April 26, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನಾಳೆ(ಎ.27): ಗುರುವಾಯನಕೆರೆಯಲ್ಲಿ ತಾಲೂಕು ಮಟ್ಟದ ಬಂಟ ಕ್ರೀಡೋತ್ಸವ

ಬೆಳ್ತಂಗಡಿ: ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿ, ತಾಲೂಕು ಯುವ ಬಂಟರ ಹಾಗೂ ಮಹಿಳಾ ಬಂಟರ ವಿಭಾಗದ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ಕ್ರೀಡೋತ್ಸವವು ಎ.27 ರಂದು ಗುರುವಾಯನಕೆರೆಯ ಶಕ್ತಿನಗರದ ನವಶಕ್ತಿ ಕ್ರೀಡಾಂಗಣದಲ್ಲಿ ಜರುಗಲಿದೆ.

ಈ ಕ್ರೀಡೋತ್ಸವದಲ್ಲಿ ಪಥಸಂಚಲನವು ವಿಶೇಷ ಆಕರ್ಷಣೆಯಾಗಿದ್ದು, ಬೆಳಿಗ್ಗೆ 9 ಗಂಟೆಗೆ ನವಶಕ್ತಿ ಕ್ರೀಡಾಂಗಣದಲ್ಲಿ 9 ವಲಯಗಳ ಕ್ರೀಡಾಳುಗಳು ಮತ್ತು ಬಂಟ ಸಮುದಾಯದವರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಶಿಸ್ತುಬದ್ಧ ಮತ್ತು ಆಕರ್ಶಕವಾಗಿ ಪಥ ಸಂಚಲನ ನಡೆಸಿಕೊಟ್ಟ ತಂಡಗಳಿಗೆ ಹಾಗೂ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪಥ ಸಂಚಲನದಲ್ಲಿ ಪಾಲ್ಗೊಂಡ ವಲಯಗಳಿಗೆ ಬಹುಮಾನ ನೀಡಲಾಗುತ್ತದೆ. ಕ್ರೀಡೋತ್ಸವದಲ್ಲಿ 6 ವರ್ಷದ ಒಳಗಿನ ಬಾಲಕ/ಬಾಲಕಿಯರಿಗೆ 50 ಮೀ ಓಟ, ಚೆಂಡು ಎಸೆತ, ಕಪ್ಪೆ ಜಿಗಿತ, 12 ವರ್ಗದ ಒಳಗಿನ ಬಾಲಕ/ಬಾಲಕಿಯರಿಗೆ 80 ಮೀ ಓಟ, ಚೆಂಡು ಎಸೆತ, ಲಿಂಬೆ ಚಮಚ, 17 ವರ್ಷದ ಒಳಗಿನ ಬಾಲಕ / ಬಾಲಕಿಯರಿಗೆ 100, 200, 40 ವರ್ಷದ ಒಳಗಿನ ಪುರುಷರು/ಮಹಿಳೆಯರಿಗೆ (18 ರಿಂದ 40 ವರ್ಷ) 100ಮೀ ಓಟ, 200ಮೀ ಓಟ, ಗುಂಡೆಸೆತ, 60 ವರ್ಷದ ಒಳಗಿನ ಪುರುಷರು/ಮಹಿಳೆಯರಿಗೆ (41ರಿಂದ 60ವರ್ಷ) 100ಮೀ ಓಟ, 200ಮೀ ವೇಗದ ನಡಿಗೆ, ಗುಂಡೆಸೆತ, 60 ವರ್ಷ ಮೇಲ್ಪಟ್ಟ ಹಿರಿಯರಿಗೆ (ಪುರುಷರು/ ಮಹಿಳೆಯರು): 100 ಮೀ ವೇಗದ ನಡಿಗೆ, ಗುಂಡೆಸೆತ, ಪುರುಷರಿಗೆ ವಾಲಿಬಾಲ್ (6+1), ಮಹಿಳೆಯರಿಗೆ ತ್ರೋಬಾಲ್ (9+1), ಹಗ್ಗ ಜಗ್ಗಾಟ (9+2) ಇರುವುದು. ವಿಜೇತರಿಗೆ ದೇವು ಪೂಂಜ ಟ್ರೋಫಿಯೊಂದಿಗೆ ನಗದು ಬಹುಮಾನ ನೀಡಲಾಗುತ್ತದೆ ಎಂದು ಬಂಟರ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

Related posts

ಉಜಿರೆ ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರದ ವಿಶೇಷ ಚೇತನರ ಮಕ್ಕಳೊಂದಿಗೆ ರಕ್ಷಾಬಂಧನ ಆಚರಣೆ

Suddi Udaya

ದ್ವಿತೀಯ ಪಿಯುಸಿ ಫಲಿತಾಂಶ: ಎಕ್ಸಲೆಂಟ್ ಮೂಡುಬಿದಿರೆಗೆ ರಾಜ್ಯ ಮಟ್ಟದಲ್ಲಿ ಎರಡನೇ ಮತ್ತು ನಾಲ್ಕನೇ ರ‍್ಯಾಂಕ್‌ಗಳು

Suddi Udaya

ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯಿಂದ “ಬ್ರಹ್ಮಶ್ರೀ- 2025” ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ

Suddi Udaya

ಗಡಾಯಿಕಲ್ಲಿಗೆ ಸಿಡಿಲು ಬಡಿದು ಕಾಣಿಸಿಕೊಂಡ ಬೆಂಕಿ

Suddi Udaya

ಬೆಳ್ತಂಗಡಿ : ಉಚಿತ ನೇತ್ರ ತಪಾಸಣೆ, ಪೊರೆ ಶಸ್ತ್ರ ಚಿಕಿತ್ಸಾ ಶಿಬಿರ

Suddi Udaya

ಅಗ್ರಿಲೀಫ್ ಸಂಸ್ಥೆಯಲ್ಲಿ ದೀಪಾವಳಿ ಸಂಭ್ರಮ

Suddi Udaya
error: Content is protected !!