April 26, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕಾಶ್ಮೀರದ ಪಹಲ್ಗಾಮ್ ನಲ್ಲಿ ಹಿಂದೂ ಪ್ರವಾಸಿಗರ ಭಯೋತ್ಪಾದಕರ ದಾಳಿ ಖಂಡಿಸಿ ಮಲವಂತಿಗೆ – ಮಿತ್ತಬಾಗಿಲು ಗ್ರಾಮಸ್ಥರ ಪ್ರತಿಭಟನೆ ಹಾಗೂ ಶ್ರದ್ಧಾಂಜಲಿ ಸಭೆ

ಮಲವಂತಿಗೆ: ಕಾಶ್ಮೀರದ ಪಹಲ್ಗಾಮ್ ನಲ್ಲಿ ಹಿಂದೂ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕರ ದಾಳಿಯನ್ನು ಖಂಡಿಸಿ ಮಲವಂತಿಗೆ – ಮಿತ್ತಬಾಗಿಲು ಸಾರ್ವಜನಿಕರು, ಗ್ರಾಮಸ್ಥರ ಪ್ರತಿಭಟನೆ ಹಾಗೂ ಶ್ರದ್ಧಾಂಜಲಿ ಸಭೆ ಎ.25 ರಂದು
ದಿಡುಪೆ ಪಂಚಾಯತ್ ಮುಂಭಾಗದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಗ್ರಾಮದ ಸರ್ವ ಪಕ್ಷದ ಮುಖಂಡರು ಭಾಗಿಯಾಗಿದ್ದರು. ತೀಕ್ಷಿತ್ ಕೆ ಕಲ್ಬೆಟ್ಟು ಸ್ವಾಗತಿಸಿ ಮಾತನಾಡಿ ,ಕಾಶ್ಮೀರದ ಪಹಲ್ಗಾಮ್ ನಲ್ಲಿ ಹಿಂದೂ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕರ ದಾಳಿಯನ್ನು ಖಂಡಿಸಿ, ಸೈನಿಕರ ಜೊತೆ ರಾಷ್ಟ್ರ ರಕ್ಷಣೆ ನಮ್ಮ ಭಾರತ ದೇಶದ ಪ್ರತಿಯೊಂದು ಹಿಂದೂ ಕಾರ್ಯಕರ್ತರು ಹಾಗೂ ಪ್ರಜೆಗಳು ಬೇಕು. ರಾಷ್ಟ್ರ ವಿರೋಧಿಗಳನ್ನು ದೇಶ ಬಿಟ್ಟು ತೊಲಗುವಂತೆ ಮಾಡಬೇಕು. ನಮ್ಮ ದೇಶದ ರಕ್ಷಣೆ ಮೊದಲು. ಪಾಕಿಸ್ತಾನಕ್ಕೆ ಧಿಕ್ಕಾರ ಹಾಕುವ ಮೂಲಕ ಹುತಾತ್ಮರಾದ ಆತ್ಮಕ್ಕೆ ಶಾಂತಿ ಹಾಗೂ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ದೇವರು ಕಾಪಾಡುವಂತೆ ನುಡಿದರು.

ಅದೇ ರೀತಿ ವಕ್ತರರಾದ ಜಯಂತ ಹೆಗ್ಡೆ ಹೊಸತೋಟ ಮಾತನಾಡಿ ದೇಶದ ಚಿಂತನೆ ಮುಖ್ಯವಾಗಿ ಎಲ್ಲರಿಗೂ ಇರಬೇಕು. ದೇಶದಲ್ಲಿ ಉಗ್ರರನ್ನು ಮಟ್ಟ ಹಾಕುವ ಕೆಲಸ ಭಾರತ ದೇಶದಲ್ಲಿ ನಡೆಯಬೇಕು ಎಂದರು.
ತಾಲೂಕು ಪಂಚಾಯತ್ ಮಾಜಿ ಸದಸ್ಯ ಕಾಂಗ್ರೇಸ್ ಮುಖಂಡರಾದ ಜಯರಾಮ್ ಅಲಂಗಾರ್ ಇವರು ಮಾತಾಡಿ ಮಾನವ ಧರ್ಮ ಪಾಲನೆ ಅತೀ ಮುಖ್ಯ, ಭಾರತ ಪ್ರಜೆಯಾಗಿ ಬದುಕಲು ಕಲಿಯಬೇಕು ಎಂದು ತಿಳಿಸಿದರು.

ಮಧುಸೂಧನ್ ಮಲ್ಲ ಮಾತಾಡಿ ಭಾರತ ದೇಶದಲ್ಲಿ ಇದ್ದುಕೊಂಡು ರಾಷ್ಟ್ರ ವಿರೋಧಿ ಚಟುವಟಿಕೆ ಮಾಡುವ ವ್ಯಕ್ತಿಗಳನ್ನು ಮೊದಲು ದೇಶ ಬಿಟ್ಟು ಹೊಡಿಸಬೇಕು ಎಂದು ನುಡಿದರು. ಈ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆ ಮುಖಂಡರುಗಳಾದ ಕೇಶವ ಎಂ.ಕೆ ಕುದ್ಮಾನು, ಪುರಂದರ ಗೌಡ ನಂದಿಕಾಡು, ಜಯವರ್ಮ ಗೌಡ ಕಲ್ಬೆಟ್ಟು,ದಿನೇಶ್ ಗೌಡ ಕಜಕ್ಕೆ, ಸಚಿನ್ ಗೌಡ ಬದ್ಲಾಯಿ, ಶ್ರೀನಿವಾಸ ಗೌಡ ಪಾಡಿಗೆರೆ, ಸಂದೀಪ್ ಗೌಡ ಶೆಟ್ಟಿಹಿತ್ತಿಲು,ಪುನೀತ್ ಗೌಡ ಬಾಲೆಹಿತ್ತಿಲು, ಶಿವರಾಮ ಗೌಡ ವಿದ್ಯಾನಗರ, ಅರುಣ್ ಕೆರೆಕೋಡಿ, ಸುಧೀಶ್ ಗೌಡ ಧರ್ಕಸು,ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Related posts

ಆದಿವಾಸಿ ಸಮುದಾಯದ ವಿವಿಧ ಬೇಡಿಕೆಗಳನ್ನುಈಡೇರಿಸುವಂತೆ ವಿ.ಪ. ಶಾಸಕ ಬಿ.ಕೆ ಹರಿಪ್ರಸಾದ್ ರವರಿಗೆ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯಿಂದ ಮನವಿ

Suddi Udaya

ಫೆ.4: ನಮ್ಮೂರ ಕನ್ನಡ ಶಾಲೆ ನಮ್ಮ ಹೆಮ್ಮೆ “ಸೇವಾಯಜ್ಞ”

Suddi Udaya

ಕಲ್ಮಂಜ ಸರಕಾರಿ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘ ರಚನೆ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಮುಖ್ಯಕಾರ್ಯನಿರ್ವಹರ್ಣಾಧಿಕಾರಿಯಾಗಿ ಕೆ.ವಿ ಶ್ರೀನಿವಾಸ್ ಅಧಿಕಾರ ಸ್ವೀಕಾರ

Suddi Udaya

ಮಹಿಳೆಯ ಕುತ್ತಿಗೆಯಿಂದ ಸರ ಎಳೆದು ಪರಾರಿ ಪ್ರಕರಣ: 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು

Suddi Udaya

ಪೆರಿಂಜೆ ಪಡ್ಡoದಡ್ಕ ನಿವಾಸಿ ಸಫೀಯಾ ನಿಧನ

Suddi Udaya
error: Content is protected !!