ಕೊಯ್ಯೂರು : ಜ.25 ರಂದು ಜರುಗಿದ ಕೊಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಸಹಕಾರ ಭಾರತಿ 7 ಸ್ಥಾನವನ್ನು ಮತ್ತು ಕಾಂಗ್ರೆಸ್ ಬೆಂಬಲಿತ ಸದಸ್ಯರು 5 ಸ್ಥಾನಗಳನ್ನು ಪಡೆದು ವಿಜಯಿಗಳಾಗಿದ್ದು, ನ್ಯಾಯಾಲಯದ ಆದೇಶ ಬರುವವರೆಗೆ ಘೋಷಣೆಯನ್ನು ತಡೆಹಿಡಿಯಲಾಗಿತ್ತು.

ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥಗೊಂಡಿರುವುದರಿಂದ ಚುನಾವಣಾ ಅಧಿಕಾರಿಯ ಆದೇಶದಂತೆ ಇಂದು(ಎ. 25,) ನಡೆದ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯಲ್ಲಿ ಅಧ್ಯಕ್ಷರಾಗಿ ರವೀಂದ್ರನಾಥ್ ಪಿ ಪೆರ್ಮುದೆ , ಉಪಾಧ್ಯಕ್ಷರಾಗಿ ಪುರುಷೋತ್ತಮ ಪಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ನಿರ್ದೇಶಕರುಗಳಾಗಿ ಅಶೋಕ್ ಕುಮಾರ್, ಉಜ್ವಲ್ ಕುಮಾರ್ ಕೆಆರ್ , ದಾಮೋದರ ಗೌಡ ,ನವೀನ್ ಕುಮಾರ್ ,ಪರಮೇಶ್ವರ ಗೌಡ, ಯತೀಶ, ಕುಸುಮಾವತಿ, ಶೋಭಾ ,ಕೇಶವ ಪೂಜಾರಿ, ಸಂಜೀವ ಮಲೆಕುಡಿಯ ಆಯ್ಕೆಯಾಗಿರುತ್ತಾರೆ.
ಚುನಾವಣಾ ಅಧಿಕಾರಿಯಾಗಿ ಶ್ರೀಮತಿ ಪ್ರತಿಮಾ ಬಿ ವಿ ಚುನಾವಣೆಯ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ವಲಯ ಮೇಲ್ವಿಚಾರಕ ಸುದರ್ಶನ್ ದ.ಕ ಜಿ ಕೇಂದ್ರ ಬ್ಯಾಂಕಿನ ಪ್ರತಿನಿಧಿ ಹಾಜರಿದ್ದರು. ಮುಖ್ಯ ಕಾರ್ಯನಿರ್ವಣಾಧಿಕಾರಿ ಅನಂತಕೃಷ್ಣ ಭಟ್ ಮತ್ತು ಸಿಬ್ಬಂದಿಗಳು ಸಹಕರಿಸಿದರು.