27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸುಲ್ಕೇರಿಯಲ್ಲಿ ಟಾಟಾ ಗೂಡ್ಸ್ ವಾಹನಕ್ಕೆ ಈಚರ್ ಲಾರಿ ಡಿಕ್ಕಿ

ಸುಲ್ಕೇರಿ: ಸುಲ್ಕೇರಿ ನರ್ಸರಿ ಬಳಿ ಟಾಟಾ ಗೂಡ್ಸ್ ವಾಹನಕ್ಕೆ ಈಚರ್ ಲಾರಿ ಡಿಕ್ಕಿ ಹೊಡೆದು ಟಾಟಾ ಗೂಡ್ಸ್ ವಾಹನ ಚಾಲಕನಿಗೆ ಗಾಯಗಳಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಎ.24 ರಂದು ರಾತ್ರಿ ನಡೆದಿದೆ.

ಎ.24 ರಂದು ರಾತ್ರಿ ಬೆಳ್ತಂಗಡಿ ತಾಲೂಕು ಸುಲ್ಕೇರಿ ಗ್ರಾಮದ ಸುಲ್ಕೇರಿ ನರ್ಸರಿ ಬಳಿ ಗುರುವಾಯನಕೆರೆ – ನಾರಾವಿ – ಕಾರ್ಕಳ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಗುರುವಾಯನಕೆರೆ ಕಡೆಯಿಂದ ಈಚರ್ ಲಾರಿಯ ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಒಮ್ಮೇಲೆ ರಸ್ತೆಯ ಬಲಬದಿಗೆ ಚಲಾಯಿಸಿ ನಾರಾವಿ ಕಡೆಯಿಂದ ಗಣೇಶ್ ಗೌಡ ರವರು ಚಲಾಯಿಸಿಕೊಂಡು ಬರುತ್ತಿದ್ದ ಟಾಟಾ 407 ಗೂಡ್ಸ್ ವಾಹನ ಕ್ಕೆ ಬಲಬದಿ ಚಾಲಕನ ಡೋರ್‌ ಬಳಿಗೆ ರಭಸದಿಂದ ಡಿಕ್ಕಿ ಹೊಡೆದು ಅಪಘಾತ ಉಂಟುಮಾಡಿ ಬಳಿಕ ಈಚರ್ ಲಾರಿ ಚಾಲಕ ವಾಹನದೊಂದಿಗೆ ಪರಾರಿಯಾಗಿದ್ದು, ಅಪಘಾತದಿಂದ ಗಣೇಶ್ ಗೌಡ ರವರ ವಾಹನ ಜಖಂಗೊಂಡಿದ್ದು, ಗಣೇಶ್ ಗೌಡ ರವರ ಸೊಂಟಕ್ಕೆ, ಬಲಕಾಲಿಗೆ ಗುದ್ದಿದ ಗಾಯಗಳಾಗಿ ಉಜಿರೆ ಬೆನಕ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿರುತ್ತಾರೆ.

ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಕೆ. ವಸಂತ ಬಂಗೇರ ನಿಧನಕ್ಕೆ ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್ ಹಾಗೂ ಬಿಷಪ್ ಲಾರೆನ್ಸ್ ಮುಕ್ಕುಯಿ ರವರಿಂದ ಅಂತಿಮ ನಮನ

Suddi Udaya

ಕುವೆಟ್ಟು ಸ.ಉ.ಹಿ.ಪ್ರಾ.ಶಾಲೆಯಲ್ಲಿ ಮೆಟ್ರಿಕ್ ಮೇಳ

Suddi Udaya

ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾದ ಬುರುಡೆ ಚಿನ್ನಯ್ಯ

Suddi Udaya

ಅರ್ಕಜೆ ನಿವಾಸಿ ಆನಂದ ಪೂಜಾರಿ ನಿಧನ

Suddi Udaya

ಡಿ.27: ಮಾದಕ ವ್ಯಸನ ಮತ್ತು ಮದುವೆ ಅನಾಚಾರ ಸಾಮಾಜಿಕ ಪಿಡುಗಿನ ವಿರುದ್ಧ ಜಾಗೃತಿ ಸಭೆ

Suddi Udaya

ಮಲೆಬೆಟ್ಟು: ಬದಿನಡೆ ಶ್ರೀ ವನದುರ್ಗಾ ದೇವಿಯ ಸನ್ನಿಧಿಯಲ್ಲಿ ಸಿಂಧೂರ’ ವಿಜಯೋತ್ಸವ ಪ್ರಯುಕ್ತ ವಿಶೇಷ ಪೂಜೆ

Suddi Udaya
error: Content is protected !!