ಸುಲ್ಕೇರಿ: ಸುಲ್ಕೇರಿ ನರ್ಸರಿ ಬಳಿ ಟಾಟಾ ಗೂಡ್ಸ್ ವಾಹನಕ್ಕೆ ಈಚರ್ ಲಾರಿ ಡಿಕ್ಕಿ ಹೊಡೆದು ಟಾಟಾ ಗೂಡ್ಸ್ ವಾಹನ ಚಾಲಕನಿಗೆ ಗಾಯಗಳಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಎ.24 ರಂದು ರಾತ್ರಿ ನಡೆದಿದೆ.

ಎ.24 ರಂದು ರಾತ್ರಿ ಬೆಳ್ತಂಗಡಿ ತಾಲೂಕು ಸುಲ್ಕೇರಿ ಗ್ರಾಮದ ಸುಲ್ಕೇರಿ ನರ್ಸರಿ ಬಳಿ ಗುರುವಾಯನಕೆರೆ – ನಾರಾವಿ – ಕಾರ್ಕಳ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಗುರುವಾಯನಕೆರೆ ಕಡೆಯಿಂದ ಈಚರ್ ಲಾರಿಯ ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಒಮ್ಮೇಲೆ ರಸ್ತೆಯ ಬಲಬದಿಗೆ ಚಲಾಯಿಸಿ ನಾರಾವಿ ಕಡೆಯಿಂದ ಗಣೇಶ್ ಗೌಡ ರವರು ಚಲಾಯಿಸಿಕೊಂಡು ಬರುತ್ತಿದ್ದ ಟಾಟಾ 407 ಗೂಡ್ಸ್ ವಾಹನ ಕ್ಕೆ ಬಲಬದಿ ಚಾಲಕನ ಡೋರ್ ಬಳಿಗೆ ರಭಸದಿಂದ ಡಿಕ್ಕಿ ಹೊಡೆದು ಅಪಘಾತ ಉಂಟುಮಾಡಿ ಬಳಿಕ ಈಚರ್ ಲಾರಿ ಚಾಲಕ ವಾಹನದೊಂದಿಗೆ ಪರಾರಿಯಾಗಿದ್ದು, ಅಪಘಾತದಿಂದ ಗಣೇಶ್ ಗೌಡ ರವರ ವಾಹನ ಜಖಂಗೊಂಡಿದ್ದು, ಗಣೇಶ್ ಗೌಡ ರವರ ಸೊಂಟಕ್ಕೆ, ಬಲಕಾಲಿಗೆ ಗುದ್ದಿದ ಗಾಯಗಳಾಗಿ ಉಜಿರೆ ಬೆನಕ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿರುತ್ತಾರೆ.
ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.