೂರಾತಿ ಪತ್ರವನ್ನು ಎ.17 ರಂದು ನೀಡಿರುತ್ತಾರೆ.
ಈ ಸಂದರ್ಭದಲ್ಲಿ ಶ್ರೀ ಕ್ಷೇ.ಧ.ಗ್ರಾ. ಯೋಜನಾಧಿಕಾರಿ ಯಶೋಧರ, ಶ್ರೀ ಕ್ಷೇ.ಧ.ಗ್ರಾ. ಮೇಲ್ವಿಚಾರಕರು ಶ್ರೀಮತಿ ಭಾಗೀರಥಿ, ಉಪ್ಪಾರಪಳಿಕೆ ಒಕ್ಕೂಟದ ಅಧ್ಯಕ್ಷ ಕುಶಾಲಪ್ಪ ಗೌಡ, ಉಪ್ಪಾರಪಳಿಕೆ ಸೇವಾ ಪ್ರತಿನಿಧಿ ರೋಹಿಣಿ, ಟ್ರಸ್ಟ್ ಶ್ರೀನಾಥ್ ಬಡೆಕಾÊಲು, ಟ್ರಸ್ಟ್ ಗೌರವಾಧ್ಯಕ್ಷ ಯೋಗೀಶ್ ಆಲಂಬಿಲ, ಪ್ರಾರಂಭೋತ್ಸವ ಸಮಿತಿ ಕಾರ್ಯದರ್ಶಿ ಶಿವಾನಂದ ಸಂಕೇಶ, ಕೊಕ್ಕಡ ಗ್ರಾ.ಪಂ. ಸದಸ್ಯ ಜಗದೀಶ ಕೆಂಪಕೊಡಿ, ಶ್ರೀ ಕೃಷ್ಣ ಭಜನಾ ಮಂದಿರ ಸದಸ್ಯರು, ಶ್ರದ್ಧಾ ಗೆಳೆಯ ಬಳಗದ ಸದಸ್ಯರು ಉಪಸ್ಥಿತರಿದ್ದರು.