
ಬೆಳ್ತಂಗಡಿ: ತೆಕ್ಕಾರು ದೇವರಗುಡ್ಡೆ ಭಟ್ರಬೈಲು ದೇವಸ್ಥಾನಕ್ಕೆ ಶಾಸಕ , ಬ್ರಹ್ಮಕಲಶೋತ್ಸವದ ಸಂಚಾಲಕ ಹರೀಶ್ ಪೂಂಜ ಭೇಟಿ ನೀಡಿ,ಕ್ಷೇತ್ರದಲ್ಲಿ ಎ.25-ಮೇ 3ರ ವರೆಗೆ ನಡೆಯುವ ಬ್ರಹ್ಮಕಲಶೋತ್ಸವದ ಕಾರ್ಯಕ್ರಮವನ್ನು ಸಮಾಲೋಚಿಸಿದರು.
ನಂತರ ಪುನರುತ್ಥಾನ ಕಾರ್ಯವನ್ನು ವೀಕ್ಷಿಸಿದರು. ಬ್ರಹ್ಮಕಲಶೋತ್ಸವ ಕಾರ್ಯಾಧ್ಯಕ್ಷ ಲಕ್ಷ್ಮಣ್ ಭಟ್ರಬೈಲು , ಪ್ರಧಾನ ಕಾರ್ಯದರ್ಶಿ ಪ್ರವೀಣ್ ರೈ, ತಣ್ಣೀರುಪಂತ ಪ್ಯಾಕ್ಸ್ ಅಧ್ಯಕ್ಷ ಜಯಾನಂದ ಕಲ್ಲಾಪು ಮೊದಲಾದವರು ಉಪಸ್ಥಿತರಿದ್ದರು.

ರಸ್ತೆ ಡಾಂಬರೀಕರಣ:
ದೇವಸ್ಥಾನಕ್ಕೆ ಬರುವ ಸುಮಾರು 500 ಮೀಟರ್ ರಸ್ತೆಗೆ ತಾಲೂಕಿನ ಜನಪ್ರಿಯ ಶಾಸಕ ಹರೀಶ್ ಪೂಂಜಾ ರವರ ಶಾಸಕರ ನಿಧಿಯಿಂದ ರೂ. 10 ಲಕ್ಷ ರಸ್ತೆ ಡಾಂಬರೀಕರಣ ಕಾಮಗಾರಿ ನಡೆಸಲಾಯಿತು.