April 28, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕೊರಿಂಜ: ಯೋಗ ತರಬೇತಿ ಶಿಬಿರದ ಪೂರ್ವಭಾವಿ ಸಭೆ

ಕೊರಿಂಜ: ಕೊರಿಂಜ ಶ್ರೀ ಪಂಚಲಿಂಗೇಶ್ವರ ಸಭಾ ಭವನದಲ್ಲಿ ಯೋಗ ತರಬೇತಿ ನಡೆಸುವ ಬಗ್ಗೆ ಪೂರ್ವ ಭಾವಿ ಸಭೆಯು ಎ.27 ರಂದು ನಡೆಯಿತು.

ಗುರುದೇವ ಶ್ರೀ ರವಿಶಂಕರ ಜಿ. ಯವರ ಸುದರ್ಶನ ಕ್ರಿಯೆಯ ಬಗ್ಗೆ ಭೌತಿಕ ಕ್ರಿಯೆಯ ಪ್ರಯೋಜನ ದ ಬಗ್ಗೆ ಅವರ ಶಿಷ್ಯೆ ಕಲಾ ಕಾಸರಗೋಡು ಇವರು ಮಾರ್ಗದರ್ಶನ ನೀಡಿದರು.

ಸಭೆಯಲ್ಲಿ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಯೋಗೀಶ್ ಪೂಜಾರಿ ಕಡ್ತಿಲ ಮಾತನಾಡಿ ಮೇ 13 ರಿಂದ 20 ರವರಗೆ ಸಂಜೆ 6ರಿಂದ 8.30 ತನಕ ಪಂಚಲಿಂಗೇಶ್ವರ ಸಭಾಭವನದಲ್ಲಿ ನಡೆಯುವ ಶಿಬಿರದಲ್ಲಿ ಭಾಗವಹಿಸಿ ಆರೋಗ್ಯ ವೃದ್ಧಿಸುವ ಪ್ರಯೋಜನ ಪಡೆದುಕೊಳ್ಳಲು ಕರೆ ನೀಡಿದರು.

ಈ ಸಂದರ್ಭದಲ್ಲಿ ಧ.ಗ್ರಾ. ಯೋಜನೆಯ ನಿವೃತ್ತ ಮೇಲ್ವಿಚಾರಕಿ ಶ್ರೀಮತಿ ವಾರಿಜ ವಿ. ಶೆಟ್ಟಿ ಕೊರಿಂಜ ಉಪಸ್ಥಿತರಿದ್ದರು.

ಉರುವಾಲು ವಿಭಾಗದ ಸೇವಾಪ್ರತಿನಿಧಿ ಸೀತಾರಾಮ ಆಳ್ವ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ವಿ.ಸೂ: ಯೋಗ ಶಿಬಿರದಲ್ಲಿ ಭಾಗವಹಿಸುವವರು ದೂರವಾಣಿ ಸಂಖ್ಯೆ 9448061006 ಸಂಪರ್ಕಿಸಿ.

Related posts

ಎಸ್ ಎಸ್ ಎಲ್ ಸಿ ಫಲಿತಾಂಶ: ಕಾಶಿಪಟ್ಣ ಸರಕಾರಿ ಪ್ರೌಢಶಾಲೆಗೆ ಶೇ.100 ಫಲಿತಾಂಶ

Suddi Udaya

ಧರ್ಮಸ್ಥಳ: ಗ್ರಾಮಾಭಿವೃದ್ದಿ ಯೋಜನೆ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ನಿಂದ “ಜನಜಾಗೃತಿ ವೇದಿಕೆಯ ಸರ್ವಸದಸ್ಯರ ಸಮಾವೇಶ”

Suddi Udaya

ಗೋವಿಂದೂರು: ರಸ್ತೆಗೆ ಬಿದ್ದ ಬೃಹತ್ ಗಾತ್ರದ ಮರ

Suddi Udaya

ಸೌತಡ್ಕ ಮಹಾಗಣಪತಿ ದೇವಸ್ಥಾನ: ವ್ಯವಸ್ಥಾಪನಾ ಸಮಿತಿಯ 9 ಸದಸ್ಯ ಸ್ಥಾನಕ್ಕೆ 28 ಮಂದಿ ಅರ್ಜಿ

Suddi Udaya

ಪುದುವೆಟ್ಟು ಶಾಲೆಯಲ್ಲಿ ವಿಜ್ಞಾನ ಮಾದರಿಗಳ ತಯಾರಿಕಾ ಕಾರ್ಯಗಾರ

Suddi Udaya

ಬೆಳ್ತಂಗಡಿ : ಹುಣ್ಸೆಕಟ್ಟೆ ಕಾರ್ಯಕ್ಷೇತ್ರದ “ನಂದಗೋಕುಲ” ಸ್ವ-ಸಹಾಯ ಸಂಘದ ರಚನೆ

Suddi Udaya
error: Content is protected !!