ಬೆಳ್ತಂಗಡಿ ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕಿನ ವ್ಯವಹಾರಕ್ಕಾಗಿ ಸಂಪೂರ್ಣ ರೀತಿಯಲ್ಲಿ ಸಹಕಾರವನ್ನು ನೀಡುತ್ತಿರುವ ಬೆಳ್ತಂಗಡಿಯ ಪ್ರೇರಣಾ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷೆ ಲ್ಯಾನ್ಸಿ ಎ ಪಿರೇರಾ ಹಾಗೂ ಸಂಸ್ಥೆಯ ಮುಖ್ಯ ಪ್ರಬಂಧಕರಾದ ಶ್ರೀಮತಿ ಐರಿನ್ ಡಿಸೋಜ ಹಾಗೂ ಸಿಬ್ಬಂದಿಗಳನ್ನು ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕ್ ಉಡುಪಿ ಕೇಂದ್ರ ಕಚೇರಿಯ ಪರವಾಗಿ ಬೆಳ್ತಂಗಡಿ ಶಾಖಾ ಕಛೇರಿ ವತಿಯಿಂದ ಬ್ಯಾಂಕಿನ ನಿರ್ದೇಶಕರಾದ ಧರಣೇಂದ್ರ ಕೆ ರವರು ಗೌರವಿಸಿದರು.
ಗೌರವವನ್ನು ಸ್ವೀಕರಿಸಿದ ಲ್ಯಾನ್ಸಿ ಪಿರೇರರವರು ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕಿನ ಸಿಬ್ಬಂದಿಗಳ ಕಾರ್ಯ ಮೆಚ್ಚುವ ರೀತಿಯಲ್ಲಿ ಇರುವ ಕಾರಣ ನಮ್ಮ ಸಂಸ್ಥೆಯು ಕೂಡ ತಮ್ಮ ಬ್ಯಾಂಕಿನೊಂದಿಗೆ ಸದಾ ಸಹಕಾರಕ್ಕೆ ಬದ್ಧವಾಗಿದೆ. ತಮ್ಮ ಈ ಸೇವೆಯು ಮುಂದೆಯು ಕೂಡ ಇದೇ ರೀತಿ ಮುಂದುವರೆಯಲಿ, ಅದೇ ರೀತಿಯಲ್ಲಿ ನೂತನವಾಗಿ ನಿರ್ದೇಶಕರಾಗಿ ಆಯ್ಕೆಯಾದ ನಮ್ಮ ಸಹೋದರ ಧರಣೇಂದ್ರ ರವರು ಕೂಡ ಉತ್ತಮ ಸೇವೆಯನ್ನು ಮಾಡುವಂತಾಗಲಿ ಎಂದು ಮನದಾಳದ ಮಾತುಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಬ್ಯಾಂಕಿನ ಬೆಳ್ತಂಗಡಿ ಶಾಖೆಯಯ ಶಾಖಾ ಪ್ರಬಂಧಕರಾದ ಚೇತನ್ ಕುಮಾರ್ ಹಾಗೂ ಸಿಬ್ಬಂದಿಗಳಾದ ಗಣೇಶ್ ಮತ್ತು ಅನಿಲ್ ಕುಮಾರ್ ಕೆ ಜಿ ಉಪಸ್ಥಿತರಿದ್ದರು.