ಬೆಳ್ತಂಗಡಿ: ಖಾಸಗಿ ಕಾಲೇಜ್ ವಿದ್ಯಾರ್ಥಿನಿಯೊಬ್ಬಳಿಗೆ ಮೆಸೇಜ್ ಮಾಡಿ ಅಸಭ್ಯವಾಗಿ ವರ್ತಿಸಿದ ಪ್ರಕರಣ ಸಂಬಂಧಿಸಿದಂತೆ ಏ.26 ರಂದು ವಾಲಿಬಾಲ್ ಆಟಗಾರ ಸಯ್ಯದ್(24) ಮೇಲೆ ಉಜಿರೆಯ ಹಿಂದೂ ಸಂಘಟನೆ ಕಾರ್ಯಕರ್ತರು ಏ.26 ರಂದು ಮಧ್ಯಾಹ್ನ ತಡೆದು ನಿಲ್ಲಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಈ ಪ್ರಕರಣ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಹಲ್ಲೆಗೊಳಾಗದ ಸಯ್ಯದ್ ಉಜಿರೆಯ ಮನೋಜ್, ಪ್ರಜ್ವಲ್ ಕೆವಿ ಗೌಡ ಹಾಗೂ ಇತರರ ಮೇಲೆ ಏ.26 ರಂದು ದೂರು ನೀಡಿದ್ದು ಅದರಂತೆ ಪ್ರಕರಣ ದಾಖಲಾಗಿದೆ.