April 25, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬಂದಾರು, ಮೊಗ್ರು ಗ್ರಾಮಗಳಲ್ಲಿ ತೀವ್ರ ನೆಟ್‌ವರ್ಕ್ ಸಮಸ್ಯೆ: ಗ್ರಾಹಕರ ಆಕ್ರೋಶ ಉದ್ಯೋಗಿಗಳು, ವಿದ್ಯಾರ್ಥಿಗಳ ಪರದಾಟ

ಬೆಳ್ತಂಗಡಿ: ಏರ್ಟೆಲ್ ಟವರ್ ಹಾಗೂ ಬಿಎಸ್‌ಎನ್‌ಎಲ್ ಟವರ್‌ಗಳಿದ್ದರೂ, ಬಂದಾರು, ಮೈರೋಳ್ತಡ್ಕ, ಮೊಗ್ರು ಪ್ರದೇಶದಲ್ಲಿ ನೆಟ್ ವರ್ಕ್ ಇಲ್ಲದೆ ಗ್ರಾಹಕರು ಪರದಾಟ ನಡೆಸುವ ಸ್ಥಿತಿ ನಿರ್ಮಾಣವಾಗಿದ್ದು, ವರ್ಕ್‌ಪ್ರಮ್ ಹೋಂ ಉದ್ಯೋಗಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ತೀವ್ರ ಸಮಸ್ಯೆ ಕಾಡಿದೆ.

ಬಂದಾರು ಗ್ರಾಮದ ಪಾಣೆಕಲ್ಲು ಮತ್ತು ಮೈರೋಳ್ತಡ್ಕದಲ್ಲಿ ಏರ್ಟೆಲ್ ಕಂಪೆನಿಯ ಎರಡು ಟವರ್‌ಗಳಿವೆ. ಇದರ ಜೊತೆಗೆ ಬೈಪಾಡಿಯಲ್ಲಿ ನೂತನವಾಗಿ ಬಿ.ಎಸ್.ಎನ್.ಎಲ್ ಟವರ್ ನಿರ್ಮಾಗೊಂಡಿದೆ. ಮೂರು ಟವರ್‌ಗಳಿದ್ದರೂ ಬಂದಾರು ಮತ್ತು ಮೊಗ್ರು ಗ್ರಾಮಗಳಲ್ಲಿ ಗ್ರಾಹಕರು ನಿತ್ಯಗೋಳು ಅನುಭವಿಸಬೇಕಾಗಿದೆ. ಕಾರಣ ನೆಟ್‌ವರ್ಕ್ ಸಮಸ್ಯೆ. ಕಾಲ್ ಮಾಡಿ ಕಾಲೇ ಸಿಗುವುದಿಲ್ಲ, ಸಿಕ್ಕಿದರೂ, ಇನ್ನೊಬ್ಬರು ಮಾತನಾಡುವುದು ಕೇಳುವುದೇ ಇಲ್ಲ, ಮೂರು ಟವರ್‌ಗಳಿದ್ದರೂ, ಇದ್ದು ಇಲ್ಲದಂತಾಗಿದೆ. ಇದರಿಂದಾಗಿ ವರ್ಕ್‌ಪ್ರಮ್ ಹೋಮ್ ಉದ್ಯೋಗಿಗಳು ಬಹಳಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ. ಜೊತೆಗೆ ವಿದ್ಯಾರ್ಥಿಗಳಿಗೂ ಸಮಸ್ಯೆ ಕಾಡಿದೆ.


ಏರ್‌ಟೆಲ್ ಕಂಪೆನಿ ಹಾಗೂ ಬಿಎಸ್‌ಎನ್‌ಎಲ್ ಕಂಪೆನಿಯ ಗ್ರಾಹಕರು ಈ ಪ್ರದೇಶದಲ್ಲಿ ಬಹಳಷ್ಟು ಮಂದಿ ಇದ್ದಾರೆ. ನೆಟ್ ಹಾಕಿಸಿಕೊಂಡಿದ್ದಾರೆ ಅದರೆ ಇದು ಪ್ರಯೋಜನಕ್ಕೆ ಬಂದಿಲ್ಲ, ಎರಡು ಕಂಪೆನಿಯ ಟವರ್ ಇದ್ದು ಪ್ರಯೋಜನಕ್ಕೆ ಬಾರದಂತಾಗಿದೆ. ಇದರ ಬಗ್ಗೆ ಸಂಬಂಧಪಟ್ಟವರಿಗೆ ತಿಳಿಸಿದರೂ ಸ್ಪಂದನೆ ದೊರಕಿಲ್ಲ, ಇನ್ನುಳಿದಿರುವುದು ಪ್ರತಿಭಟನೆಯೊಂದೇ ದಾರಿ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನಾದರೂ, ಎರಡು ಕಂಪೆನಿಯ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಿ, ಗ್ರಾಹಕರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸುವಂತೆ ಗ್ರಾಹಕರು ಒತ್ತಾಯಿಸಿದ್ದಾರೆ.

Related posts

ಉಜಿರೆ :ಶ್ರೀ.ಧ.ಮಂ.ವಸತಿ ಪ.ಪೂ. ಕಾಲೇಜಿನಲ್ಲಿ ಬಿತ್ತಿಪತ್ರ ಅನಾವರಣ ಕಾರ್ಯಕ್ರಮ

Suddi Udaya

ಪಟ್ರಮೆ ಗ್ರಾ.ಪಂ. ಪ್ರಥಮ ಸುತ್ತಿನ ಗ್ರಾಮಸಭೆ

Suddi Udaya

ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಪೂಜೆ

Suddi Udaya

ಬೆಳ್ತಂಗಡಿಯ ಮೂವರನ್ನು ತುಮಕೂರಿನಲ್ಲಿ ಕೊಲೆಗೈದ ಪ್ರಕರಣ: 6 ಮಂದಿಯನ್ನು ವಶಕ್ಕೆ ಪಡೆದ ಪೊಲೀಸರು

Suddi Udaya

ಧರ್ಮಸ್ಥಳ- ನಾರಾವಿ ಸರಕಾರಿ ಬಸ್ ತಡೆ ಹಿಡಿದಿರುವ ಸರಕಾರದ ನಡೆಯನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಿಂದ ಪ್ರತಿಭಟನೆ

Suddi Udaya

ಧರ್ಮಸ್ಥಳದಿಂದ ನಾರಾವಿಗೆ ಕೆಎಸ್ ಆರ್ ಟಿ ಸಿ ಬಸ್ ಸಂಚಾರ ಮುಂದೂಡಿಕೆ

Suddi Udaya
error: Content is protected !!