April 26, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಇನ್ವರ್ಟರ್ ಕೇಳಲು ಬಂದವರಿಂದ ಮನೆಯಂಗಳಕ್ಕೆ ಅಕ್ರಮ ಪ್ರವೇಶ ಕಬ್ಬಿಣದ ರಾಡ್‌ನಿಂದ ಹಲ್ಲೆ

ಕಾಶಿಪಟ್ಣ: ತಂಡವೊಂದು ಮನೆಯಂಗಳಕ್ಕೆ ಅಕ್ರಮವಾಗಿ ಪ್ರವೇಶಿಸಿ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ ಘಟನೆ ಎ.24ರಂದು ರಾತ್ರಿ ಕಾಶಿಪಟ್ಣ ಗ್ರಾಮದ ಮಿತ್ತೊಟ್ಟು ಎಂಬಲ್ಲಿ ಸಂಭವಿಸಿದೆ.


ಎ. 24 ರಂದು ರಾತ್ರಿ 10ಕ್ಕೆ ಕಾಶಿಪಟ್ಣ ಗ್ರಾಮದ ಮಿತ್ತೋಟ್ಟುಯ ಧರ್ಣಪ್ಪ ಪೂಜಾರಿ ಎಂಬವರ ಮನೆಯ ಬಳಿ ಬಂದು ಅವರ ಪುತ್ರ ಅಭಿಷೇಕ್‌ನನ್ನು ಮೊಬೈಲ್ ಕರೆ ಮಾಡಿ ಮನೆಯ ಬಳಿ ರಸ್ತೆಗೆ ಕರೆದು ಇನ್ ವರ್ಟರ್ ತೆಗೆದುಕೊಂಡು ಬಾ ಎಂದು ಅವಾಚ್ಯ ಶಬ್ದಗಳಿಂದ ಬೈದಾಗ ಇವರೊಳಗೆ ಮಾತಿನ ಚಕಮಕಿ ನಡೆದಿದ್ದು, ಆ ಸಮಯ ಧರ್ಣಪ್ಪ ಪೂಜಾರಿಯವರು ಅಭಿಷೇಕ್‌ನನ್ನು ಮನೆಗೆ ಕರೆದುಕೊಂಡು ಬರುವ ಸಮಯ ಅವರ ಮನೆಯಂಗಳಕ್ಕೆ ಅಕ್ರಮ ಪ್ರವೇಶಮಾಡಿ, ಜಗ್ಗು @ ಜಗದೀಶ್ ಎಂಬಾತ ಧರ್ಣಪ್ಪ ಪೂಜಾರಿಯವರಿಗೆ ಕಬ್ಬಿಣದ ರಾಡ್‌ನಿಂದ ಹೊಡೆದು, ಅವರ ಪುತ್ರ ಅಭಿಷೇಕ್‌ಗೆ ಸುಜಿತ್, ಆಕಾಶ್, ಸವಿನ್, ಸಂಜಯ್‌ಸೇರಿ ಕೈಯಿಂದ ಹಲ್ಲೆ ನಡೆಸಿದ್ದಾರೆ.

ಅಲ್ಲದೆ ಆ ಸಮಯ ಮನೆಯಲಿದ್ದ ಧರ್ಣಪ್ಪ ಪೂಜಾರಿಯವರ ದೊಡ್ಡ ಮಗ ಅನಿಲ್, ಮಗಳು ಆಶಾ, ಮತ್ತು ಪತ್ನಿ ಬೇಬಿರವರಿಗೂ ಅವರು ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿ ಒಡ್ಡಿರುವುದಾಗಿ ಧರ್ಣಪ್ಪ ಪೂಜಾರಿಯವರು ವೇಣೂರು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಹೊಸಂಗಡಿ ಹಾಗೂ ಬಡಕೋಡಿ ಗ್ರಾಮದ ಬಂಟ ಸಮುದಾಯದ ಬಂಟ ಗ್ರಾಮ ಸಮಿತಿ ರಚನೆ

Suddi Udaya

ಅ.28: ಕುತ್ಲೂರು ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಸಮಗ್ರ ರಕ್ಷಣಾ ಯೋಜನೆ ಅಪಘಾತ ವಿಮಾ ಮೇಳ’

Suddi Udaya

ಬೆಳ್ತಂಗಡಿ ಭಾರತ್ ಆಟೋ ಕಾರ್‍ಸ್ ಶೋರೂಮ್ ನಲ್ಲಿ ಡ್ಯಾಜ್ಲಿಂಗ್‌ ನ್ಯೂ ಡಿಜೈರ್ ಕಾರು ಮಾರುಕಟ್ಟೆಗೆ

Suddi Udaya

ವಿಶ್ವ ಹಿಂದೂ ಪರಿಷತ್ ಬಜರಂಗದಳದ ಪ್ರಮುಖರು ಆಸ್ಪತ್ರೆಗೆ ಬೇಟಿ

Suddi Udaya

ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ ಪೂಜಾರಿ ಗೌರವಾರ್ಪಣೆ

Suddi Udaya

ಉಜಿರೆಯಲ್ಲಿ ಐಶ್ವರ್ಯ ಬ್ಯಾಂಗಲ್ ಸ್ಟೋರ್ ಶುಭಾರಂಭ

Suddi Udaya
error: Content is protected !!