ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಗುರುವಾಯನಕೆರೆಯ ಶಕ್ತಿನಗರ ಮೈದಾನದಲ್ಲಿ ಏ.20ರಂದು ಕೆಪಿಸಿಸಿ ಅಧ್ಯಕ್ಷರು, ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಇವರ ಉಪಸ್ಥಿತಿಯಲ್ಲಿ, ನಡೆದ ಸರ್ಕಾರದ ನಡೆ ಕಾರ್ಯಕರ್ತರ ಕಡೆ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ನಡೆದ. ಮೈದಾನದ ಸ್ವಚ್ಛತೆಯನ್ನು ಎ.23ರಂದು ಮಾಡಲಾಯಿತು.


ಈ ಸ್ವಚ್ಛತಾ ಕೆಲಸ ಕಾರ್ಯದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಪದ್ಮನಾಭ ಸಾಲ್ಯಾನ್, ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾದ ಶೇಖರ್ ಕುಕ್ಕೆಡಿ, ಬ್ಲಾಕ್ ಕಾಂಗ್ರೆಸ್ ನಗರ್ ಗ್ರಾಮೀಣ ಸಮಿತಿಯ ಅಧ್ಯಕ್ಷರಾದ ನಾಗೇಶ್ ಕುಮಾರ್ ಗೌಡ,ಜಿಲ್ಲಾ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷರಾದ ನಜೀರ್ ಶಕ್ತಿನಗರ, ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಪ್ರಜ್ವಲ್ ಜೈನ್ ಅಳದಂಗಡಿ, ಯುವ ಕಾಂಗ್ರೆಸ್ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷರಾದ ನವೀನ್ ಗೌಡ ಸಾವಣಲು, ವಿನಯ್ ಉಜಿರೆ ಹಾಗೂ ಪಕ್ಷದ ಪ್ರಮುಖರಾದ ಧನಂಜಯ್ ರಾವ್, ಬಾಲಕೃಷ್ಣ ಭಟ್ ವೇಣೂರು , ಗುರುರಾಜ್ ಗುರಿಪಳ್ಳ, ಅಶ್ರಫ್ ಕರಿಮಣೆಲು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರಾದ ಶರೀಫ್ ಶಬರಬೈಲು, ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.