ತೆಕ್ಕಾರು: ತೆಕ್ಕಾರು ದೇವರಗುಡ್ಡೆ ಭಟ್ರಬೈಲು ದೇವಸ್ಥಾನದ ಬ್ರಹ್ಮಕಲಶೋತ್ಸವ ಅಂಗವಾಗಿ ಹಸಿರು ಹೊರೆ ಕಾಣಿಕೆ ಸಮರ್ಪಣೆ ಮೆರವಣಿಗೆ ಎ. 27 ರಂದು ನಡೆಯಿತು.

ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಾಸ್ಥಾನದ ಮುಂಭಾಗದಲ್ಲಿ ಉದ್ಯಮಿ ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ನಾರಿಕೇಳ ಹೊಡೆಯುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ತೆಕ್ಕಾರು ಬ್ರಹ್ಮಕಲಶೋತ್ಸವ ಎ.25 ರಿಂದ ಮೇ 3 ವರೆಗೆ ನಡೆಯಲಿದೆ. ಪ್ರತಿದಿನ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ರಂಗೇರಲಿದೆ ಶ್ರೀ ಕ್ಷೇತ್ರ ತೆಕ್ಕಾರು ಬ್ರಹ್ಮಕಲಶ.

ಸಹಸ್ರಲಿಂಗೇಶ್ವರ ದೇವಾಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ , ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಕರುಣಾಕರ ಸುವರ್ಣ, ಉಪ್ಪಿನಂಗಡಿ ಶ್ರಿ ರಾಮ ಶಾಲೆ ಸಂಚಾಲಕ ಯು ಜಿ.ರಾಧಾ, ಇಳಂತಿಲ ಕೇಶವ ಶಿಶು ಮಂದಿರ ಕಾರ್ಯದರ್ಶಿ ರವಿ ಇಳಂತಿಲ , ತಣ್ಣೀರುಪಂತ ಪ್ಯಾಕ್ಸ್ ಅಧ್ಯಕ್ಷ ಜಯಾನಂದ ಕಲ್ಲಾಪು, ಬನ್ನೆಂಗಳ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಗುಣಾಕರ ಅಗ್ನಾಡಿ, ಪ್ರಮುಖರಾದ ಲಕ್ಷ್ಮಣ ಅಜಿರ, ಹೊರೆ ಕಾಣಿಕೆ ಸಮಿತಿ ಸಂಚಾಲಕ ತಿಲಕ್ ರಾಜ್ ವಿದ್ಯಾಪುರ, ಸಹ ಸಂಚಾಲಕ ಸತೀಶ್ ಬೇನಪ್ಪು ಮತ್ತು ಮೊದಲಾದವರು ಉಪಸ್ಥಿತರಿದ್ದರು.