ಕಾಶಿಪಟ್ಣ: ಇನ್ವರ್ಟರ್ ನೀಡುವಂತೆ ಮನೆ ಬಳಿಗೆ ಹೋಗಿದ್ದವರಿಗೆ ಕತ್ತಿಯಿಂದ ಕಡಿದು, ಟಾರ್ಚ್ ಲೈಟ್‌ನಿಂದ ಹಲ್ಲೆ ನಡೆಸಿ, ಜೀವಬೆದರಿಕೆ ಒಡ್ಡಿದ ಘಟನೆ ಎ.24 ರಂದು ರಾತ್ರಿ ಕಾಶಿಪಟ್ಣ ಗ್ರಾಮದ ಮಿತ್ತೊಟ್ಟು ಎಂಬಲ್ಲಿ ಸಂಭವಿಸಿದೆ.
ಮರೋಡಿ ಗ್ರಾಮದ ಪೆಂಚಾರ್ ಪಿಜತಕಟ್ಟೆ ನಿವಾಸಿ ಸುಜಿತ್ ಎಂಬವರೊಂದಿಗೆ ಕಾಶಿಪಟ್ಣ ಗ್ರಾಮದ ಮಿತ್ತೊಟ್ಟು ಅಭಿಷೇಕ್ ಕೆಲಸ ಮಾಡಿಕೊಂಡಿದ್ದು, ಅಭಿಷೇಕ್‌ನ ಮನೆಯಲ್ಲಿ ಇಟ್ಟಿದ್ದ ಇನವರ್ಟರ್‌ನ್ನು ವಾಪಾಸು ಅಂಗಡಿಗೆ ತಂದುಕೊಡುವಂತೆ ಸುಜಿತ್ ಕೇಳಿದಾಗ ಬೇಕಾದಲ್ಲಿ ಮನೆಗೆ ಬಂದು ತೆಗೆದುಕೊಂಡು ಹೋಗುವಂತೆ ಅಭಿಷೇಕ್ ತಿಳಿಸಿದ್ದನೆನ್ನಲಾಗಿದೆ.
ಅದರಂತೆ ಎ.24 ರಂದು ರಾತ್ರಿ 10 ಗಂಟೆಗೆ ಸುಜಿತ್ ತನ್ನ ಸ್ನೇಹಿತರಾದ ಆಕಾಶ್, ಜಗದೀಶ @ ಜಗ್ಗು, ಸಂಜಯ್ ಮತ್ತು ಸವಿನ್ ಎಂಬವರೊಂದಿಗೆ ಕಾಶಿಪಟ್ಣ ಮಿತ್ತೊಟ್ಟು ಅಭಿಷೇಕ್‌ನ ಮನೆಯ ಬಳಿಗೆ ಬಂದು ಇನ್ ವರ್ಟರ್ ಕೇಳಿದಾಗ, ಅಭಿಷೇಕ್ ಇನವರ್ಟರ್ ಕೊಡುವುದಿಲ್ಲ, ನೀನು ಏನು ಮಾಡುತ್ತೀಯಾ ಎಂದು ಅವ್ಯಾಚ್ಯ ಶಬ್ದಗಳಿಂದ ಬೈದಾಗ, ಅವರೊಳಗೆ ಮಾತಿನ ಚಕಮಕಿ ನಡೆದು ಅಲ್ಲಿಗೆ ಬಂದ ಅಭಿಷೇಕ್‌ನ ತಂದೆ ಧರ್ಣಪ್ಪ ಪೂಜಾರಿ ಎಂಬವರು ಜಗ್ಗು @ ಜಗದೀಶನಿಗೆ ಟಾರ್ಚ್ ಲೈಟ್ ಹಲ್ಲೆ ನಡೆಸಿ, ಅಭಿಷೇಕನನ್ನು ಮನೆಗೆ ಕರೆದುಕೊಂಡು ಹೋಗಿದ್ದು, ಆ ಸಮಯ ಮನೆಯ ಗೇಟಿನ ಬಳಿ ಸುಜಿತ್, ಅಭಿಷೇಕ್ ನಲ್ಲಿ ಇನ್ ವರ್ಟರ್ ಕೊಡು ಎಂದಾಗ ಅಭಿಷೇಕನು ಕತ್ತಿಯಿಂದ ಸುಜಿತ್ ಹಾಗೂ ಆಕಾಶ್‌ಗೆ ಕಡಿದು, ಧರ್ಣಪ್ಪ ಪೂಜಾರಿ ಟಾರ್ಚ್ ಲೈಟ್‌ನಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವುದಾಗಿ ವೇಣೂರು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಈ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.